ಸುವ್ಯವಸ್ತಿತ ವಸ್ತುಪ್ರದರ್ಶನ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ | Mysuru Dasara 2019

ಸುವ್ಯವಸ್ತಿತ ವಸ್ತುಪ್ರದರ್ಶನ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ

ಮೈಸೂರು ಆ.26: ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಿ. ರಂದೀಪ್ ಸೋಮವಾರ ತಮ್ಮ ಕಚೇರಿಯಲ್ಲಿ ಕರ್ನಾಟಕ ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ತೆರೆಯುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಈ ಬಾರಿ ವಸ್ತುಪ್ರದರ್ಶನ ಅಚ್ಚುಕಟ್ಟಾಗಿ ನಡೆಸಲು ಸ್ವತಃ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ವಿಶೇಷ ಗಮನ ನೀಡಿದ್ದಾರೆ ಮತ್ತು ಈಗಾಗಲೆ ವಸ್ತು ಪ್ರದರ್ಶನ ಆವರಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಧಿಕಾರಿಗಳು ತಮ್ಮ ಇಲಾಖೆಯ ಮಳಿಗೆಗಳನ್ನು ಸೆಪ್ಟಂಬರ್ 19 ರೊಳಗೆ ಸಂಪೂರ್ಣ ಸಿದ್ಧಗೊಳಿಸಲು ಸೂಚಿಸಿದರು.

ಯೂವುದೆ ಇಲಾಖೆಯವರು ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಅಂತಹ ಇಲಾಖೆಯನ್ನು ಸ್ಪರ್ಧೆಗೆ ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿದರು. ಹಾಗೆಯೆ ರಚನಾತ್ಮಕ ಮಳಿಗೆಗೆ ಒತ್ತುನೀಡುವಂತೆ, ಇಲಾಖೆಗಳ ಫ್ಲೆಕ್ಸ್ ಗಳು ಮತ್ತು ಮಾಹಿತಿ ಫಲಕಗಳನ್ನು ಪ್ರದರ್ಶನದಲ್ಲಿ ಇಡದಂತೆ ಮತ್ತು ಅಂತಹ ಇಲಾಖೆಯವರು ಪ್ರದರ್ಶನದಿಂದ ದೂರ ಉಳಿಯುವಂತೆ ದಿಟ್ಟ ನಿಲುವು ವ್ಯಕ್ತಪಡಿಸಿದರು.

ಇಲಾಖೆಗಳು ತಮ್ಮ ಹಣಕಾಸಿನ ಪರಿಮಿತಿಯಲ್ಲಿ ಉತ್ತಮ ಮತ್ತು ಮಾಹಿತಿಪೂರ್ಣ ವಸ್ತುಪ್ರದಶನ ನಡೆಸುವಂತೆ ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಎಂ. ಶಶಿಕುಮಾರ್ ಮಾತನಾಡಿ 28 ವಿವಿಧ ಇಲಾಖೆಗಳು ಹಾಗೂ ನಿಗಮ, ಮಂಡಳಿಗಳಿಂದ ಮಳಿಗೆ ಆಯೋಜಿಸುವ ಕುರಿತು ಅರ್ಜಿಗಳು ಬಂದಿದ್ದು, ಪ್ರಾಧಿಕಾರ ಸೂಕ್ತ ಸ್ಥಳಾವಕಾಶ ನೀಡುತ್ತಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹೆಚ್. ಪಿ. ಜನಾರ್ಧನ್, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಉಪನಿರ್ದೇಶಕ ಗವಿಸಿದ್ಧಯ್ಯ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್. ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ. ರಾಧ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಧ್ಯಾಧಿಕಾರಿ ಬಿ. ಬಸವರಾಜು ಮತ್ತು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪಿ.ಎಂ. ಪ್ರಸಾದ್ ಮೂರ್ತಿ ಸಭೆಯಲ್ಲಿ ಇದ್ದರು.