ಯುವ ಸಂಭ್ರಮ-2017, ಸೆ. 3 ರೊಳಗೆ ಮಾಹಿತಿ ನೀಡಲು ಮನವಿ | Mysuru Dasara 2019

ಯುವ ಸಂಭ್ರಮ-2017, ಸೆ. 3 ರೊಳಗೆ ಮಾಹಿತಿ ನೀಡಲು ಮನವಿ

ಸೆ. 3 ರೊಳಗೆ ಮಾಹಿತಿ ನೀಡಲು ಮನವಿ

ಯುವ ದಸರಾ ಕಾರ್ಯಕ್ರಮದ ಮುಖ್ಯ ಭಾಗ ಯುವ ಸಂಭ್ರಮ,

ಇದು ಕಾಲೇಜು ವಿಧ್ಯಾರ್ಥಿಗಳಿಗಾಗಿಯೆ ರೂಪುಗೊಂಡ ಪ್ರತಿಭಾ ವೇದಿಕೆ.

ಯಶಸ್ವಿ ಯುವ ಸಂಭ್ರಮ ನಡೆಸಲು ಉಪಸಮಿತಿಯು ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ಥೀಮ್‍ಗಳನ್ನು ನಿಗದಿಪಡಿಸಲಾಯಿತು.

ಸ್ವಚ್ಛ ಭಾರತ ಆಂದೋಲನ, ಮಹಿಳಾ ಸಬಲೀಕರಣ (ಭೇಟಿ ಬಚಾವೋ,ಮಹಿಳಾ ಶಿಕ್ಷಣ, ಬಾಲ್ಯ ವಿವಾಹ ತಡೆಗಟ್ಟುವಿಕೆ), ರಾಷ್ಟ್ರ ಪ್ರೇಮ, ಕನ್ನಡ ಪ್ರೇಮ, ಮೈಸೂರು ಹಿರಿಮೆ/ಪಾರಂಪರಿಕ ಸಾರ್ಥಕತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಅಪರಾಧಗಳ ನಿಯಂತ್ರಣ, ವಿದೇಶಿ ವಸ್ತು ನಿಷೇಧ/ ಸ್ವದೇಶಿ ವಸ್ತುಗಳ ಬಳಕೆ, ಅಂತರ್ಜಾಲ ಅಪರಾಧಗಳು ಹಾಗೂ ಅವುಗಳ ತಡೆ, ಪರಿಸರ ಕಾಳಜಿ, ಶಾಂತಿ ಪಾಲನೆ, ರೈತನೆ ರಾಷ್ಟ್ರದ ಬೆನ್ನೆಲುಬು, ಕರ್ನಾಟಕ ಸರ್ಕಾರದ ಯೋಜನೆಗಳ ಉಪಯುಕ್ತತೆ, ಮಾದಕ ವಸ್ತುಗಳ ನಿಷೇಧ, ಕುವೆಂಪು ಜ್ಞಾನಪೀಠ ಪ್ರಶಸ್ತಿ ಸ್ವಿಕರಿಸಿ 50 ವರ್ಷಗಳಾಗಿದ್ದು ಸದರಿ ಪ್ರಶಸ್ತಿ ಬಗ್ಗೆ, ಬುದ್ಧಿಮಾಂದ್ಯ ಮಕ್ಕಳ ಸಾಧನೆಗಳ ಬಗ್ಗೆ. ಈ ಎಲ್ಲಾ ವಿಷಯಗಳ ಮೇಲೆ ಕಾಲೇಜು ವಿದ್ಯಾರ್ಥಿಗಳು ಕಾಯಕ್ರಮಗಳನ್ನು ರೂಪಿಸುವುದು.

ಕಾಲೇಜುಗಳು ಸದರಿ ಥೀಮ್ಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ನೀಡಲುಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರ ಮೂಲಕ ಕಾರ್ಯಕ್ರಮದ ವಿವರ, ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಖರ್ಚು ವೆಚ್ಚಗಳ ಪಟ್ಟಿಯನ್ನು ಸೆಪ್ಟಂಬರ್ 3 ರ ಸಂಜೆಯೊಳಗೆ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಾ ಬಾಬು ಜಗಜೀವನ್ ರಾಂ ಭವನ, ನಾರಾಯಣ ಸ್ವಾಮಿ ಬ್ಲಾಕ್, ಪಡುವಾರಹಳ್ಳಿ ಪೂರ್ವ, ಮೈಸೂರು-02. ಇಲ್ಲಿಗೆ ನೇರವಾಗಿ ಅಥವಾ ಇ- ಮೇಲ್ ªಮೂಲಕ ತಲುಪಿಸುವುದು.

ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೆಚ್ಚುವರಿ ಮಾಹಿತಿಗಳಿಗೆ ಸಹಾಯವಾಣಿ ಸಂಪರ್ಕಿಸುವುದು. 9108460800. ಇ-ಮೇಲ್ ವಿಳಾಸ mysuruyuvadasara@gmail.com