ಪ್ರವಾಸೋದ್ಯಮ ಇಲಾಖೆಯ ಸಭೆ | Mysuru Dasara 2019

ಪ್ರವಾಸೋದ್ಯಮ ಇಲಾಖೆಯ ಸಭೆ

ಮೈಸೂರು ದಸರಾ-2017 ರ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಸಿದ್ಧತೆಗಳು ಹಾಗೂ ನೂತನ ಕಾರ್ಯಕ್ರಮಗಳ ಬಗೆಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಜಿಲ್ಲಾಧಿಕಾರಿ ಡಿ. ರಂದೀಪ್ ಮೊದಲಿಗೆ ಪುರಭವನದಲ್ಲಿ ಆಯೋಜಿಸಲು ಉದ್ದೇಶಿಸಿರುವ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು, ನಂತರ ಗೊಲ್ಡ್ ಕಾರ್ಡ ಹಾಗೂ ಗೊಲ್ಡನ್ ಚಾರಿಯೆಟ್ ನ ಪ್ರವಾಸಿಗರಿಗೆ ವಿಶೇಷವಾಗಿ ಈ ಬಾರಿ ಗೊಲ್ಡ್ ಕಾರ್ಡ್‍ನ್ನು ಕೆ.ಎಸ್.ಟಿ.ಡಿ.ಸಿ. ಮೂಲಕ ಒದಗಿಸಲಾಗುತ್ತಿದ್ದು. ಈ ವರ್ಷ ಪ್ರತಿ ಗೊಲ್ಡ್ ಕಾರ್ಡ್‍ಗೆ ಒಬ್ಬರಿಗೆ ಪ್ರವೇಶಾವಕಾಶ ನೀಡಲಾಗಿದ್ದು ರೂ 3999 ನಿಗಧಿಪಡಿಸಲಾಗುತ್ತಿದೆ, ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.

ದಸರೆಯಲ್ಲಿ ಯಶಸ್ವಿ ಕಾರ್ಯಕ್ರಮ ‘ಗಾಲಿಗಳ ಮೇಲೆ ಅರಮನೆ (ಪ್ಯಾಲೆಸ್ ಆನ್ ವ್ಹೀಲ್ಸ್) ಆಯೋಜನೆ ಮಾಡಲಾಗುವುದು, ಈ ಬಾರಿ ಎರಡು ವಸ್ತು ಸಂಗ್ರಹಾಲಯವನ್ನು ಸೇರಿಸಲಾಗಿದ್ದು. ಇದಕ್ಕೆ ರೂ.999 ನಿಗಧಿ ಪಡಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಎನ್. ಮಂಜುಳ ಮಾತನಾಡಿ ಈಗಾಗಲೇ ವ್ಯಾಪಕ ಪ್ರಚಾರ ನಡೆಯುತ್ತಿದೆ, ಇನ್ನು ಹೆಚ್ಚಿನ ಪ್ರಚಾರ ನಡೆಯಲಿದೆ ಎಂದು ತಿಳಿಸಿದರು. ಪ್ರವಾಸಿಗರ ಅನುಕೂಲಕ್ಕಾಗಿ ವಿಜಯದಶಮಿ ದಿನದಂದು ಅರಮನೆಯ ಹೊರಗಡೆ ಸೂಕ್ತ ಸ್ಥಳಗಳಲ್ಲಿ ಎಲ್.ಇ.ಡಿ. ಪರದೆ ಮೂಲಕ ಅರಮನೆ ಒಳಗೆ ನಡೆಯುವ ಕಾರ್ಯಕ್ರಮವನ್ನು ತೋರಿಸುವಂತೆ ಸಲಹೆ ನೀಡಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರು ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಪ್ರವಾಸಿ ತಾಣಗಳಿಗೆ ಏಕರೂಪದ ಟಿಕೇಟ್ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಅರಮನೆ, ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ, ಕೆ.ಆರ್. ಎಸ್. ಹಾಗೂ ರಂಗನತಿಟ್ಟು ಪಕ್ಷಿಧಾಮ ಈ ವ್ಯವಸ್ಥೆಯಲ್ಲಿ ಸೇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮೂರು ದಿನಗಳು 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಹಾಗೂ ದಸರೆ ಎಲ್ಲಾದಿನಗಳಲ್ಲೂ ಲೆಸರ್ ಪ್ರದರ್ಶನವ್ನ್ನು ದೊಡ್ಡ ಗಡಿಯಾರದಬಳಿ ಆಯೋಜಿಸಲಾಗುವುದಾಗಿ ತಿಳಿಸಿದರು. ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೊದ್ಯಮ ದಿªನವನ್ನು ಆಚರಿಸುತ್ತಿದ್ದು, ಇದೇ ಮೊದಲ ಬಾರಿಗೆ ಒಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜಸಲು ಇರುವ ಅವಕಾಶಗಳ ಬಗ್ಗೆಯೂ ಚರ್ಚಿಸಿದರು.

ಕೆ.ಎಸ್.ಟಿ.ಡಿ.ಸಿ. ನಿರ್ದೇಶಕರು ಹಾಗೂ ಜಂಗಲ್ ಲಾಡ್ಜಸ್ ರೆಸಾರ್ಟ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹೆಚ್. ಪಿ. ಜನಾರ್ಧನ್ ಉಪಸ್ಥಿತರಿದ್ದರು.