Dasara Film Festival | Mysuru Dasara 2019
  • ದಿನಾಂಕ : 20-09-2019 ಶುಕ್ರವಾರ ಬೆಳಗ್ಗೆ 10:30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಮಾನ್ಯ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕಾರ್ಯಾಗಾರದ ಉದ್ಘಾಟನೆ ನೆರೆವೇರಿಸುವರು. ಈ ಕಾರ್ಯಕ್ರಮದಲ್ಲಿ ಶಾಸಕರುಗಳು ಸಂಸದರು ಹಾಗೂ ಇತರ ಗಣ್ಯರು ಭಾಗವಹಿಸುವರು. ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಲನಚಿತ್ರ ನಿರ್ದೇಶಕರಾದ ಶ್ರೀ ಪಿ.ಶೇಷಾದ್ರಿ ಅವರು ಈ ಕಾರ್ಯಾಗಾರದ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸುವರು. ಇವರಲ್ಲದೆ, ಇನ್ನೂ ಅನೇಕ ಹೆಸರಾಂತ ನಿರ್ದೇಶಕರು, ಲೇಖಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ.
  • ಸೆ. 20 ರಂದು ಬೆಳಗ್ಗೆ 11:45 ರಿಂದ ಮಧ್ಯಾಹ್ನ 1:30 ರವರಗೆ ‘ಕಥೆ ಮತ್ತು ಚಿತ್ರಕಥೆಯ ಸ್ವರೂಪ’ ವಿಷಯ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಮೊದಲ ಗೋಷ್ಠಿ ನಡೆಸಿಕೊಡುವರು. ಅಂದು ಮಧ್ಯಾಹ್ನ 2:30 ರಿಂದ ಸಂಜೆ 5:00 ರವರಗೆ ‘ಸಾಹಿತ್ಯದಿಂದ ಸಿನಿಮಾ’ ವಿಷಯ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಬಿ.ಎಸ್.ಲಿಂಗದೇವರು ಅವರು ಉಪನ್ಯಾಸ ನೀಡುವರು.
  • ಎರಡನೇ ದಿನವಾದ ಸೆ. 21 ರಂದು ಶನಿವಾರ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ ‘ಚಿತ್ರಕಥೆಯ ವಿನ್ಯಾಸ ಮತ್ತು ಸಿನಿಮಾ ಭಾಷೆ’ ವಿಷಯ ಕುರಿತು ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಆದರ್ಶ ಈಶ್ವರಪ್ಪ ಅವರು ಉಪನ್ಯಾಸ ನೀಡುವರು. ಮಧ್ಯಾಹ್ನ 2:30 ರಿಂದ ಸಂಜೆ 5:00 ರವರಗೆ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಬಿ.ಸುರೇಶ ಅವರು ‘ಚಿತ್ರಕಥೆ-ಸಂಭಾಷಣೆ ರಚಿಸುವ ಕ್ರಮ’ ವಿಷಯ ಕುರಿತು ಉಪನ್ಯಾಸ ನೀಡುವರು.
  • ಕಾರ್ಯಾಗಾರದ ಕೊನೆಯ ದಿನವಾದ ಸೆಪ್ಟೆಂಬರ್ 22 ಭಾನುವಾರ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:30 ರವರಗೆ ‘ಚಿತ್ರಕಥೆ – ಪ್ರಾಯೋಗಿಕ ರಚನೆ’ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯ ವರಗೆ ‘ಕಥೆ – ಚಿತ್ರಕಥೆ ಅನುಸಂಧಾನ’ ವಿಷಯಗಳ ಗೋಷ್ಠಿಗಳು ಇರುತ್ತವೆ. ಈ ಗೋಷ್ಠಿಗಳಲ್ಲಿ ಸಾಹಿತಿ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರು ಉಪನ್ಯಾಸ ನೀಡುವರು. ಶ್ರೀ ಪಿ.ಶೇಷಾದ್ರಿ ಅವರು ಸಹ ಗೋಷ್ಠಿಗಳಲ್ಲಿ ಭಾಗವಹಿಸುವರು.
  • ಅಲ್ಲದೇ ಕಿರು ಚಿತ್ರಗಳ ಸ್ಪರ್ಧೆ ಆಯೋಜಿಸಿದ್ದು, 5 ನಿಮಿಷಗಳ ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರು ಚಲನಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯತ್ತಮ ಚಿತ್ರಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವ ಸಲ್ಲಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸ್ವಂತ ನಿರ್ಮಾಣದ ಕಿರು ಚಲನಚಿತ್ರಗಳನ್ನು ಸಿ.ಡಿ.ಯಲ್ಲಿ ಅಳವಡಿಸಿ 2019ರ ಸೆಪ್ಟಂಬರ್ 25ರ ಬುಧವಾರ ಸಂಜೆ 5.00 ಗಂಟೆಯೊಳಗಾಗಿ ಸಿ.ಡಿ.ಯನ್ನು ಉಪನಿರ್ದೇಶಕರ ಕಚೇರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳುವುದು ಎಂದು ತಿಳಿಸಿದರು. ಕಿರು ಚಲನಚಿತ್ರಗಳ ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಡಾ. ರಾಘವೇಂದ್ರ ಎಸ್.ಜಿ. ದೂರವಾಣಿ ಸಂಖ್ಯೆ 9964585008 ಸಂಪರ್ಕಿಸಲು ಕೋರಿದೆ.
  • ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸುವ ಚಲನಚಿತ್ರೋತ್ಸವದ ಪ್ರದರ್ಶನಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಐದು ದಿನಗಳ ಕಾಲ ನಡೆಯಲಿವೆ. ಇದರ ಉದ್ಘಾಟನಾ ಕಾರ್ಯಕ್ರಮ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ದಿನಾಂಕ: 29-9-2019 ರಂದು ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ.
  • ಚಲನಚಿತ್ರ ಪ್ರದರ್ಶನ: ದಿನಾಂಕ: 29-09-2019 ರಿಂದ ದಿನಾಂಕ: 03-10-2019 ರವರಗೆ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕನ್ನಡದ ಸಿನಿಮಾಗಳು ಸೇರಿದಂತೆ ಜನಪ್ರಿಯ ಕನ್ನಡ ಸಿನಿಮಾ, ಕಲಾತ್ಮಕ ಸಿನಿಮಾಗಳು, ರಾಷ್ಟ್ರ ಮಟ್ಟದಲ್ಲಿ ಜನಪ್ರಿಯಗೊಂಡಿರುವ ಭಾರತೀಯ ಸಿನಿಮಾಗಳು, ವಿವಿಧ ದೇಶಗಳಲ್ಲಿ ನಿರ್ಮಾಣಗೊಂಡ ವಿಶ್ವದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ದಸರಾ ಚಲನಚಿತ್ರೋತ್ಸವಕ್ಕೆ ನೋಂದಣಿ ಆರಂಭ

ಮೈಸೂರು ದಸರಾ ಮಹೋತ್ಸವ-2019 ರ ಅಂಗವಾಗಿ ಐನಾಕ್ಸ್ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಹಮ್ಮಿಕೊಳ್ಳಲಾಗಿರುವ ದಸರಾ ಚಲನಚಿತ್ರೋತ್ಸವಕ್ಕೆ ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದ್ದು, ಸೆಪ್ಟೆಂಬರ್ 28 ರವರೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಣಿ ಮಾಡಲಾಗುವುದು.

ವಲ್ರ್ಡ್ (world) ಸಿನಿಮಾ ಮತ್ತು ಕನ್ನಡ ಸಿನಿಮಾಗಳನ್ನು ಐನಾಕ್ಸ್ 3 ಸ್ಕ್ರೀನ್‍ಗಳಲ್ಲಿ ಪ್ರದರ್ಶಿಸಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಲ್ರ್ಡ್(world) ಸಿನಿಮಾ ಸ್ಕ್ರೀನ್‍ಗೆ ಪ್ರವೇಶವಿರುತ್ತದೆ.

ದಸರಾ ಚಲನಚಿತ್ರೋತ್ಸವಕ್ಕೆ ನೋಂದಣಿ ಮಾಡಿಕೊಳ್ಳುವವರು ವಯೋಮಿತಿ ದಾಖಲಾತಿಗಾಗಿ ಆಧಾರ್ ಕಾರ್ಡ್/ಮತದಾನ ಗುರುತಿನ ಚೀಟಿ/ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಅಥವಾ ಇತರೆ ಯಾವುದಾದರೂ ಒಂದು ದಾಖಲಾತಿಯ ಜೆರಾಕ್ಸ್ ಪ್ರತಿ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸುವುದು.

ನೋಂದಣಿ ಶುಲ್ಕ ರೂ.400/- (ನಾಲ್ಕು ನೂರು ರೂ.) ಗಳಾಗಿರುತ್ತದೆ. ವಿದ್ಯಾರ್ಥಿಗಳಿಗೆ ರೂ.200/- ಗಳಾಗಿದ್ದು, ಕಾಲೇಜಿನ ಗುರುತಿನ ಚೀಟಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448092049 ಸಂಪರ್ಕಿಸುವುದು.

To Download the Invitation : Click Here 

Venue

Vijnaan Bhavan, Manasa Gangothiri, Mysuru

Google Map

Date :

29th September to 4th October 2019

Gallery

Video

Last Year Award Winning Films