ಶ್ರೀ ರಂಗನಾಥಸ್ವಾಮಿ ದೇವಾಲಯ | Mysuru Dasara 2019

ಶ್ರೀರಂಗಪಟ್ಟಣದ ಅತ್ಯಂತ ಆಕರ್ಷಕ ಪ್ರವಾಸಿ ಸ್ಥಳ ಹಾಗೂ ಪೌರಣಿಕ ಕೇಂದ್ರವೆಂದರೆ ಸುಪ್ರಸಿದ್ದ “ಶ್ರೀರಂಗನಾಥ ಸ್ವಾಮಿಯವರ ದೇವಾಲಯ” ಶ್ರೀರಂಗನಾಥ ಸ್ವಾಮಿಯವರ ದೇವಾಲಯವೂ ವಿಶಾಲವಾದ ಪ್ರದೇಶದಲ್ಲಿ ಬಹಳ ವಿಸ್ತಾರವಾಗಿ ಮೂರು ಹಂತ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿರುತ್ತದೆ. ಶ್ರೀರಂಗನಾಥ ಸ್ವಾಮಿಯವರ ದೇವಾಲಯ ಗರ್ಭಗುಡಿಯು ಕ್ರಿ.ಶ 894ರಲ್ಲಿ ಗಂಗರ  ಮುಖ್ಯಸ್ಥ ಶ್ರೀ ತಿರುಮಲಯ್ಯ ಎಂಬುವವರಿಂದ ನಿರ್ಮಿಸಲ್ಪಟ್ಟಿತ್ತೆಂದು ತಿಳಿಸುತ್ತದೆ. ಇತಿಹಾಸ ಆನಂತರ ವಿಜಯನಗರದ ಅರಸರ ಕಾಲದಲ್ಲಿ ನವರಂಗ ಮುಖಮಂಟಪ, ದೇವಾಲಯದ ರಾಜಗೋಪುರವು ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ ಮೂರನೇ ಹಂತ ಪಾತಾಳಂಕಣದ ಮುಂದಿನ ಭಾಗ ಜನಾಬಗ ಹೈದರಾಲಿಯವರ ಕಾಲದಲ್ಲಿ ಗರ್ಭಗುಡಿಗೆ ಸೇರಿದಂತೆ ಸುತ್ತು ಶ್ರೀ ವಿಷ್ಣುವಿನ ವಿವಿಧ ಅವತಾರದ ಸುಂದರ ವಿಗ್ರಹಗಳ ಗುಡಿಗಳಲ್ಲದೇ ರಾಮಾನುಜಾಚಾರ್ಯರು, ಶ್ರೀ ವೇದಂತ ದೇಶಿಕರು ಹಾಗೂ ಶ್ರೀ ಜೀಯರ್ ರವರ ಗುಡಿಗಳಿಲ್ಲದೆ ವಿವಿಧ ಆಳ್ವಾರರ ಗುಡಿಗಳೂ ಸಹ ಇವೆ. ಶ್ರೀರಂಗನಾಥ ಸ್ವಾಮಿಯವರ ಗರ್ಭಗುಡಿಯ ಪಕ್ಕದಲ್ಲಿ ಶ್ರೀ ಮಹಾಲಕ್ಷೀ ಅಮ್ಮನವರು ಶ್ರೀರಂಗನಾಯಕಿ ನಾಮಕಿಂತ ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುತ್ತಾರೆ .

ಶ್ರೀರಂಗನಾಥ ಸ್ವಾಮಿಯವರ ದೇವಾಲಯವನ್ನು ಪೌರಾಣಿಕ ಹಿನ್ನೆಲೆಯಿಂದ ಗಮನಿಸಿದಾಗ ಶ್ರೀರಂಗ ಕ್ಷೇತ್ರ ಸುತ್ತಲೂ ಹರಿಯುವ ಕಾವೇರಿ ಮಾತೆಯ ಪ್ರಾರ್ಥನೆಯ ಮೇರೆಗೆ ಹಾಗೂ ಶ್ರೀ ಗೌತಮ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶ್ರೀಮಹಾ ವಿಷ್ಣುವು ಶ್ರೀರಂಗನಾಥ ನಾಮಂಕಿರಾಗಿ ಈ ಕ್ಷೇತ್ರದಲ್ಲಿ ನೆಲೆಸಿರುವುದಾಗಿ ಶ್ರೀ ವ್ಯಾಸ ಮಹರ್ಷಿ ಪ್ರಣೀತ ಶ್ರೀ ಬ್ರಹ್ಮಾಂಡ ಪುರಣಾದಲ್ಲಿ ಉಕ್ತವಾಗಿದೆ . ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟ ಮೂರು ರಂಗ ಕ್ಷೇತ್ರಗಳಲ್ಲಿ ಆದಿರಂಗ ನಾಗಿಯೂ , ಶ್ರೀಮತ್ ಪಶ್ಚಿಮ ರಂಗನಾಥನಾಗಿಯೂ . ಗೌತಮ ಕ್ಷೇತ್ರವೆಂದೂ ಸಹ ಕ್ಷೇತ್ರವನ್ನು ಕರೆಯುತ್ತಾರೆ.

ವಿಳಾಸ:

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಆದಿರಂಗ