ಕವಿಗೋಷ್ಠಿ ಸರಣಿ | Mysuru Dasara 2019

ಕವಿಗೋಷ್ಠಿ ಸರಣಿವಿಕಾಸ, ವಿನೋದ, ವಿಶಿಷ್ಠ ಮತ್ತು ಪ್ರಧಾನ ದಸರಾ ಕವಿಗೋಷ್ಠಿ ಸೆಪ್ಟಂಬರ್ 24 ರಿಂದ 27 ರವರೆಗೆ ನಾಲ್ಕು ದಿನಗಳು ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ.

ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಸೋಮವಾರ ದಸರೆ ಕವಿಗೋಷ್ಠಿಯ ಸಂಬಂದ  ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದರು. ಸೆಪ್ಟಂಬರ್ 24 ರಂದು ಕವಿ, ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಕವಿಗೋಷ್ಠಿ ಉದ್ಘಾಟಿಸುವರು, ಜಿಲ್ಲಾ ಉಸ್ತುವಾರಿಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಮುಖ್ಯಅತಿಥಿಗಳಾಗಿ ಭಾಗವಯಿಸುತ್ತಾರೆ. ಖ್ಯಾತ ಕವಿಗಳು ಡಾ.ಸಿದ್ದಲಿಂಗಯ್ಯ ಅವರು ವಿಶೇಷ ಆಹ್ವಾನಿತರಾಗಿರುತ್ತಾರೆ. ಚಾಮರಾಜ ಕ್ಷೇತ್ರದ ಶಾಸಕರಾದ ವಾಸು ರವರು ಪಲ್ಗೊಳ್ಳಲಿದ್ದಾರೆಎಂದು ತಿಳಿಸಿದರು.

ಮೈಸೂರು ಮತ್ತು ನೆರೆ ಹೊರೆ ಜಿಲ್ಲೆಗಳ ಉದಯೋನ್ಮುಖ ಚಿಗುರು, ಯುವ, ಮಹಿಳಾ ಮತ್ತು ಹಿರಿಯ ಕವಿಗಳ ಕವನವಾಚನ ವಿಕಾಸ ಕವಿಗೋಷ್ಠಿ ನಡೆಯಲಿದ್ದು. ಖ್ಯಾತ ಕವಯಿತ್ರಿ ಹಾಗೂ ಸಾಹಿತಿಗಳಾದ ಡಾ. ಧರಣಿದೇವಿ ಮಾಲಗತ್ತಿ ಭಾ.ಪೋ.ಸೇ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಪ್ರೊ|| ಕೆ.ಬಿ.ಸಿದ್ದಯ್ಯ ರವರು ಮುಖ್ಯ ಅತಿಥಿಗಳಾಗಿ ಹಾಗೂ ಉದಯೋನ್ಮುಖ ಗಾಯಕ ಮಾಸ್ಟರ್ ಹೃತ್ವಿಕ್ ಚಿಗುರು ಅತಿಥಿಯಾಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.

ಸೆಪ್ಟಂಬರ್ 25ರಂದು ವಿನೋದ ಕವಿಗೋಷ್ಠಿ ಮತ್ತು ಗೀತಗಾಯನ (ಹಾಸ್ಯ ಕವಿಗೋಷ್ಠಿ) ನಡೆಯಲಿದ್ದು, ಪ್ರಖ್ಯಾತಹಾಸ್ಯ ಕವಿಗಳಿಂದ ಹಾಸ್ಯ ಚುಟುಕಗಳ ಜುಗಲ್‍ಬಂದಿ (ಡಾ.ಚಂ.ಪಾ, ಶ್ರೀ ಬಿ.ಆರ್. ಲಕ್ಷ್ಮಣರಾವ್, ಶ್ರೀ ದುಂಡಿರಾಜ್ ಮತ್ತುತಂಡ) ಹಾಗೂ ಸಂಗೀತ ಗೋಷ್ಠಿ (ಶ್ರೀ ಪಂಚಮ ಹಳಿಬಂಡಿ ಮತ್ತುತಂಡ) ಏರ್ಪಡಿಸಲಾಗಿದೆ. ಡಾ. ಮುಖ್ಯಮಂತ್ರಿ ಚಂದ್ರು, ಕಲಾವಿದರು ಹಾಗೂ ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿಪ್ರಾಧಿಕಾರ, ಮುಖ್ಯ ಅತಿಥಿಗಳಾಗಿರುತ್ತಾರೆ, ಸಕ್ಕರೆ ಸಚಿವರಾದ ಶ್ರೀಮತಿ ಗೀತಾ ಮಹದೇವಪ್ರಸಾದ್ ಹಾಗೂ ಚಿತ್ರ ನಟಿ ಕುಮಾರಿಮಯೂರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸೆಪ್ಟಂಬರ್ 26 ರಂದು, ವಿಶಿಷ್ಟ ಕವಿಗೋಷ್ಠಿ (ವಿಶೇಷ ಕವಿಗೋಷ್ಠಿ) ಸಮಾಜದ ನಿರ್ಲಕ್ಷಿತ, ಶೋಷಿತ, ಅಸಹಾಯಕ ಹಾಗೂ ಅನಾಥಚೈತನ್ಯಗಳ ಮತ್ತು ವಿಶೇಷ ಚೇತನರ ಸುಪ್ತ ಪ್ರತಿಭೆಯಅನಾವರಣ ಇರಲಿದೆ. ವಿಧಾನ ಪರಿಷತ್ ಸದಸ್ಯರು ಮತ್ತು ಚಿತ್ರನಟಿಯೂ ಆಗಿರುವ ಡಾ.ಜಯಮಾಲ ಅವರು ಅಧ್ಯಕ್ಷತೆವಹಿಸಲಿದ್ದಾರೆ,  ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅವರು ಮತ್ತು ಖ್ಯಾತ ಸಾಹಿತಿಗಳು ಶ್ರೀಮತಿ ಕೆ. ನೀಲಾ ವಿಶೇಷ ಆಹ್ವಾನಿತರಾಗಿರುತ್ತಾರೆ. ಕೇಂದ್ರ ನಾಗರಿಕ ಸೇವಾ ರ್ಯಾಂಕ್ ವಿಜೇತ ಮೈಸೂರಿನ ಪ್ರತಿಭೆ ಕೆಂಪ ಹೊನ್ನಯ್ಯ ಅವರು ಆಶಯ ನುಡಿಗಳನ್ನಾಡಲಿದ್ದಾರೆ.

ವಿಖ್ಯಾತರ ಕವಿಗೋಷ್ಠಿ ಅಥವಾ ಪ್ರಧಾನ ಕವಿಗೋಷ್ಠಿ ಸೆಪ್ಟಂಬರ್ 27ರಂದು ನಡೆಯಲಿದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಮುಖಕವಿಗಳು ಭಗವಹಿಸಲಿದ್ದಾರೆ. ಸಾಹಿತಿ ಹಾಗೂ ಗೀತ ರಚನಕಾರಜಯಂತ್ ಕಾಯ್ಕಿಣಿ ವಿಶೇಷ ಆಹ್ವಾನಿತರಾಗಿರುತ್ತಾರೆ, ಕನ್ನಡಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಸ್.ಜಿ.ಸಿದ್ದಾರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ಕನ್ನಡವಿಶ್ವವಿದ್ಯಾನಿಲಯದ ಕುಲಪತಿಗಳು ಡಾ ಮಲ್ಲಿಕಾ ಘಂಟಿ ಅವರುಮುಖ್ಯ ಅತಿಥಿಗಳಾಗಿ ಕವಿಗೋಷ್ಠಿ ಯನ್ನು ನಡೆಸಿಕೊಡಲಿದ್ದಾರೆಎಂದು ತಿಳಿಸಿದರು.

ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ಎಸ್.ವರ್ಧನ್, ಕಾರ್ಯಧ್ಯಕ್ಷರು ಹಾಗೂ ಕುವೆಂಪು ಕನ್ನಡ ಅಧ್ಯಯನಸಂಸ್ಥೆಯ ಸಹಾಯಕ ಪ್ರಾಧ್ಯಾಪಕರು ಎನ್. ಕೆ. ಲೋಲಾಕ್ಷಿ  ಮತ್ತು ಕಾರ್ಯದರ್ಶಿಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್. ಬಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು