ದಸರಾ ಕುಸ್ತಿ | Mysuru Dasara 2019

ಕುಸ್ತಿ ಪಂದ್ಯಾವಳಿಗಳು ದಿನಾಂಕ 29-9-2019 ರಿಂದ 4-10-2019 ರವರೆಗೆ ಒಟ್ಟು 6 ದಿವಸಗಳ ಕಾಲ ಮೈಸೂರಿನ ದೊಡ್ಡಕೆರೆ ಮೈದಾನದ ಶ್ರೀ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರ ಅಂಗವಾಗಿ ಪ್ರತಿದಿನ ನಾಡಕುಸ್ತಿ ಪಂದ್ಯಾವಳಿಗಳು ಸಂಜೆ 3-30 ಗಂಟೆಯಿಂದ ನಡೆಯುತ್ತದೆ. ಈ ನಾಡಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯವನ್ನು ದಿನಾಂಕ 22-9-2019ರ ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಶ್ರೀ ಬಿ. ವಿ. ಕಾರಂತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ನಾಡ ಕುಸ್ತಿ ಜೋಡಿ ಕಟ್ಟುವ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಕುಸ್ತಿಪಟುಗಳು ಅಂದು ನಿಗಧಿತ ಸಮಯಕ್ಕೆ ತಮ್ಮ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ 2 ಭಾವಚಿತ್ರದೊಂದಿಗೆ ಭಾಗವಹಿಸತಕ್ಕದ್ದು. ಭಾಗವಹಿಸಿರುವ ಕುಸ್ತಿಪಟುಗಳ ಪೈಕಿ ಸೂಕ್ತ ಕುಸ್ತಿಪಟುಗಳ ಜೋಡಿಯನ್ನು ಕಟ್ಟಲಾಗುತ್ತದೆ.

ನಾಡ ಕುಸ್ತಿ ಜೋಡಿ ಕಾರ್ಯಕ್ಕೆ ಆಗಮಿಸುವ ಎಲ್ಲಾ ಕುಸ್ತಿಪಟುಗಳು ತಪ್ಪದೇ ನಿಗಧಿತ ಅರ್ಜಿಯನ್ನು ಭರ್ತಿ ಮಾಡುವುದರ ಜೊತೆಗೆ ತಾವು ಹೊಂದಿರುವ ಬ್ಯಾಂಕ್ ಎಸ್.ಬಿ. ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು ಬ್ಯಾಂಕ್‍ನ ಐಎಫ್‍ಸಿ. ಕೋಡ್ ಕಾಣುವ ಹಾಗೆ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯನ್ನು ತಮ್ಮ ಅರ್ಜಿಯೊಂದಿಗೆ ಲಗತ್ತಿಸಿ ನೀಡುವುದು.

ಹೆಚ್ಚಿನ ಮಾಹಿತಿಗಾಗಿ ಕುಸ್ತಿ ಉಪಸಮಿತಿಯ ಕಛೇರಿಯನ್ನು ಸಂಪರ್ಕಿಸವುದು

ಮೈಸೂರು ದಸರಾ ಮಹೋತ್ಸವದ 2019ರ ಅಂಗವಾಗಿ ಈ ವರ್ಷ 11ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ಮತ್ತು 37ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಗಳು ಹಾಗೂ 3ನೇ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳು ಹಾಗೂ 5ನೇ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿ ಹಾಗೂ ವಿಕಲ ಚೇತನರ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯನ್ನೂ ಸಹಾ ನಡೆಸಲಾಗುತ್ತದೆ.

ದಸರಾ ಕುಸ್ತಿ ಪಂದ್ಯಾವಳಿಗಳು ದಿನಾಂಕ 29-9-2019 ರಿಂದ ದಿನಾಂಕ 4-10-2019 ರವರೆವಿಗೆ ಒಟ್ಟು 06 ದಿನಗಳ ಕಾಲಶ್ರೀ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನಡೆಯಲಿದೆ.

ಮೈಸೂರು ದಸರಾ ಮಹೋತ್ಸವದ 2019ರ ಅಂಗವಾಗಿ ಈ ವರ್ಷ 11ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ಮತ್ತು 37ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಗಳು ಹಾಗೂ 3ನೇ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳು ಹಾಗೂ 5ನೇ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿ ಹಾಗೂ ವಿಕಲ ಚೇತನರ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯನ್ನೂ ಸಹಾ ನಡೆಸಲಾಗುತ್ತದೆ.

 • ದಿನಾಂಕ 22-9-2019 ರಂದು ಭಾನುವಾರ ಬೆಳಿಗ್ಗೆ 10-00 ಗಂಟೆಗೆ ನಾಡ ಕುಸ್ತಿ ಜೋಡಿ ಕಟ್ಟುವ ಕಾರ್ಯ ನಡೆಯಲಿದೆ ಮತ್ತು ಕುಸ್ತಿಪಟುಗಳಿಗೆ ವಿವಿಧ ಸ್ಪರ್ಧೆ ಅಂದರೆ, 2 ಕೈನಲ್ಲಿ ಗದೆ ತಿರುಗಿಸುವುದು, ದಂಡ ಮತ್ತು ಸಪೋಟ್, ಬಸ್ಕಿ ಮತ್ತು ವಾರ್‍ಲಾಗ ಒಡೆಯುವ ಸ್ಪರ್ಧೆಯನ್ನು ಶ್ರೀ ಬಿ.ವಿ. ಕಾರಂತ ರಂಗಮಂದಿರ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನಡೆಸಲಾಗುವುದು.
 • ದಿನಾಂಕ 29-9-2019 ರಂದು ಉದ್ಘಾಟನಾ ಕಾರ್ಯಕ್ರಮವನ್ನು ಮತ್ತು ನಾಡಕುಸ್ತಿ ಪಂದ್ಯಾವಳಿಗಳು ನಡೆಸಲು ಉದ್ದೇಶಿಸಲಾಗಿದೆ.
 • ದಿನಾಂಕ 30-9-2019 ರಂದು 3ನೇ ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ಪಂದ್ಯಾವಳಿಗಳು ನಡೆಸಲು ಉದ್ದೇಶಿಸಲಾಗಿದೆ.
 • ದಿನಾಂಕ 1-10-2019 ರಂದು 11ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ.
 • ದಿನಾಂಕ 2-10-2019 ಮತ್ತು 3-10-2019 ರಂದು 37ನೇ ರಾಜ್ಯಮಟ್ಟದ ಪಾಯಿಂಟ್ ಕುಸ್ತಿ ಪಂದ್ಯಾವಳಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.
 • ದಿನಾಂಕ 3-10-2019 ರಂದು ರಾಜ್ಯಮಟ್ಟದ ಪುರುಷರ, ಮಹಿಳೆಯರ ಹಾಗೂ ಪುರುಷರ ಮತ್ತು ಮಹಿಳೆಯರ ವಿಶೇಷ ಚೇತನರ ಪಂಜ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ.
 • ದಿನಾಂಕ 4-10-2019 ರಂದು ರಾಜ್ಯಮಟ್ಟದ, ವಿಭಾಗ ಮಟ್ಟದ ಹಾಗು ಮಹಿಳಾ ಕುಸ್ತಿ ಪಂದ್ಯಾವಳಿಯ ಅಂತಿಮ ಕುಸ್ತಿ ಪಂದ್ಯಾವಳಿ ಹಾಗೂ ನಾಡಕುಸ್ತಿ ಪಂದ್ಯಾವಳಿಗಳು ನಡೆಸಲಾಗುವುದು.

ಕುಸ್ತಿ ಪಟುಗಳು ಹಾಗೂ ಸಂಬಂಧಪಟ್ಟ ಎಲ್ಲರ ಮಾಹಿತಿಗಾಗಿ:

ಮೈಸೂರು ದಸರಾ ಮಹೋತ್ಸವ – ೨೦೧೯
ಕುಸ್ತಿ ಉಪಸಮಿತಿ

 

 • ದಸರಾ ಕುಸ್ತಿ ಪಂದ್ಯಾವಳಿಗಳು ದಿನಾಂಕ 29-9-2019 ರಿಂದ ದಿನಾಂಕ 4-10-2019 ರವರೆಗೆ ಒಟ್ಟು 06 ದಿನಗಳ ಕಾಲ ಶ್ರೀ ಡಿ. ದೇವರಾಜ ಅರಸ್ ವಿವಿದೋದ್ಧೇಶ ಕ್ರೀಡಾಂಗಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನಡೆಯಲಿದೆ
 • ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಈ ವರ್ಷ 11ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ಮತ್ತು 37ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಗಳು ಹಾಗೂ 3ನೇ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಸಲಾಗುತ್ತದೆ
 • ದಿನಾಂಕ 29-9-2019 ರಂದು ಉದ್ಘಾಟನಾ ಕಾರ್ಯಕ್ರಮವನ್ನು ಮತ್ತು ನಾಡಕುಸ್ತಿ ಪಂದ್ಯಾವಳಿಗಳು ನಡೆಸಲು ಉದ್ದೇಶಿಸಲಾಗಿದೆ
 • ದಿನಾಂಕ 30-9-2019 ರಂದು 3ನೇ ಮೈಸೂರು ವಿಭಾಗಮಟ್ಟದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಗಳು ನಡೆಸಲು ಉದ್ದೇಶಿಸಲಾಗಿದೆ
 • ದಿನಾಂಕ 02-10-2019 ರಂದು 11ನೇ ರಾಜ್ಯಮಟ್ಟದ ಪುರುಷರ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ
 • ದಿನಾಂಕ 03-10-2019 ರಂದು 11ನೇ ರಾಜ್ಯಮಟ್ಟದ ಮಹಿಳೆಯರ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ
 • ದಿನಾಂಕ 04-10-2019 ರಂದು 37ನೇ ರಾಜ್ಯಮಟ್ಟದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ
 • ದಿನಾಂಕ 04-10-2019 ರಂದು ರಾಜ್ಯಮಟ್ಟದ ವಿಭಾಗ ಮಟ್ಟದ ಹಾಗು ಮಹಿಳಾ ಕುಸ್ತಿ ಪಂದ್ಯಾವಳಿಯ ಅಂತಿಮ ಕುಸ್ತಿ ಪಂದ್ಯಾವಳಿ ಹಾಗೂ ನಾಡಕುಸ್ತಿ ಪಂದ್ಯಾವಳಿಗಳನ್ನು ನಡೆಸಲಾಗುವೂದು

 

ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಕಿಕ್ಕಿಸಿ

ಸ್ಥಳ :

ಶ್ರೀ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನದ ಆವರಣ, ದೊಡ್ಡಕೆರೆ ಮೈದಾನ, ಮೈಸೂರು.

ಗೂಗಲ್ ಮ್ಯಾಪ್

ದಿನಾಂಕ :

ಸೆಪ್ಟೆಂಬರ್ 29  ರಿಂದ  ಅಕ್ಟೋಬರ್ 4, 2019 ರವರೆಗೆ

ಗ್ಯಾಲರಿ