ಮಹಿಳಾ ಮತ್ತು ಮಕ್ಕಳ ದಸರಾ | Mysuru Dasara 2019
  • ಸೆಪ್ಟಂಬರ್ 30 ರಂದು ಮಹಿಳಾ ದಸರಾಗೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ರಂಗೋಲಿ ಚಿತ್ತಾರ ಕಾರ್ಯಕ್ರಮಕ್ಕೆ ಮಾನ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಅವರು ಚಾಲನೆ ನೀಡುವ ಮೂಲಕ ಮಹಿಳಾ ದಸರಾ ಉದ್ಘಾಟನೆ ನೆರವೇರಿಸುವರು.
  • ಮಕ್ಕಳ ದಸರಾವು ಸೆ.30 ಮತ್ತು ಅ.1ರಂದು ಎರಡು ದಿನಗಳು ಜಗನಮೋಹನ ಅರಮನೆಯಲ್ಲಿ ನಡೆಯಲಿದೆ
  • ಸೆ.30 ರಂದು ಬೆಳಗ್ಗೆ 11 ಗಂಟೆಗೆ ಜೆ.ಕೆ.ಗ್ರೌಂಡ್‍ನಲ್ಲಿ ಹಮ್ಮಿಕೊಂಡಿರುವ ‘ಮಹಿಳಾ ದಸರಾ 2019 ಉದ್ಯಮ ಸಂಭ್ರಮ’ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಅವರು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಘನ ಉಪಸ್ಥಿತಿ ಹಾಗೂ ಶಾಸಕ ಎಲ್. ನಾಗೇಂದ್ರ ಅವರು ಅಧ್ಯಕ್ಷತೆ ವಹಿಸುವರು ಜೊತೆಗೆ ಇನ್ನಿತರ ಗಣ್ಯರು ಭಾಗವಹಿಸುವರು.
  • ಮಹಿಳಾ ದಸರಾದ ಎಲ್ಲಾ ಕಾರ್ಯಕ್ರಮಗಳು ಜೆ.ಕೆ.ಗ್ರೌಂಡ್ ನಲ್ಲಿ ನಡೆಯಲಿವೆ. ಅಕ್ಟೋಬರ್ 1 ರಂದು ಬೆಳಗ್ಗೆ 10 ಗಂಟೆಗೆ ಜಾನಪದ ಸಿರಿ ವಿವಿಧ ತಾಲ್ಲೂಕುಗಳಿಂದ ಆಗಮಿಸುವ ಮಹಿಳೆಯರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯುವುದು.
  • ಮಧ್ಯಾಹ್ನ 2 ರಿಂದ 5 ಗಂಟೆಯವರಗೆ ಮಹಿಳೆಯರಿಂದ ಜಾನಪದ ಗೀತೆ ಸಾಮೂಹಿಕ ನೃತ್ಯ, ಚಲನಚಿತ್ರ ಗೀತೆ ಸಾಮೂಹಿಕ ನೃತ್ಯ, ಸಾಂಪ್ರದಾಯಿಕ ವಧು-ವರ ಉಡುಗೆಯ ಫ್ಯಾಷನ್ ಷೋ ಸ್ಪರ್ಧೆ, ಬಾಂಧವ್ಯ-ತಾಯಿ ಮಗಳ ಫ್ಯಾಷನ್ ಷೋ ಸ್ಪರ್ಧೆ ಹಾಗೂ ದೇಸೀ ಗಲ್ರ್ಸ್ ಫ್ಯಾಷನ್ ಸ್ಪರ್ಧೆ ನಡೆಯಲಿದೆ ಎಂದರು.
  • ಅಕ್ಟೋಬರ್ 2 ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರಗೆ ಅಂಗನವಾಡಿ ಮಕ್ಕಳಿಂದ ಚಿಣ್ಣರ ದಸರಾ ಮತ್ತು ವೇಷಭೂಷಣ ಸ್ಪರ್ಧೆ, ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಪುಟಾಣಿ ಜ್ಞಾನ ಅವರಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸರಿಗಮಪ ಖ್ಯಾತಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಿಗ್ ಬಾಸ್ ಖ್ಯಾತಿಯ ಸುಮಾ ರಾಜಕುಮಾರ್ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ಆಯೋಜಿಸಲಾಗಿದೆ.
  • ಮಕ್ಕಳ ದಸರಾವು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರಗೆ ಮೂರು ದಿನಗಳು ಜಗನಮೋಹನ ಅರಮನೆಯಲ್ಲಿ ನಡೆಯಲಿದೆ.
  • ಸೆ.30ರಂದು ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಪ್ರೌಢ ಶಾಲಾ ಮಕ್ಕಳಿಗೆ ಭಾರತದ ಚಂದ್ರಯಾನ ಕುರಿತು ಪ್ರಬಂಧ ಸ್ಪರ್ದೆ ನಡೆಯಲಿದೆ. ಪ್ರಾಥಮಿಕಾ ಮತ್ತು ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಆಶುಭಾಷಣ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ದಸರಾ ಕುರಿತು ಚಿತ್ರ ಕಲೆ, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಮೈಸೂರು ದಸರಾ ಹಾಗೂ ಸಾಮಾನ್ಯ ಜ್ಞಾನ ಕುರಿತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
  • ಅಕ್ಟೋಬರ್ 1 ಮತ್ತು 2 ರಂದು ವಿಜ್ಞಾನದ ಮತ್ತು ಕರಕುಶಲ ವಸ್ತು ಪ್ರದರ್ಶನದಲ್ಲಿ 50 ಮಕ್ಕಳು ಭಾಗವಹಿಸುವರು. ವಸ್ತು ಪ್ರದರ್ಶನದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಪುನರ್ ಬಳಕೆ ವಸ್ತುಗಳ ವಸ್ತು ಪ್ರದರ್ಶನ ನಡೆಯಲಿದ್ದು, ವಸ್ತು ಪ್ರದರ್ಶನದಲ್ಲಿ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಬಳಕೆಗೆ ಅವಕಾಶವಿರುವುದಿಲ್ಲ .
  • ಮಹಿಳಾ ವಿಭಾಗದಲ್ಲಿ ಸಾಧನೆ ಮಾಡಿದ ಒಬ್ಬರು ಮಹಿಳಾ ಸಾಧಕಿಯನ್ನು ಗೌರವಿಸಲಾಗುವುದು. ಬಾಲ ಪ್ರತಿಭೆಯನ್ನು ಗುರುತಿಸಿ ಒಬ್ಬ ಬಾಲಕನ್ನು ಸನ್ಮಾನಿಸಿ ಗೌರವಿಸಲಾಗುವುದು. ಗ್ರಾಮೀಣದಿಂದ ಮಕ್ಕಳ ದಸರಾಗೆ ಆಗಮಿಸುವ ಮಕ್ಕಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಮಹಿಳಾ ಉದ್ಯಮಿದಾರರಿಂದ : ಅರ್ಜಿ ಆಹ್ವಾನ
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೈಸೂರು ದಸರಾ ವಸ್ತುಪ್ರದರ್ಶನ 2019ರ ಅಂಗವಾಗಿ ಮಹಿಳಾ ಉದ್ಯಮ ವಿಭಾಗದ ಫಲಾನುಭವಿಗಳಿಂದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಈ ವಿಭಾಗದಲ್ಲಿ ಮಹಿಳೆಯರು ಉತ್ಪಾದನೆ ಮಾಡುವ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಆಸಕ್ತ ಮಹಿಳಾ ಉದ್ದಿಮೆದಾರರು ಸೆಪ್ಟೆಂಬರ್ 27 ರೊಳಗೆ ಅರ್ಜಿಯ ಸ್ವವಿವರಗಳನ್ನು ಕೈಗಾರಿಕಾ ಇಲಾಖೆಯಲ್ಲಿ ನೋಂದಣಿಯಾಗಿರುವ ಪರವಾನಗಿ ಪತ್ರದೊಂದಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಮೊ.ನಂ. 8310250733ನ್ನು ಸಂಪರ್ಕಿಸುವುದು ಎಂದು ಮಹಿಳಾ ಉದ್ಯಮ ಉಪಸಮಿತಿ ದಸರಾ ವಸ್ತು ಪ್ರದರ್ಶನ-2019ರ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಾಕೃತಿ : ಅರ್ಜಿ ಆಹ್ವಾನ

ದಸರಾ ವಸ್ತುಪ್ರದರ್ಶನ ದಿನಾಂಕ 29-09-2019 ರಿಂದ 27-12-2019 ರವರೆಗೆ ಒಟ್ಟು 90 ದಿನಗಳು ನಡೆಯಲಿದ್ದು, ಸದರಿ ವಸ್ತುಪ್ರದರ್ಶನ ಅವಧಿಗೆ ಮಹಿಳಾ ಮತ್ತು ಮಕ್ಕಳ ವಿಭಾಗ ರಚಿಸಲಾಗಿದ್ದು, ಸದರಿ ವಿಭಾಗದಲ್ಲಿ ರಾಜ್ಯ ಹಾಗೂ ಸ್ಥಳೀಯ ಕಲಾವಿದರುಗಳಿಂದ ಕಲಾಕೃತಿಗಳನ್ನು ಪ್ರದರ್ಶಿಸಲು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಮಹಿಳೆಯರು ಮತ್ತು ಮಕ್ಕಳು ದಿನಾಂಕ 20-09-2019 ರಿಂದ 30-09-2019 ರವರೊಳಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ತಮ್ಮ ಕಲಾಕೃತಿಗಳನ್ನು ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ವಿಭಾಗದ ಸದಸ್ಯ ಕಾರ್ಯದರ್ಶಿ ರೂಪ – 7899423408/ 9110213807/ 9611600103 ನ್ನು ಸಂಪರ್ಕಿಸುವುದು.

ಸ್ಥಳ :

ಜೆಕೆ ಮೈದಾನ

ಗೂಗಲ್ ಮ್ಯಾಪ್

ದಿನಾಂಕ :

30 ಸೆಪ್ಟೆಂಬರ್ – 4 ಅಕ್ಟೋಬರ್ 2019

ಗ್ಯಾಲರಿ