ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಸ್ತು ಪ್ರದರ್ಶನ ಸ್ಥಳ ವೀಕ್ಷಣೆ | Mysuru Dasara 2019

ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಸ್ತು ಪ್ರದರ್ಶನ ಸ್ಥಳ ವೀಕ್ಷಣೆ

ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಮಂಗಳವಾರ ದಸರಾ ವಸ್ತು ಪ್ರದರ್ಶನ ಆವರಣಕ್ಕೆ ಬೇಟಿ ನೀಡಿ ವಿವಿಧ ಇಲಾಖೆಗಳು ಮತ್ತು ನಿಗಮ, ಮಂಡಳಿಗಳ ಮಳಿಗೆ ಪ್ರಗತಿ ಪರಿಶೀಲಿಸಿದರು.

ವಸ್ತು ಪ್ರದರ್ಶನ ಆರಂಬವಾಗುವ ವೇಳೆ ಬಹಳಷ್ಟು ಸರ್ಕಾರಿ ಮಳಿಗೆಗಳು ತೆರೆದಿರುವುದಿಲ್ಲ, ಈ ಬಗ್ಗೆ ಉನ್ನತ ಮಟ್ಟದ ದಸರಾ ಸಭೆಯಲ್ಲಿ ಚರ್ಚೆ ನಡೆದಿದು ಹೆಚ್ಚಿನ ಗಮನ ನೀಡಲಾಗುತ್ತಿದೆ. ಆದ್ದರಿಂದ ಮೊದಲು ಬಂದಂತಹ ಆಸಕ್ತ ಜಿಲ್ಲಾ ಪಂಚಾಯತ್ ಗಳಿಗೆ ಮತ್ತು ಇಲಾಖೆಗಳಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡಲಾಗುತ್ತಿದ್ದು ಉದ್ಘಾಟನಾ ದಿನಕ್ಕೆ ಎಲ್ಲವು ಸಿದ್ದ ವಾಗಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯಾವುದೇ ಇಲಾಖೆಗಳು ಸೆಪ್ಟಂಬರ್ 7 ರೊಳಗೆ ಮಳಿಗೆ ಕಾರ್ಯ ಆರಂಬಿಸದಿದರೆ ಅಂತಹವರಿಗೆ ಹಿಂಬದಿ ಸ್ಥಳಾವಕಾಶ ನೀಡಲಾಗುವುದು. ಸುಮಾರು 35 ರಿಂದ 40 ಮಳಿಗೆಗಳಿಗೆ ಪ್ರಾಶಸ್ತ್ಯ. ಎಂದಿನಂತೆ ಪ್ರಾಧಿಕಾರ ಪಾರ್ಕಿಂಗ್ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ನಿಭಾಯಿಸಲಿದೆ ಎಂದು ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಶಿಕುಮಾರ್ ಎನ್.ಎಂ., ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ|| ಪ್ರಸಾದ್ ಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯ ಪಾಲಕ ಇಂಜಿನಿಯರ್ ಸಿಂಧು ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.