ಜಂಬೂ ಸವಾರಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾತಂಡಗಳಿಗೆ ಅರ್ಜಿ ಆಹ್ವಾನ | Mysuru Dasara 2019

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಸರಾ ಮಹೋತ್ಸವ 2019 ರ ಪ್ರಯುಕ್ತ ದಿನಾಂಕ 08-10-2019 ರಂದು ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಕಲಾ ತಂಡಗಳು ತಮ್ಮ ತಂಡದ ಉತ್ತಮ ಭಾವಚಿತ್ರ, ಸದಸ್ಯರುಗಳ ವಿವರ, ಅಂಚೆ ವಿಳಾಸ ಹಾಗೂ ತಂಡದ ಮುಖಂಡರ ಮೊಬೈಲ್ / ದೂರವಾಣಿ ಸಂಖ್ಯೆ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಸಮನ್ವಯಾಧಿಕಾರಿಗಳು, ಮೆರವಣಿಗೆ ಉಪಸಮಿತಿ, ಪೊಲೀಸ್ ಆಯುಕ್ತರ ಕಚೇರಿ, ಮಿರ್ಜಾರಸ್ತೆ, ನಜರ್ ಬಾದ್ ಮೈಸೂರು ಇಲ್ಲಿಗೆ ಸೆಪ್ಟೆಂಬರ್ 17 ರೊಳಗೆ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಿದ ಕಲಾ ತಂಡಗಳು ಉತ್ತಮ ಪೋಷಕ ಹೊಂದಿದ ವಿಶೇಷ ಹಾಗೂ ವಿಭಿನ್ನ ಕಲಾ ಪ್ರಕಾರ ಹೊಂದಿದವರನ್ನು ತಜ್ಞರ ಸಮಿತಿಯಿಂದ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2418739 ಗೆ ಸಂಪರ್ಕಿಸಬಹುದು