ಮೈಸೂರು ದಸರಾ ಮೆರವಣಿಗೆ | Mysuru Dasara 2019

ವಿಜಯದಶಮಿಯ ‘ಜಂಬೂ ಸವಾರಿ’ ಜಗತ್ತ್ಪ್ರಸಿದ್ಧ. ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಭವ್ಯವಾಗಿ ಅಲಂಕೃತಗೊಂಡ ಆನೆಯ ಮೇಲೆ, ಚಿನ್ನದ ಹೌಡಾದಲ್ಲಿ ಸ್ಥಾಪಿಸಿ, ಮೆರವಣಿಗೆ ಕೊಂಡೊಯ್ಯಲಾಗುತ್ತದೆ. ಈ ಭವ್ಯವಾದ ದೃಶ್ಯವನ್ನು ವೀಕ್ಷಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ.

ಅನೇಕ ರೋಮಾಂಚಕ ಸ್ತಬ್ಧದೃಶ್ಯಗಳು, ನೃತ್ಯ ಗುಂಪುಗಳು, ಅರಮನೆಯ ಸಾಂಪ್ರದಾಯಿಕ ಬ್ಯಾಂಡ್‌ಗಳು, ಅಲಂಕರಿಸಿದ ಆನೆಗಳು, ಒಂಟೆಗಳು ಮತ್ತು ಕುದುರೆಗಳು ಎಲ್ಲವೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತದೆ. ಮೆರವಣಿಗೆಯು ಮೈಸೂರು ಅರಮನೆಯಿಂದ ಪ್ರಾರಂಭವಾಗಿ ಪ್ರಸಿದ್ಧವಾದ ಬನ್ನಿಮಂಟಪದತ್ತ ಸಾಗುತ್ತದೆ.

ನಂದಿಧ್ವಜ ಪೂಜೆ (ಅರಮನೆ ಬಲರಾಮ ದ್ವಾರ)

  • ದಿನಾಂಕ 08-10-2019 ಮಂಗಳವಾರ
  • ಮಧ್ಯಾಹ್ನ 02:15 ರಿಂದ 02:58 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ

ವಿಜಯದಶಮಿ ಮೆರವಣಿಗೆ (ಅರಮನೆ ಒಳಾವರಣ)

  • ಮಧ್ಯಾಹ್ನ 04:31 ರಿಂದ 04:57 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ

ಜಂಬೂ ಸವಾರಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾತಂಡಗಳಿಗೆ ಅರ್ಜಿ ಆಹ್ವಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಸರಾ ಮಹೋತ್ಸವ 2019 ರ ಪ್ರಯುಕ್ತ ದಿನಾಂಕ 08-10-2019 ರಂದು ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಕಲಾ ತಂಡಗಳು ತಮ್ಮ ತಂಡದ ಉತ್ತಮ ಭಾವಚಿತ್ರ, ಸದಸ್ಯರುಗಳ ವಿವರ, ಅಂಚೆ ವಿಳಾಸ ಹಾಗೂ ತಂಡದ ಮುಖಂಡರ ಮೊಬೈಲ್ / ದೂರವಾಣಿ ಸಂಖ್ಯೆ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಸಮನ್ವಯಾಧಿಕಾರಿಗಳು, ಮೆರವಣಿಗೆ ಉಪಸಮಿತಿ, ಪೊಲೀಸ್ ಆಯುಕ್ತರ ಕಚೇರಿ, ಮಿರ್ಜಾರಸ್ತೆ, ನಜರ್ ಬಾದ್ ಮೈಸೂರು ಇಲ್ಲಿಗೆ ಸೆಪ್ಟೆಂಬರ್ 17 ರೊಳಗೆ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಿದ ಕಲಾ ತಂಡಗಳು ಉತ್ತಮ ಪೋಷಕ ಹೊಂದಿದ ವಿಶೇಷ ಹಾಗೂ ವಿಭಿನ್ನ ಕಲಾ ಪ್ರಕಾರ ಹೊಂದಿದವರನ್ನು ತಜ್ಞರ ಸಮಿತಿಯಿಂದ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2418739 ಗೆ ಸಂಪರ್ಕಿಸಬಹುದು

ಸ್ಥಳ

ಮೈಸೂರು ಅರಮನೆ ಆವರಣ

ಗೂಗಲ್ ಮ್ಯಾಪ್

ದಿನಾಂಕ

ಅಕ್ಟೋಬರ್ 8 ರಂದು

ಸಮಯ

ಎರಡು ಗಂಟೆಯ ನಂತರ

ಗ್ಯಾಲರಿ