ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ | Mysuru Dasara 2019

ಪರಿಷ್ಕೃತ ಪತ್ರಿಕಾ ಪಿಕಟಣೆ
ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ

ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಚಲನಚಿತ್ರ ತಯಾರಿಕೆಯಲ್ಲಿ ಕಥೆ ಮತ್ತು ಚಿತ್ರಕಥೆಯ ಬಗ್ಗೆ ಕಾರ್ಯಾಗಾರವನ್ನು ದಿನಾಂಕ: ೨೦-೦೯-೨೦೧೯ ರಿಂದ ದಿನಾಂಕ: ೨೨-೦೯-೨೦೧೯ ರವರೆಗೆ ೩ ದಿನಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದೆ. ಕನ್ನಡ ಚಲನಚಿತ್ರದ ಹೆಸರಾಂತ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿರವರು, ಶ್ರೀ ಲಿಂಗದೇವರು, ಶ್ರೀ ಜೋಗಿಯವರು, ಶ್ರಿ ಬಿ.ಸುರೇಶ್ ಹಾಗೂ ಚಲನಚಿತ್ರ ತರಬೇತಿ ಸಂಸ್ಥೆಗಳ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಕಥೆ ಮತ್ತು ಚಿತ್ರಕಥೆಯ ತಯಾರಿಕೆಯ ವಿವಿಧ ಮಜಲುಗಳ ಕುರಿತಂತೆ ಶಿಬಿರಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು / ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ದಿನಾಂಕ ೧೯-೦೯-೨೦೧೯ರ ಸಂಜೆ ೫.೩೦ರೊಳಗಾಗಿ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ವಾರ್ತಾ ಭವನ ಕಛೇರಿ ವೇಳೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಗರಿಷ್ಠ ೧೨೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ನೋಂದಣಿ ಶುಲ್ಕ ರೂ.೪೦೦/- ಇದ್ದು, ವಿದ್ಯಾರ್ಥಿಗಳಿಗೆ ಶುಲ್ಕ ರೂ.೨೦೦/- ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಆಯಾ ಕಾಲೇಜಿನಿಂದ ಪಡೆದ ಗುರುತಿನ ಪತ್ರದ ಪ್ರತಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸತಕ್ಕದ್ದು. ಕಾರ್ಯಾಗಾರಕ್ಕೆ ನೋಂದಣಿಯಾದವರಿಗೆ ಐನಾಕ್ಸ್ ಚಿತ್ರಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಚಲನಚಿತ್ರಗಳನ್ನು ವೀಕ್ಷಿಸಲು ಪೂರಕ(Complementary) ಪಾಸ್‌ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಮನು, ಮೊಬೈಲ್ ನಂ. ೯೪೪೮೦೯೨೦೪೯. ಹಾಗೂ ಶ್ರೀ. ಡಾ. ರಾಘವೇಂದ್ರ ಎಸ್.ಜಿ. ಮೊಬೈಲ್ ನಂ. ೯೯೬೪೫೮೫೦೦೮. ರವರನ್ನು ಸಂಪರ್ಕಿಸಬಹುದು.

ಕಾರ್ಯದರ್ಶಿಗಳು
ದಸರಾ ಚಲನಚಿತ್ರೋತ್ಸವ ಉಪಸಮಿತಿ,
ಮೈಸೂರು