ಸಂಗಮ | Mysuru Dasara 2019

ಈ ಮನಮೋಹಕವಾದ ಗೋರಿಯು ಗ್ರಾನೈಟಿನ ಚಾವಣಿ, ಕೆತ್ತನೆಗಳಿಂದ ಕೂಡಿದ ಗೋಡೆಗಳು ಮತ್ತು ಟಿಪ್ಪು ಹಾಗು ಹೈದರಾಲಿಯರು ಮೈಸೂರನ್ನು ಆಳಿದ್ದನ್ನು ಪ್ರದರ್ಶಿಸುವ 36 ಮನೋಹರವಾದ ಗ್ರಾನೈಟ್ ಸ್ತಂಭಗಳನ್ನು ಹೊಂದಿದೆ. 220 ವರ್ಷ ಹಳೆಯದಾದ ಈ ಕೋಟೆಯು ಒಂದು ಎತ್ತರವಾದ ಜಗಲಿಯ ಮೇಲೆ ಕಟ್ಟಲ್ಪಟ್ಟಿದ್ದು, ಇಂಡೋ –ಇಸ್ಲಾಮಿಕ್ ವಾಸ್ತುಶೈಲಿಯನ್ನು ಹೊಂದಿದೆ. ಈ ಗುಂಬಾಜಿ ಬಾಗಿಲುಗಳನ್ನು ಎಬೋನಿ ಮರದಿಂದ ಮಾಡಲಾಗಿದ್ದು, ಅವುಗಳನ್ನು ದಂತದಿಂದ ಅಲಂಕರಿಸಲಾಗಿದೆ. ಇವುಗಳನ್ನು ಲಾರ್ಡ್ ಡಾಲ್ ಹೌಸಿ ನೀಡಿದನಂತೆ. ಬ್ರಿಟೀಷರು ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ ಇಲ್ಲಿ ಇದ್ದ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಮೂರು ಬಾಗಿಲುಗಳನ್ನು ಲಂಡನ್ ಗೆ ಸಾಗಿಸಿದರು. ಪ್ರಸ್ತುತ ಅವುಗಳನ್ನು ಲಂಡನ್ನಿನ ಆಲ್ಬಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಇಲ್ಲಿನ ಒಳ ಗೋಡೆಗಳಲ್ಲಿ ಹೊಂಬಣ್ಣದ ಹುಲಿಯ ಪಟ್ಟೆಗಳು ಹಾಗು ಜೊತೆಗೆ ಮೊಗಸಾಲೆಯಲ್ಲಿ ಕಪ್ಪು ಸ್ತಂಭಗಳನ್ನು ಕಾಣಬಹುದು. ಈ ಸ್ಮಾರಕದ ಆವರಣದಲ್ಲಿ ರಂಗನಾಥಸ್ವಾಮಿ ಮತ್ತು ಜುಮ ಮಸೀದಿಗಳು ಇವೆ. ಈ ಸ್ಥಳವು ಪ್ರಶಾಂತವಾದ ಉದ್ಯಾನವನ್ನೊಳಗೊಂಡಿದೆ ಇದ್ದಕ್ಕೆ ಹೊಂದಿಕೊಂಡಂತೆ ಮಸ್ಜಿದ್ –ಇ – ಅಕ್ಸ ಎಂಬ ಮಸೀದಿಯಿದೆ.

ವಿಳಾಸ:

ತ್ರಿವೇಣಿ ಸಂಗಮ, ಕಾವೇರಿ ಸಂಗಮ್, ಶ್ರೀರಂಗಪಟ್ಟಣ, ಕರ್ನಾಟಕ