ನಾಡ ಹಬ್ಬ ದಸರೆಯಲ್ಲಿ ಆರು ದಿನಗಳ ಕುಸ್ತಿ ಪಂದ್ಯಾವಳಿ ನಡೆಯಲಿದೆ. | Mysuru Dasara 2019

ನಾಡ ಹಬ್ಬ ದಸರೆಯಲ್ಲಿ ಆರು ದಿನಗಳ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿ ಕೂಡ ಒಂದಾಗಿದ್ದು, ಈ ಬಾರಿ ಆರು ದಿನಗಳು ನಗರದ ಡಿ. ದೇವರಾಜ ಅರಸು ವಿವಿಧೋದ್ಧೇಶ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 21 ರಿಂದ ಪ್ರಾರಂಭವಾಗಲಿದೆ.

ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಮಾಹಿತಿ ನೀಡಿದರು. ಸೆಪ್ಟಂಬರ್ 21 ರಿಂದ 26 ರವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ವಿಶೇಷವಾಗಿ ಪಾರದರ್ಶಕತೆಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಮೊದಲಬಾರಿಗೆ ಸ್ಥಳೀಯ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಗರದ ನಾಲ್ಕು ದಿಕ್ಕಿನಲ್ಲಿ  / ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನದ ನಾಡ ಕುಸ್ತಿ ಪಂದ್ಯಾವಳಿಯನ್ನು  ಆಯೋಜಿಸಲಾಗುತ್ತಿದೆ. ಪ್ರಾಯೋಜಕರ ಮೂಲಕ ಬಹುಮಾನವನ್ನು ನೀಡಲಿದ್ದೆವೆ ಎಂದು ತಿಳಿಸಿದರು. ಮೊದಲನೇ ಪಂಜ ಕುಸ್ತಿಯನ್ನು  ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಸಲು ಸಿದ್ದತೆಗಳು ನಡೆದಿದೆ ಎಂದರು.

ರಾಜ್ಯ ಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯಾವಳಿಯನ್ನು ಸೆಪ್ಟಂಬರ್ 24 ಮತ್ತು 25 ರಂದು ನಡೆಯಲಿದೆ ಎಂದು ತಿಳಿಸಿದರು.  ಇದರೊಂದಿಗೆ ಕುಸ್ತಿ ಪುನಃಚೇತನ ಕಾರ್ಯಕ್ರಮಗಳನ್ನು ನಡೆಸಲು ನಿರ್ದ¸ರಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಗರಡಿಗಳನ್ನು ಗುರುತಿಸಿ ಜೀರ್ಣೋದ್ದಾರಕ್ಕೆ ಕ್ರಮ ತೆಗೆದುಕೊಳ್ಳವುದು ಸೇರಿದೆ ಎಂದು ತಿಳಿಸಿದರು.

ಉಪಸಮಿತಿಯ ಕಾರ್ಯಾಧ್ಯಕ್ಷರು ಮತ್ತು ನಂಜನಗೂಡು ಉಪ ಪೋಲೀಸ್ ವರಿಷ್ಠಾಧಿಕಾರಿ  ಎಂ.ಎಸ್. ಮೊಹಮ್ಮದ್ ಸುಜಿತ ಹಾಗೂ ಕಾರ್ಯದರ್ಶಿ ಡಿ. ರವಿ ಅವರು ಹಿರಿಯ ಕುಸ್ತಿ ಪೈಲ್ವಾನರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.