ಪಾರಂಪರಿಕ ದಸರಾ | Mysuru Dasara 2019
‘ಪಾರಂಪರಿಕ ಆಟಗಳ’ ಸ್ಪರ್ಧೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ದಿನಾಂಕ : 03.10.2019ರಂದು ಬೆಳಗ್ಗೆ 10.00 ಗಂಟೆಗೆ ಪಾರಂಪರಿಕ ಆಟಗಳ ಸ್ಪರ್ಧೆಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸುತ್ತಿದೆ.

ವಿವಿಧ ವಯೋಮಾನದವರಿಗೆ ಈ ಕೆಳಕಂಡ ಆಟಗಳ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

10-16 ವರ್ಷದೊಳಗಿನ ಮಕ್ಕಳು 17-25 ವರ್ಷದೊಳಗಿನ ಯುವಕ-ಯುವತಿಯರು 25 ವರ್ಷ ಮೇಲ್ಪಟ್ಟವರು
ಕಣ್ಣಾ ಮುಚ್ಚಾಲೆ ಅಳಿಗುಳಿ ಮನೆ ಪಗಡೆ
ಕುಂಟಾಬಿಲ್ಲೆ ಹಗ್ಗ ಜಗ್ಗಾಟ ಹಗ್ಗಜಗ್ಗಾಟ
ಹಾವು-ಏಣಿ ಹಾವು-ಏಣಿ ಅಳಿಗುಳಿ ಮನೆ
ಗೋಲಿ ಗೋಲಿ ಬಿಲ್ಲುಬಾಣ
ಚೌಕಾಬಾರ ಬಿಲ್ಲು ಬಾಣ ಚೌಕಾಬಾರ
ಮೂರು ಕಾಲಿನ ಓಟ ಚಿನ್ನಿದಾಂಡು
ಬುಗುರಿ
ಗೋಣಿಚೀಲ ಓಟ
ಮೂರು ಕಾಲಿನ ಓಟ
ಹುಲಿ-ಕುರಿ
 • ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸ್ವವಿವರವುಳ್ಳ ಅರ್ಜಿ ಭರ್ತಿ ಮಾಡಿ, ವಯಸ್ಸಿನ ಪ್ರಮಾಣ ಪತ್ರದೊಂದಿಗೆ ದಿನಾಂಕ : 25.09.2019ರ ಸಂಜೆ 5.00 ಗಂಟೆಯೊಳಗಾಗಿ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. (ಜನನ ಪ್ರಮಣ ಪತ್ರ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಆಧಾರ್ ಕಾರ್ಡ್ ಪ್ರತಿಗಳ ಪೈಕಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಕಛೇರಿಗೆ ಸಲ್ಲಿಸುವುದು).
 • ಒಬ್ಬರು ಕೇವಲ ಮೂರು ಆಟಗಳಲ್ಲಿ ಮಾತ್ರ ಭಾಗವಹಿಸಬಹುದು.
 • ಪ್ರತಿ ಆಟದಲ್ಲಿ ಗರಿಷ್ಠ 25 ಜನರಿಗೆ ಮಾತ್ರ ಅವಕಾಶ, ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ.
 • ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನ ನೀಡಲಾಗುವುದು.
 • ಪ್ರತಿ ಆಟದಲ್ಲೂ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
 • ಗುಂಪು ಸ್ಪರ್ಧೆಯ ತಂಡಗಳ ರಚನೆಯನ್ನು ಕಛೇರಿಯಿಂದಲೇ ಮಾಡಲಾಗುವುದು.
 • ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು.
 • ಸ್ಪರ್ಧೆಯ ಸಮಯದಲ್ಲಿ ಆಗಬಹುದಾದ ಅನಿರೀಕ್ಷಿತ ಅವಘಡಗಳಿಗೆ ಸ್ಪರ್ಧಾಳುಗಳೆ ಜವಾಬ್ದಾರರು.
 • ತೀರ್ಪುಗಾರರ ನಿರ್ಣಯವೇ ಅಂತಿಮ.
 • ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡವರು ದಿನಾಂಕ : 03.10.2019 ರಂದು ಬೆಳಗ್ಗೆ 9.00 ಗಂಟೆಯೊಳಗೆ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಈ ವಿಳಾಸಕ್ಕೆ ಬಂದು ವರದಿ ಮಾಡಿಕೊಳ್ಳುವುದು. ತಡವಾಗಿ ಬಂದವರಿಗೆ ಅವಕಾಶ ನಿರಾಕರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ 0821-2424671 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

‘ಪಾರಂಪರಿಕ ಕೇಶಾಲಂಕಾರ’ ಸ್ಪರ್ಧೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2019 ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ದಿನಾಂಕ : 02.10.2019 ರಂದು ಬೆಳಗ್ಗೆ 11.00 ಗಂಟೆಗೆ ‘ಪಾರಂಪರಿಕ ಕೇಶಾಲಂಕಾರ’ ಸ್ಪರ್ಧೆಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿದೆ.

 • 15-25 ವರ್ಷದೊಳಗಿನ ಯುವತಿಯರಿಗೆ, 25-50 ವರ್ಷದೊಳಗಿನ ಮಹಿಳೆಯರಿಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸ್ವವಿವರವುಳ್ಳ ಅರ್ಜಿ ಭರ್ತಿ ಮಾಡಿ, ವಯಸ್ಸಿನ ಪ್ರಮಾಣ ಪತ್ರದೊಂದಿಗೆ ದಿನಾಂಕ : 25.09.2019 ರ ಸಂಜೆ 5.00 ಗಂಟೆಯೊಳಗಾಗಿ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. (ಜನನ ಪ್ರಮಣ ಪತ್ರ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಆಧಾರ್ ಕಾರ್ಡ್ ಪ್ರತಿಗಳ ಪೈಕಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಕಛೇರಿಗೆ ಸಲ್ಲಿಸುವುದು).
 • ತೀರ್ಪುಗಾರರ ಸಮ್ಮುಖದಲ್ಲಿ, ಸ್ಥಳದಲ್ಲೆ ಕೇಶ ವಿನ್ಯಾಸ ಮಾಡಬೇಕು.
 • ಮೊಗ್ಗಿನ ಜಡೆ, ಗಂಟು ಕಟ್ಟುವುದು, ನಾಲ್ಕು-ಐದು ಕಾಲಿನ ಜಡೆ, ಜಡೆಬಿಲ್ಲೆ, ಪೌರಾಣಿಕ ಮತ್ತು ಐತಿಹಾಸಿಕ ಮಹಿಳೆಯರ ಕೇಶಾಲಂಕಾರ, ಸ್ತ್ರೀ ಶಿಲ್ಪಗಳಲ್ಲಿ ಕಾಣುವ ಕೇಶಾಲಂಕಾರ ಮುಂತಾದ ಪಾರಂಪರಿಕ ಮಾದರಿ ಕೇಶ ವಿನ್ಯಾಸಗಳನ್ನು ಮಾಡಬಹುದು. (ಸಿದ್ಧಪಡಿಸಿದ/ ರೆಡಿಮೆಡ್ ಮೊಗ್ಗಿನ ಜಡೆಗೆ ಅವಕಾಶವಿಲ್ಲ. ಸ್ಥಳದಲ್ಲಿಯೆ ಮೊಗ್ಗಿನ ಜಡೆ ಸಿದ್ಧಪಡಿಸಿಕೊಳ್ಳುವುದು).
 • ಆಧುನಿಕ ಕೇಶ ವಿನ್ಯಾಸಕ್ಕೆ ಅವಕಾಶವಿಲ್ಲ.
 • ಕೇಶಾಲಂಕಾರ ಮಾಡುವಾಗ ಕೂದಲಿಗೆ ವೈವಿದ್ಯಮಯ ಬಣ್ಣ ಬಳಸಲು ಅವಕಾಶವಿರುವುದಿಲ್ಲ.
 • ಸ್ಪರ್ಧೆಯ ಸಮಯ 45 ನಿಮಿಷ ಮಾತ್ರ.
 • ಕೇಶಾಲಂಕಾರ ಮಾಡುವವರನ್ನು ಮಾತ್ರ ಸ್ಪರ್ಧಿಯೆಂದು ಪರಿಗಣಿಸಲಾಗುವುದು.
 • ಕೇಶ ವಿನ್ಯಾಸಕ್ಕೆ ತಕ್ಕ ಪಾರಂಪರಿಕ ಉಡುಗೆ ಧರಿಸಿ, ಪಾರಂಪರಿಕ ಶೈಲಿಯ ಪ್ರಸಾದನ ಮಾಡಿಕೊಂಡಿರಬೇಕು.
 • ಆಧುನಿಕ ಪ್ರಸಾದನ(ಮೇಕಪ್)ಕ್ಕೆ ಅವಕಾಶವಿಲ್ಲ.
 • ತೀರ್ಪುಗಾರರ ನಿರ್ಣಯವೇ ಅಂತಿಮ.
 • ಕೇಶಾಲಂಕಾರಕ್ಕೆ ಅಗತ್ಯ ಸಾಮಾಗ್ರಿ/ ಪರಿಕರಗಳನ್ನು ಸ್ಪರ್ಧಿಗಳೇ ತರುವುದು.
 • ಪ್ರತಿ ವಿಭಾಗದಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳುವ ತಲಾ 25 ಜನರಿಗೆ ಮಾತ್ರ ಆದ್ಯತೆ ಮೇಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
 • ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವೀತಿಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು.
 • ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
 • ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡವರು ದಿನಾಂಕ : 02.10.2019 ರಂದು ಬೆಳಗ್ಗೆ 10.00 ಗಂಟೆಯೊಳಗೆ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಈ ವಿಳಾಸಕ್ಕೆ ಬಂದು ವರದಿ ಮಾಡಿಕೊಳ್ಳುವುದು. ತಡವಾಗಿ ಬಂದವರಿಗೆ ಅವಕಾಶ ನಿರಾಕರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ 0821-2424671 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

‘ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ’

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ – 2019 ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆವತಿಯಿಂದ ಜನಸಾಮಾನ್ಯರಿಗೆ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಉಡುಗೆ ಮತ್ತು ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ದಿನಾಂಕ : 01.10.2019 ರಂದು ಬೆಳಗ್ಗೆ 7.30 ಗಂಟೆಗೆ ‘ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ’ ಕಾರ್ಯಕ್ರಮವನ್ನು ಆಯೋಜಿಸಿದೆ. ನಡಿಗೆಯು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್, ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ (ಕಾವೇರಿ ಎಂಪೋರಿಯಮ್), ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಬಂದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮುಕ್ತಾಯಗೊಳ್ಳಲಿದೆ. ಸುಮಾರು 2ಳಿ ಘಂಟೆಗಳ ಅವಧಿಯಲ್ಲಿ ಇತಿಹಾಸ ಹಾಗೂ ಪುರಾತತ್ವ ತಜ್ಞರು ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡಗಳ ಪರಿಚಯವನ್ನು ನಡಿಗೆಯ ಮೂಲಕ ಮಾಡಿಕೊಡಲಿದ್ದಾರೆ. ಇದರಲ್ಲಿ ಭಾಗವಹಿಸುವ ಮಹಿಳೆಯರು ಅಥವಾ ಪುರುಷರು ಪಾರಂಪರಿಕ ಉಡುಗೆಯನ್ನು ಧರಿಸುವುದು. ಯಾವುದೇ ವಯೋಮಾನದ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ. ಆಸಕ್ತರು ದಿನಾಂಕ : 25.9.2019 ರಂದು ಸಂಜೆ 5 ಗಂಟೆಯೊಳಗೆ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನೇರವಾಗಿ ಅಥವಾ ದೂರವಾಣಿ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದು. (ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಕಛೇರಿಗೆ ಸಲ್ಲಿಸುವುದು). ಮೊದಲು ನೋಂದಣಿ ಮಾಡಿಸಿಕೊಳ್ಳುವವರಿಗೆ ಮೊದಲ ಆದ್ಯತೆ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ 0821-2424671 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

‘ಪಾರಂಪರಿಕ ದಸರಾ ಬೊಂಬೆ ಪ್ರದರ್ಶನ’ ಸ್ಪರ್ಧೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ – 2019 ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು “ಪಾರಂಪರಿಕ ದಸರಾ ಬೊಂಬೆ ಪ್ರದರ್ಶನ” ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸ್ವವಿವರವುಳ್ಳ ಅರ್ಜಿ ಭರ್ತಿ ಮಾಡಿ ದಿನಾಂಕ : 25.09.2019 ರ ಸಂಜೆ 5.00 ಗಂಟೆಯೊಳಗಾಗಿ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ಖುದ್ದಾಗಿ ಅಥವಾ ddheritagemysore@gmail.com ಇ-ಮೇಲ್ ಕಳುಹಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳುವುದು. (ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಕಛೇರಿಗೆ ಸಲ್ಲಿಸುವುದು).
ದಿನಾಂಕ : 03.10.2019 ರಿಂದ ದಿನಾಂಕ: 06.10.2019 ರೊಳಗೆ ತೀರ್ಪುಗಾರರು ಬೊಂಬೆ ಪ್ರದರ್ಶನ ಇಟ್ಟಿರುವ ಮನೆ-ಮನೆಗೆ ತೆರಳಿ ಬೊಂಬೆ ಪ್ರದರ್ಶನ ವೀಕ್ಷಿಸಿ, ವಿಜೇತರನ್ನು ಆಯ್ಕೆ ಮಾಡುತ್ತಾರೆ. ತೀರ್ಪುಗಾರರ ತೀರ್ಮಾನವೆ ಅಂತಿಮ.
ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು
ಪ್ರಥಮ ಬಹುಮಾನ :-5000
ದ್ವಿತೀಯ ಬಹುಮಾನ :-3000
ತೃತೀಯ ಬಹುಮಾನ :-2000
ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ 0821-2424671 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

‘ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್’

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ- 2019 ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆವತಿಯಿಂದ ಜನಸಾಮಾನ್ಯರಿಗೆ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ‘ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್’ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡುವ ಅತ್ಯುತ್ತಮ ಮೊದಲ ಮೂರು ಸೆಲ್ಫಿಗಳಿಗೆ ನಗದು ಬಹುಮಾನ ನೀಡಲಾಗುವುದು.

 • ಪ್ರಥಮ ಬಹುಮಾನ – ರೂ.3,000/-
 • ದ್ವಿತೀಯಾ ಬಹುಮಾನ – ರೂ.2,000/-
 • ಮೂರನೇ ಬಹುಮಾನ – ರೂ.1,000/-

ಯಾವುದಾದರೂ ಪಾರಂಪರಿಕ ಕಟ್ಟಡದೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡು ದಿನಾಂಕ : 25.09.2019ರ ಸಂಜೆ 5 ಗಂಟೆಯೊಳಗೆ ಹಾರ್ಡ್ ಕಾಪಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಉಪ ನಿರ್ದೇಶಕರು(ಪರಂಪರೆ), ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು-570010 ಮತ್ತು ಸಾಫ್ಟ್ ಕಾಪಿಯನ್ನು ddheritagemysore@gmail.com ಇ-ಮೇಲ್ ವಿಳಾಸಕ್ಕೆ ಖಡ್ಡಾಯವಾಗಿ ಕಳುಹಿಸುವುದು.

ಸ್ಪರ್ಧೆಯ ನಿಯಮಗಳು :

 • ಪಾರಂಪರಿಕ ಕಟ್ಟಡದೊಂದಿಗೆ ಒಬ್ಬರೇ ಸೆಲ್ಫಿ ತೆಗೆದುಕೊಂಡಿರಬೇಕು.
 • ಸೆಲ್ಫಿ ಫೋಟೋ 10×12 ಅಳತೆಯದ್ದಾಗಿರಬೇಕು.
 • ಯಾವುದೇ ವಯೋಮಾನದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
 • ಕಲರ್ ಫೋಟೋ ತೆಗೆಸಿಕೊಂಡಿರಬೇಕು ಹಾಗೂ ಎಡಿಟ್ ಮಾಡದೆ ಸಹಜವಾಗಿರುವ ಫೋಟೋವನ್ನು ಸ್ಪರ್ಧೆಗೆ ಕಳುಹಿಸುವುದು.
 • ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸುವುದು.
 • ಭಾವಚಿತ್ರದ ಹಿಂದೆ ಪೂರ್ಣ ಹೆಸರು, ವಿಳಾಸ ಮತ್ತು ಎರಡು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು.
 • ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಈ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ದಿನಾಂಕ : 30.09.2019 ರಂದು ಸಂಜೆ 5 ಘಂಟೆಗೆ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು ಇಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ 0821-2424671 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

ಸ್ಥಳ :

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ

ಗೂಗಲ್ ಮ್ಯಾಪ್

ದಿನಾಂಕ :

ದಿನಾಂಕ 01-10-2019 ರಿಂದ 06-10-2019 ರವರೆಗೆ