ಬಲಮುರಿ | Mysuru Dasara 2019

ಈ ಮಾನವ ನಿರ್ಮಿತ ಜಲಾಶಯವನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ನೀರಿನ ಸುತ್ತ ವಿಹಾರಮಾಡಲು ಮತ್ತು ನೀರಿನಲ್ಲಿ ಆಟವಾಡುತ್ತ ಕಾಲ ಕಳೆಯಲು ಬಯಸುವ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಭೇಟಿಕೊಡಲು ಚಳಿಗಾಲವು ಅತ್ಯಂತ ಸೂಕ್ತಕಾಲವಾಗಿದೆ. ಆಗ ಇಲ್ಲಿ ನೀರಿನ ಪ್ರಮಾಣ ಅಧಿಕವಾಗಿರುತ್ತದೆ ಹಾಗು ಈ ಸಮಯದಲ್ಲಿ ಪ್ರವಾಸಿಗರು ನೀರಿನಲ್ಲಿ ಈಜಾಡುತ್ತ , ಆಟವಾಡುತ್ತ ಕಾಲಕಳೆಯಬಹುದು. ಇದು ಅಂತಹ ದೊಡ್ಡ ಜಲಪಾತವಲ್ಲದಿದ್ದರು ಮೈಸೂರಿಗೆ ಬರುವ ಪ್ರವಾಸಿಗರನ್ನು ಬಹು ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಮೈಸೂರು ಇಲ್ಲಿಂದ 15ಕಿ,ಮೀ ದೂರದಲ್ಲಿದೆ. ಇದು ದಕ್ಷಿಣ ಭಾರತದ ಹಲವಾರು ಸಿನಿಮಾ ನಿರ್ದೇಶಕರ ಮೆಚ್ಚಿನ ತಾಣವಾಗಿದ್ದು, ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ವಿಳಾಸ:

ಬಲಮುರಿ, ಕರ್ನಾಟಕ