ದರಿಯಾ ದೌಲತ್ ಬಾಗ್ | Mysuru Dasara 2019

1784 ರಲ್ಲಿ ನಿರ್ಮಾಣಗೊಂಡ ದರಿಯಾ ದೌಲತ್ ಬಾಗ್ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆಯೆಂದೆ ಖ್ಯಾತಿಗಳಿಸಿದೆ. ಹೈದರಾಲಿ ಈ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದನಾದರು , ಇದನ್ನು ಪೂರ್ಣಗೊಳಿಸಿದವನು ಟಿಪ್ಪುಸುಲ್ತಾನ್. ಈ ಪ್ರಾಂತ್ಯದಲ್ಲಿ ನೋಡಲೇ ಬೇಕಾದ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಅರಮನೆ 1959ರಲ್ಲಿ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನವನ್ನು ಗಳಿಸಿತು. ಶ್ರೀರಂಗಪಟ್ಟಣದ ಮೂಲಕ ಹಾದು ಹೋಗುವ ಪ್ರತಿ ಪ್ರವಾಸಿಗನು ಈ ತಾಣಕ್ಕೆ ಭೇಟಿಕೊಡಲೆ ಬೇಕು.ದರಿಯಾ ದೌಲತ್ ಬಾಗ್ ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಯನ್ನು ಹೊಂದಿದ್ದು, ಫ್ರೆಸ್ಕೊ ಎಂಬ ಚಿತ್ರಕಲಾ ಶೈಲಿಯನ್ನು ಹಾಗು ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಈ ಕಟ್ಟಡದ ಮೊದಲನೆ ಮಹಡಿಯಲ್ಲಿ ಪ್ರವಾಸಿಗರು ವಿವಿಧ ಬಗೆಯ ಚಿತ್ರಗಳನ್ನು, ವರ್ಣಚಿತ್ರಗಳನ್ನು, ಮರದ ಮುದ್ರೆಗಳು, ರೇಖಾಚಿತ್ರಗಳನ್ನು ಹಾಗು ಟಿಪ್ಪು ಸುಲ್ತಾನನ ಬಟ್ಟೆಗಳನ್ನು ಹೊಂದಿದೆ. ಈ ಅರಮನೆಯ ನೆಲಮಹಡಿಯಲ್ಲಿ ಟಿಪ್ಪುವಿನ ಸೈನ್ಯವು ಬ್ರಿಟೀಷರ ವಿರುದ್ಧ ಹೋರಾಡಿದ ಪರಿಯನ್ನು ಭಿತ್ತಿಚಿತ್ರಗಳ ರೂಪದಲ್ಲಿ ಬಿಡಿಸಿ ಪ್ರದರ್ಶಿಸಲಾಗಿದೆ.

ವಿಳಾಸ:

ಧರಿಯಾ ದೌಲತ್ ಬಾಗ್, ಶ್ರೀರಂಗಪಟ್ಟಣ, ಕರ್ನಾಟಕ