ರೈತ ದಸರಾ | Mysuru Dasara 2019

ಅಕ್ಟೋಬರ್ 1 ರಿಂದ 3 ರವರಗೆ ರೈತ ದಸರಾ

  • ಅಕ್ಟೋಬರ್ 1 ರಿಂದ 3 ರವರಗೆ ಹಾಗೂ ಮತ್ಸ ಮೇಳವು ಅಕ್ಟೋಬರ್ 1 ರಿಂದ 7 ರವರೆಗೆ ನಗರದ ಜೆ.ಕೆ ಗ್ರೌಂಡ್ ನಲ್ಲಿ ನಡೆಯಲಿದೆ
  • ಅಕ್ಟೋಬರ್ 1 ರಂದು ಬೆಳಿಗ್ಗೆ 9-30 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ರೈತ ದಸರಾ ಮೆರವಣಿಗೆ ಹಮ್ಮಿಕೊಂಡಿದ್ದು, ಮೆರವಣಿಗೆ ಉದ್ಘಾಟನೆಯನ್ನು ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು ಉದ್ಘಾಟನೆ ಮಾಡಲಿದ್ದಾರೆ.
  • ಅಕ್ಟೋಬರ್ 1 ರಂದು ಬೆಳಿಗ್ಗೆ 10-30 ಗಂಟೆಗೆ ಜೆ.ಕೆ ಮೈದಾನದಲ್ಲಿ ಕೃಷಿ ವಸ್ತುಪ್ರದರ್ಶನ ಉದ್ಘಾಟನೆಯನ್ನು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಉದ್ಘಾಟಿಸುವರು. ಮೀನುಗಾರಿಕೆ, ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮತ್ಸ್ಯ ಮೇಳವನ್ನು ಉದ್ಘಾಟಿಸುವರು.
  • ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದಿಶ್ ಶೆಟ್ಟರ್ ಅವರು ಅಕ್ಟೋಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಕಟ್ಟಡದಲ್ಲಿ ನಡೆಯುವ ರೈತ ದಸರಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಿದ್ದು, ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ತಂಬಾಕು ಬೆಲೆಗೆ ಪರ್ಯಾಯ ಬೆಳೆ ಯೋಜನೆ ಹಾಗೂ ಸಮಗ್ರ ಕೃಷಿ ಪದ್ದತಿ-ಸುಸ್ಥಿರ ಕೃಷಿಗೆ ದಾರಿ ವಿಷಯಗಳ ಕುರಿತಂತೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಕಲಾವಿದರಿಂದ ರೈತನ ಮಕ್ಕಳು ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
  • ಅಕ್ಟೋಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ರೈತ ದಸರಾ ಕ್ರೀಡಾಕೂಟವನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ ಪಾಟೀಲ ಅವರು ಉದ್ಘಾಟಿಸಲಿದ್ದು, ಈ ಬಾರಿ 25 ವರ್ಷ ಮೇಲ್ಪಟ್ಟ ಮಹಿಳಾ ಮತ್ತು ಪುರುಷರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪುರುಷ ರೈತರಿಗೆ ಬೆಳಿಗ್ಗೆ 9 ಗಂಟೆಗೆ ವರುಣಾ ಗ್ರಾಮದಲ್ಲಿ ಕೆಸರು ಗದ್ದೆ ಓಟ ಆಯೋಜಿಸಲಾಗಿದ್ದು, ಉಳಿದ ಎಲ್ಲಾ ಸ್ಪರ್ಧೇಗಳು ಜೆ.ಕೆ ಮೈದಾನದಲ್ಲಿ ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ಬೆಳಿಗ್ಗೆ 11-30 ಗಂಟೆಗೆ ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, 12 ಗಂಟೆಗೆ ಮೂರು ಕಾಲಿನ ಓಟ ಹಾಗೂ 12-30 ಗಂಟೆಗೆ ಗುಂಡು ಎತ್ತುವ ಸ್ಪರ್ಧೆ ಹಮ್ಮಿಕೊಂಡಿದೆ. ಮಹಿಳಾ ರೈತರಿಗೆ ಬೆಳಿಗ್ಗೆ 11 ಗಂಟೆಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ಬೆಳಿಗ್ಗೆ 11-30 ಗಂಟೆಗೆ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, 12 ಗಂಟೆಗೆ ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, 12-30 ಗಂಟೆಗೆ ನೀರು ತುಂಬಿದ 3 ಮಡಿಕೆ ಹೊತ್ತು ನಡೆಯುವ ಸ್ಪರ್ಧೆ ಹಾಗೂ ಒಂಟಿ ಕಾಲಿನ ಓಟ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಕ್ಷತ್ರ ಫೌಂಡೇಷನ್ ಮೈಸೂರು ವತಿಯಿಂದ ರೈತರು ಹಾಗೂ ರೈತ ಮಹಿಳೆಯರಿಂದ ಹಿಂದಿರುಗಿ ನೋಡು ನಾಟಕ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
  • ಅಕ್ಟೋಬರ್ 3 ರಂದು ಬೆಳಿಗ್ಗೆ 6-30 ಗಂಟೆಗೆ ಹಾಗೂ ಸಂಜೆ 5-30 ಗಂಟೆಗೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಜೆ.ಕೆ. ಮೈದಾನದಲ್ಲಿ ಆಯೋಜಿಸಿಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಂದು ಸಂಜೆ 6 ಗಂಟೆಗೆ ಜೆ.ಕೆ.ಮೈದಾನದಲ್ಲಿಯೇ ಪ್ರಥಮ ಬಹುಮಾನವಾಗಿ 50,000 ದ್ವಿತೀಯ ಬಹುಮಾನವಾಗಿ 40,000, ತೃತೀಯ ಬಹುಮಾನವಾಗಿ 30,000 ಸಾವಿರ ಹಾಗೂ 4ನೇ ಬಹುಮಾನವ ವಿಜೇತರಿಗೆ 10,000 ರೂ ನಗದು ಬಹುಮಾನವನ್ನು ಪಶುಸಂಗೋಪನಾ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ವಿತರಿಸುವರು.

ಸ್ಥಳ :

ಜೆಕೆ ಮೈದಾನ

ಗೂಗಲ್ ಮ್ಯಾಪ್

ದಿನಾಂಕ :

1 ರಿಂದ 3 ಅಕ್ಟೋಬರ್ 2019

ಗ್ಯಾಲರಿ