ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ | Mysuru Dasara 2019

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ


ಮೈಸೂರು ದಸರಾ ಮೆರವಣಿಗೆಯು ಜಂಬೂ ಸವಾರಿಯೆಂದೂ ಸಹ ಪ್ರಖ್ಯಾತವಾಗಿದೆ. ದಸರಾ ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ಮೈಸೂರಿನ ಪ್ರಮುಖ ಬೀದಿಗಳಲ್ಲಿ ವಿಶೇಷವಾಗಿ ಅಲಂಕೃತಗೊಂಡಿರುವ ಆನೆಗಳ ಮೆರವಣಿಗೆ, ಈ ದಿನದ ಮುಖ್ಯ ಆಕರ್ಷಣೆಯಾಗಿರುತ್ತದೆ. ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯು, ಚಿನ್ನದ ಪಲ್ಲಕ್ಕಿಯಲ್ಲಿ, ಗಜರಾಜನ ಮೇಲೆ ರಾರಾಜಿಸಿತ್ತಾ, ಪ್ರಪಂಚದೆಲ್ಲೆಡೆಯಿಂದ ಬಂದಿರುವ ಜನಸಾಗರಕ್ಕೆ ದರ್ಶನವನ್ನು ನೀಡಿ ಆಶೀರ್ವದಿಸುತ್ತಾಳೆ. ಹಲವಾರು ಕಲಾವಿದರೂ ಕೂಡಿರುವ ಈ ಮೆರವಣಿಗೆಯು ಬಹಳಷ್ಟು ಸಂಸ್ಕೃತಿಗಳನ್ನು ಒಮ್ಮೆಯೇ ವೀಕ್ಷಿಸುವಂತಹ ವಿಶೇಷ ಅವಕಾಶವಾಗಿದೆ. ಮೈಸೂರು ಅರಮನೆಯಿಂದ ಪ್ರಾರಂಭವಾಗುವ ಈ ಭವ್ಯ ಮೆರವಣಿಗೆ ಬನ್ನಿ ಮಂಟಪದಲ್ಲಿ ಅಂತ್ಯಗೊಳ್ಳುತ್ತದೆ. ಮೈಸೂರು ದಸರಾ ಮೆರವಣಿಗೆಯ ವೀಕ್ಷಕರಿಗೆ ನೂರಾರು ವರ್ಷಗಳ ಸಂಸ್ಕೃತಿ ಮತ್ತು ಇತಿಹಾಸದ ಪರಿಚಯವೂ ಕೂಡ ಆಗುತ್ತದೆ