ದಸರೆ ಜಲಪಾತೋತ್ಸವ | Mysuru Dasara 2019

ದಸರೆ ಜಲಪಾತೋತ್ಸವ

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ದಸರಾ-2017ರ ಬಾಗವಾಗಿ ಧನುಷ್ಕೋಟಿ ಜಲಪಾತೋತ್ಸ ಇದೆ ಸೆಪ್ಟಂಬರ್ 9 ಮತ್ತು 10 ರಂದು ಚುಂಚನಕಟ್ಟೆ, ಕೃಷ್ಣರಾಜನಗರ ತಾಲೂಕಿನಲ್ಲಿ ನಡೆಯಲಿದೆ.

ಕಾವೇರಿ ನದಿಯು ಚುಂಚನಕಟ್ಟೆಯ ಬಳಿ ಹರಿಯುವಾಗ ಸುಮಾರು 20 ಮೀಟರ್ ಎತ್ತರದಿಂದ ಧುಮುಕಿ ಅನೇಕ ಕವಲುಗಳಾಗಿ ಹರಿಯುತ್ತ ಸುಂದರ ಜಲಪಾತವನ್ನು ಸೃಷ್ಟಿಸುತ್ತದೆ. ಈ ಜಲಪಾತ ಮೈಸೂರಿನ ಸಮೀಪದಲ್ಲಿರು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಜಲಪಾತೋತ್ಸವ ಆಯೋಜಿಸುತ್ತಿದೆ, ಕಣ್ಮನ ಸೆಳೆಯುವ ಬಣ್ಣಗಳ ಬೆಳಕನ್ನು ಜಲಪಾತದ ಮೇಲೆ ಸಂಗೀತಕ್ಕನುಗುಣವಾಗಿ ಬಿಂಬಿಸಿದಾಗ ಜಲಪಾತ ವರ್ಣರಂಜಿತವಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಸೆಪ್ಟಂಬರ್ 9 ರಂದು ಸಂಜೆ 6ಗಂಟೆಗೆ ಉದ್ಘಾಟಿಸಲಿದ್ದಾರೆ, ಹಾಸ್ಯ ಸಂಜೆ ಕಾರ್ಯಕ್ರಮವನ್ನು ಕಲಾವಿದರಾದ ಸುಧಬರಗೂರುರವರು ನಡೆಸಿಕೊಡಲಿದ್ದಾರೆ. ಮೈಸೂರಿನ ಭರತನಾಟ್ಯ ಕಲಾವಿದರಾದ ಶ್ರೀಧರ್ ಜೈನ್ ಅವರು ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ ಹಾಗೂ ಜನಪದ ಕಲಾತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜಿಸಲಿದೆ.

ಸೆಪ್ಟಂಬರ್ 10ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕಲಾವಿದ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಬಾಗವಹಿಸಲಿದ್ದಾರೆ, ಸಂಗೀತ ನಿರ್ದೇಶಕ ಮತ್ತು ಹಾಸ್ಯ ಕಲಾವಿದ ಸಾಧು ಕೋಕಿಲ ರವರು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.