ಮಡಿಕೇರಿ ಕೋಟೆ | Mysuru Dasara 2019

ಮಡಿಕೇರಿ ಬಸ್ ನಿಲ್ದಾಣದಿಂದ 500ಮೀಟರ್ ಎತ್ತರದ ಒಂದು ಗುಡ್ಡದ ಮೇಲೆ ಈ ಕೋಟೆ ಇದೆ. 1681 ರಲ್ಲಿ ಮುದ್ದುರಾಜರು ಈ ಕೋಟೆಯನ್ನು  ಮಣ್ಣಿನಲ್ಲಿ ನಿರ್ಮಿಸಿದರು, ಬಳಿಕ ಟಿಪ್ಪು ಸುಲ್ತಾನ್ ರವರು ಗ್ರಾನೈಟ್ ನಲ್ಲಿ ಮರು ನಿರ್ಮಿಸಿದರು. 1814ರಲ್ಲಿ 2ನೇ ಲಿಂಗರಾಜೇಂದ್ರ ರವರು ನವೀಕರಿಸಿದರು. 1933ರಲ್ಲಿ ಬ್ರಿಟಿಷರು ಗಡಿಯಾರ ಗೋಪುರವನ್ನು ನಿರ್ಮಿಸಿದರು. ಅಲ್ಲಿ ಜೀವಂತ ರೀತಿಯ 2 ಕಲ್ಲಿನ ಆನೆಗಳನ್ನು ಸಹ ನೋಡಬಹುದು. ಕೊಡವ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ವಸ್ತುಗಳನ್ನು ಪ್ರದರ್ಶಿಸುವ  ವಸ್ತು ಸಂಗ್ರಹಾಲಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಿಳಾಸ:

ಮಡಿಕೇರಿ ಕೋಟೆ, ಸ್ಟುವರ್ಟ್ ಹಿಲ್, ಮಡಿಕೇರಿ, ಕರ್ನಾಟಕ 571201