ಮೈಸೂರು ದಸರಾ ಚಲನಚಿತ್ರೋತ್ಸವ-2017 | Mysuru Dasara 2019

ಮೈಸೂರು ದಸರಾ ಚಲನಚಿತ್ರೋತ್ಸವ-2017

ಮೈಸೂರು ದಸರಾ ಮಹೋತ್ಸವದಲ್ಲಿ ದಸರಾ ಚಲನಚಿತ್ರೋತ್ಸವ ಸಹ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಕನ್ನಡದ ಜನಪ್ರಿಯ ಚಲನಚಿತ್ರಗಳು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಸಿನಿಮಾಗಳನ್ನು ದಸರಾ ಚಲನಚಿತ್ರೋತ್ಸವ -2017 ರಲ್ಲಿ ಪ್ರದರ್ಶಿಸಲಾಗುತ್ತಿದೆ.

ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಿ. ರಂದೀಪ್ ಸೋಮವಾರ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ದಿನ ಪೂರ್ತಿ ಪ್ರದರ್ಶನವನ್ನುಏರ್ಪಡಿಸಲಾಗಿದ್ದು, ಸಿನಿಮಾಸಕ್ತರಿಗೆ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಐನಾಕ್ಸ್ ಮತ್ತು ಡಿ.ಆರ್.ಸಿ.ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ತಲಾ ಒಂದೊಂದು ಪರದೆ ಯಲ್ಲಿ ಎಲ್ಲಾ ನಾಲ್ಕು ಪ್ರದರ್ಶನಗಳನ್ನು ದಸರಾ ಚಲನಚಿತ್ರೋತ್ಸವದ ಉಪ ಸಮಿತಿ ವತಿಯಿಂದಏರ್ಪಡಿಸಲಾಗಿದೆ.

ದಸರಾ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮುಂದಿನ ದಿನಗಳಲ್ಲಿ ಆಯೋಜಿಸಲು ಅದಕ್ಕೆ ಬೇಕಾದ ಸಿದ್ಧತೆಗಳನ್ನು, ಸಂಪರ್ಕ ಸಾಧನೆಗಳನ್ನು ಏರ್ಪಡಿಸಿಕೊಳ್ಳಲಾಗುತ್ತಿದೆ.

ಮೈಸೂರು ದಸರಾ ಚಲನ ಚಿತ್ರೋತ್ಸವವನ್ನು ಸೆಪ್ಟೆಂಬರ್ 21, 2017ರಂದು ಗುರುವಾರ ಕರ್ನಾಟಕ ಕಲಾಮಂದಿರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸುವರು. ಮಾನ್ಯಜಿಲ್ಲಾಉಸ್ತುವಾರಿ ಸಚಿವರು, ಕನ್ನಡ ಚಿತ್ರರಂಗದ ಗಣ್ಯರುಸೇರಿದಂತೆ ಹಲವಾರುಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುವರು.

ಕನ್ನಡದ ಇತ್ತೀಚಿನಜನಪ್ರಿಯ, ಪ್ರಶಸ್ತಿ ವಿಜೇತಉತ್ತಮ ಚಿತ್ರಗಳು, ಪ್ರಾದೇಶಿಕ ಭಾಷೆಗಳ ಉತ್ತಮ ಚಿತ್ರಗಳು ಹಾಗೂ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದ ಚಿತ್ರಗಳ ಪ್ರದರ್ಶನ ದಿನಾಂಕ 22-09-2017 ರಿಂದ 28-09-2017 ರವರೆಗೆ ನಡೆಯಲಿದೆ.

ಡಿ.ಆರ್.ಸಿ ಚಿತ್ರಮಂದಿರದಲ್ಲಿ ಒಟ್ಟು 28ಕನ್ನಡ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಹಾಗೂ ಐನಾಕ್ಸ್ ಚಿತ್ರಮಂದಿರದಲ್ಲಿ ಕನ್ನಡವು ಸೇರಿದಂತೆ ವಿವಿಧ ಭಾಷೆಗಳ ಹಾಗೂ ದೇಶಗಳ ಒಟ್ಟು 28 ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಇದಲ್ಲದೇ ಸಾಮಾಜಿಕ ಪರಿಣಾಮ ಬೀರುವಂತಹ ಹಾಗೂ ಮನಃಪರಿವರ್ತನೆ ಮಾಡುವಂತಹ ಚಲನಚಿತ್ರದ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಮೈಸೂರು ಕಾರಾಗೃಹದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
ಕಾವಾಡಿಗರು, ಮಾವುತರು ಹಾಗೂ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರದಲ್ಲಿರುವ ಮಕ್ಕಳು, ವಿಕಲಚೇತನರ ನಿಲಯಗಳಲ್ಲಿರುವ ಮಕ್ಕಳಿಗೆ ಡಿ.ಆರ್.ಸಿ. ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಚಲನಚಿತ್ರವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುವ ಚಿತ್ರಗಳು ವೀಕ್ಷಣೆಗೆ ನೋಂದಣಿ ಅಗತ್ಯವಿದೆ. ನೋಂದಣಿ ಪ್ರಕ್ರಿಯೆಯನ್ನು 2017ರ ಸೆ.15ರ ನಂತರ ಮಾಡಲಾಗುತ್ತದೆ.ಐನಾಕ್ಸ್ ಚಿತ್ರಮಂದಿರದಲ್ಲಿ ವಿವಿಧ ದೇಶಗಳ ಚಲನಚಿತ್ರಗಳು ಪ್ರದರ್ಶನವಾಗುವುದರಿಂದ ಚಲನಚಿತ್ರಗಳ ವಸ್ತುವಿಷಯಗಳು 18 ವರ್ಷ ಮೇಲ್ಮಟ್ಟವರಿಗೆ ಸೂಕ್ತವಾಗಿರುತ್ತವೆ. ಆದ್ದರಿಂದ ನೋಂದಣಿಗೆ 18 ವರ್ಷ ಮೇಲ್ಮಟ್ಟದವರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಐನಾಕ್ಸ್ನಗಲ್ಲಿ 214 ಆಸನಗಳಿವೆ. ಈ ಪೈಕಿ 100 ಸಂಖ್ಯೆಯ ನೋಂದಣಿಯನ್ನು ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು, ಉಳಿದ ಆಸನಗಳಿಗೆ ಪ್ರದರ್ಶನವಾರು ಪಾಸ್ ವ್ಯವಸ್ಥೆ ಮಾಡಲಾಗಿದೆ.

ಐನಾಕ್ಸ್ ಚಿತ್ರಮಂದಿರದ ಪ್ರವೇಶದ ನೋಂದಣಿಗೆ ರೂ. 300/- (ಮೂರು ನೂರು ರೂ.ಗಳು) ಹಾಗೂ ಪ್ರದರ್ಶನವಾರು ಪಾಸ್ಗೆರರೂ. 30/- ನಿಗದಿ ಮಾಡಲಾಗಿದೆ.

ಡಿ.ಆರ್.ಸಿ. ಚಿತ್ರಮಂದಿರಕ್ಕೆ ನೋಂದಣಿಯ ಅಗತ್ಯವಿಲ್ಲ. ಡಿ.ಆರ್.ಸಿ.ಚಿತ್ರಮಂದಿರದಲ್ಲಿ ನಡೆಯುವ ಪ್ರತಿ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ರೂ.30/- ದರ ನಿಗದಿಪಡಿಸಲಾಗಿದೆ.ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಎಲ್ಲಾ ವಯೋಮಾನದವರಿಗೂ ಪ್ರವೇಶಾವಕಾಶಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಚಲನಚಿತ್ರ ಉಪಸಮಿತಿ ಕಾರ್ಯಾಧ್ಯಕ್ಷರು ಆರ್. ರಾಜು ಹಾಗೂ ಕಾರ್ಯದರ್ಶಿಗಳು ಕೃಷ್ಣಪ್ಪ ಉಪಸ್ಥಿತರಿದ್ದರು.