ಬಿಸಿಲೆ ಘಾಟ್ | Mysuru Dasara 2019

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ. ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ. ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ. ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ. ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ. ಬಿಸಲೆ ಘಾಟಿನ ಸುತ್ತಮುತ್ತ ಇರುವ ಹಳ್ಳಿಗಳ ಜನರು ಇಲ್ಲಿನ ಸಮೃದ್ಧ ಕಾಡನ್ನು ರಕ್ಷಿಸಿರುತ್ತಾರೆ. ಬೇಸಿಗೆ ಕಾಲದಲ್ಲಿ ಯಾವಾಗಲಾದರೂ ಕಾಡ್ಗಿಚ್ಚು ಉಂಟಾದರೆ ಸುತ್ತಲಿನ ಹತ್ತಿರದ ಹಳ್ಳಿಗರು ತಕ್ಷಣವೇ ಅದನ್ನು ನಂದಿಸಿ ಕಾಡು ಹೆಚ್ಚಿನ ಹಾನಿಗೊಳಗಾಗುವುದನ್ನು ತಡೆಗಟ್ಟುತ್ತಾರೆ. ಸುತ್ತಲಿನ ಹಳ್ಳಿಗಳ ಜನರು ಕಳ್ಳಕಾಕರು ಮರಗಳನ್ನು ಕಡಿಯುವುದು, ಪ್ರಾಣಿಗಳ ಹತ್ಯೆಗೈಯುವುದು ಮಾಡುವುದಕ್ಕಾಗಿ ಅರಣ್ಯ ಪ್ರದೇಶದೊಳಗೆ ಪ್ರವೇಶಿಸದಂತೆ ನಿರಂತರ ಕಟ್ಟೆಚ್ಚರದಿಂದಿರುತ್ತಾರೆ.

ವಿಳಾಸ:

ಬಿಸ್ಲೆ ಘಾಟ್ ಆರ್ಡಿ, ಬಿಸ್ಲೆ ಸ್ಟೇಟ್ ಫಾರೆಸ್ಟ್, ಕರ್ನಾಟಕ 574238