ಮಹಿಳಾ ದಸರಾ ಮಳಿಗೆ ತೆರೆಯಲು ಅರ್ಜಿ ಆಹ್ವಾನ | Mysuru Dasara 2019

ಮಹಿಳಾ ದಸರಾ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ದಿನಾಂಕ:21-09-2017 ರಿಂದ 28-09-2017 ರವರೆಗೆ ಮಹಿಳಾ ದಸರಾ-2017ರ ಪ್ರಯುಕ್ತ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಮೈಸೂರಿನ ರೈಲು ನಿಲ್ದಾಣ ಹತ್ತಿರವಿರುವ ಜೆ.ಕೆ.ಗ್ರೌಂಡ್‍ನಲ್ಲಿ ಏರ್ಪಡಿಸಲಾಗಿದೆ.

ಈ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು/ಸದಸ್ಯರು/ ಸ್ತ್ರೀಶಕ್ತಿ ಒಕ್ಕೂಟಗಳು/ ಮಹಿಳಾ ಉದ್ಯಮಿಗಳಿಂದ ತಯಾರಿಸಿದ ವಿಶೇಷ ಮತ್ತು ಅತ್ಯುತ್ತಮ ಕರಕುಶಲ ವಸ್ತುಗಳು, ಉತ್ಕøಷ್ಟ ಪೇಯಿಂಟಿಂಗ್ಸ್‍ಗಳು, ಕೈಕಸೂತಿ/ಕೈಮಗ್ಗ ಉತ್ಪನ್ನಗಳನ್ನು ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪ್ರದರ್ಶಿಸಲು ಇಚ್ಛಿಸುವ ಸ್ತ್ರೀಶಕ್ತಿ ಗುಂಪುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇಲಾಖೆಯಿಂದ ರಚಿಸಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳು, ಉದ್ಯೋಗಿನಿ ಮತ್ತು ಕಿರುಸಾಲ ಯೋಜನೆಯ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಭಾಗವಹಿಸಲು ಇಚ್ಛಿಸುವ ಸ್ತ್ರೀಶಕ್ತಿ ಗುಂಪುಗಳು/ಸದಸ್ಯರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ಖುದ್ದಾಗಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ. ವಸ್ತುಪ್ರದರ್ಶನ ಮತ್ತು ಮಾರಾಟಮೇಳದಲ್ಲಿ ಭಾಗವಹಿಸುವ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು/ ಮಹಿಳಾ ಉದ್ಯಮಿಗಳು ತಾವು ಮಳಿಗೆಯಲ್ಲಿ ಪ್ರದರ್ಶಿಸುವ ಉತ್ಪನ್ನಗಳು/ವಸ್ತುಗಳನ್ನು ಕೈಬರಹದ ಅರ್ಜಿಯಲ್ಲಿ ನಮೂದಿಸಿ ದಿನಾಂಕ:11-09-2017 ರೊಳಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮುಖಾಂತರ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ರವರಿಗೆ ಅರ್ಜಿಯನ್ನು ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವುದು. ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಇವರ ದೂರವಾಣಿ ಸಂಖ್ಯೆ: 0821-2495432, 0821-2498031, 7892840307 ಹಾಗೂ ಖುದ್ದು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ವಸ್ತುಪ್ರದರ್ಶನದ ಮಳಿಗೆಯಲ್ಲಿ ಪ್ರದರ್ಶಿಸುವ ವಸ್ತುಗಳನ್ನು ಆಯ್ಕೆ ಮಾಡಲು ಜಿಲ್ಲಾ ಕಛೇರಿಯಲ್ಲಿ ಸಭೆಗೆ ಆಹ್ವಾನಿಸಿ, ಉತ್ಪಾದಿತ ವಸ್ತುಗಳನ್ನು ಪರಿಶೀಲಿಸಿ ನಂತರ ಅತ್ಯುತ್ತಮವೆನಿಸಿದ ಉತ್ಪಾದನೆ ವಸ್ತುಗಳನ್ನು ಆಯ್ಕೆ ಮಾಡಿದ ನಂತರ ಅಭ್ಯರ್ಥಿಗಳಿಗೆ ಮಳಿಗೆ ನೀಡಲು ಕ್ರಮವಹಿಸಲಾಗುವುದು. ನಂತರ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ಮಾಹಿತಿಯನ್ನು ನೀಡಲಾಗುವುದು.