ಕವಿಗೋಷ್ಟಿ | Mysuru Dasara 2019

ಮೈಸೂರು ದಸರಾ ಕವಿ ಗೋಷ್ಠಿ ಒಂದು ವಿಶಿಷ್ಟ ವೇದಿಕೆಯಾಗಿದ್ದು, ಕವಿತಾಪ್ರಿಯರು ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಕ್ರಮಗಳು - 2019

ಮೈಸೂರಿನ ವಿಜಯದಶಮಿ ಆಚರಣೆಯು ನವರಾತ್ರಿ, ದಸರಾ, ಆಯುಧಪೂಜೆ, ಮಹಾನವಮಿ ಇತ್ಯಾದಿ ಹೆಸರುಗಳಿಂದ ಮಾನ್ಯತೆ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ‘ಮೈಸೂರು ದಸರಾ’ ಎಂದೇ ತನ್ನ ಅಸ್ಥಿತೆಯನ್ನು ಛಾಪಿಸಿರುವ ದಸರಾ ಹಬ್ಬವನ್ನು ಕಳೆದ 408 ವರ್ಷಗಳಿಂದಲೂ ಆಚರಣೆ ಮಾಡಲಾಗುತ್ತಿದೆ. ರಾಜಪ್ರಭುತ್ವದಿಂದ ಆರಂಭಗೊಂಡು ಸಮಕಾಲೀನ ಸಂದರ್ಭದ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಸಮಾನತೆಯ ಆಶಯದಲ್ಲಿ ರೂಪುಗೊಂಡಿದೆ. ಎಲ್ಲವನ್ನೂ – ಎಲ್ಲರನ್ನೂ ಒಳಗೊಳ್ಳುವ ಸಾಹಿತ್ಯದ ಕವಿಗೋಷ್ಠಿಗಳು ದಸರಾವನ್ನು ‘ಕಾವ್ಯದಸರಾ’ವನ್ನಾಗಿಸಿದೆ. ಈ ಬಾರಿಯ ಕವಿಗೋಷ್ಠಿಯನ್ನು ‘ಪಂಚ ಕವಿಗೋಷ್ಠಿ’ ಎಂಬ ಉಪಶೀರ್ಷಿಕೆಯಡಿ ಆಯೋಜಿಸಲಾಗುತ್ತಿದ್ದು. ಐದು ವಿಭಿನ್ನ ಗೋಷ್ಠಿಗಳಲ್ಲಿ ಭಾಗವಹಿಸುತ್ತಿರುವ ಕವಿಗಳು ಪ್ರತಿಷ್ಠಿತ ಜಗನ್ಮೋಹನ ಅರಮನೆಯ ವೇದಿಕೆಯಲ್ಲೇ ಕವನ ವಾಚಿಸುವುದು 2009ರ ಕವಿಗೋಷ್ಠಿಯ ಹೆಗ್ಗಳಿಕೆ. ವಿಸ್ಮಿತ, ವಿಕಾಸ, ವಿನೋದ, ವಿಶಿಷ್ಟ ಮತ್ತು ವಿಖ್ಯಾತ ಎಂಬ ಈ ಪಂಚ ಕವಿಗೋಷ್ಠಿಗಳಲ್ಲಿ ಕನ್ನಡ ಭಾಷೆಯ ಕಂಪು, ಭಾವನೆಗಳ ಪೆಂಪು, ಸಂಗೀತದ ಇಂಪು. ಮನಸ್ಸಿಗೆ ತಂಪು ಎರೆಯಲು ಕವಿ ಸಮೂಹ ಆಗಮಿಸುತ್ತಿದೆ. ಮೊಬೈಲ್‌-ಇಂಟರ್‌ನೆಟ್‌ಗಳು ಮಾಯಾ ಲೋಕದಲ್ಲಿ ಮುಳುಗಿರುವ ಮನಸುಗಳನ್ನು ಕಾವ್ಯ ಭಾವನೆಗಳ ಕುಸುರಿಯ ಮೂಲಕ ಎಚ್ಚರಿಸಿ ಮಾನವೀಯ ಸಂಬಂಧ ಬೆಸೆಯುವ ಈ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದೇ ಕನ್ನಡಿಗರ ಹೆಗ್ಗಳಿಕೆ.

2019ರ ಪಂಚ – ಕವಿಗೋಷ್ಟಿಗಳ ವೈಶಿಷ್ಟ್ಯವೇನೆ೦ದರೆ :-

1. ವಿಸ್ಮಿತ ಕವಿಗೋಷ್ಠಿ : ವಿಭಿನ್ನ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ಹವ್ಯಾಸಿ ಕವಿಗಳಿಗೆ ಮೊದಲ ಬಾರಿಗೆ ಈ ವೇದಿಕೆ ನಿರ್ಮಾಣ. ಇಲ್ಲಿ ವೈದ್ಯರು. ವಿಜ್ಞಾನಿಗಳು. ಇಂಜಿನಿಯರ್‌ಗಳು. ಪೊಲೀಸ್‌ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಪತ್ರಕರ್ತರು, ವಕೀಲರು. ನಟ ನಟಿಯರು, ಐಟಿ ಬಿಟಿ ಉದ್ಯೋಗಿಗಳು ಹೀಗೆ ವಿಭಿನ್ನ ವೃತ್ತಿಯ ಹವ್ಯಾಸಿ ಕವಿಗಳ ಪ್ರತಿಭಾ ಪ್ರದರ್ಶನವೇ ಈ ವಿಸ್ಮಿತ ಕವಿಗೋಷ್ಠಿ.

2. ವಿಕಾಸ ಕವಿಗೋಷ್ಠಿ : ಮೈಸೂರು ಮತ್ತು ಪ್ರಾದೇಶಿಕ ಜಿಲ್ಲೆಗಳಾದ ಹಾಸನ, ಮಂಡ್ಯ. ಮಡಿಕೇರಿ, ಚಾಮರಾಜನಗರ ಈ ಜಿಲ್ಲೆಗಳ ಪ್ರತಿಭಾವಂತ ಮಕ್ಕಳು. ಮಹಿಳೆಯರು. ಯುವಕ ಹಾಗೂ ಯುವತಿಯರು ಮತ್ತು ಹಿರಿಯ ಕವಿಗಳ ಪ್ರತಿಭಾ ಪ್ರದರ್ಶನದ ವಿಕಾಸಕ್ಕೆ ತೆರೆದ ದ್ವಾರ ಈ ವಿಕಾಸ ಕವಿಗೋಷ್ಠಿ.

3. ವಿನೋದ ಕವಿಗೋಷ್ಠಿ : ನಾಡಿನ ಪ್ರಸಿದ್ಧ ಕವಿಗಳು ಹನಿಗವನಗಳು ಮತ್ತು ಚುಟುಕಗಳ ಮೂಲಕ ಹಾಸ್ಯರಸವನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡುವ ಗೋಷ್ಠಿಯೇ ವಿನೋದ ಕವಿಗೋಷ್ಠಿ. ಹಾಸ್ಯರಸ ಸ್ಛುರಿಸುವ ಚುಟುಕು ಕಾವ್ಯ ರಸಾಯನ ಮತ್ತು ವಿನೋದ ಗೀತ ಗಾನ ರಸಾಯನ ಸಮ್ಮಿಲನದ ವಿನೂತನ ಗೋಷ್ಠಿಯಿದು.

4. ವಿಶಿಷ್ಟ ಕವಿಗೋಷ್ಠಿ : ಕಾವ್ಯಲೋಕದ ಮುಖ್ಯವಾಹಿನಿಯಲ್ಲಿ ಇಲ್ಲಿಯವರೆಗೂ ಅವಕಾಶ ವಂಚಿತರಾಗಿರುವ, ಸಾಮಾಜಿಕವಾಗಿ ಮತ್ತು ಆರ್ಥಿಕರಾಗಿ ನಿರ್ಬಲರಿರುವ ಹವ್ಯಾಸ ಕವಿಗಳ ವಿಶೇಷ ವೇದಿಕೆಯಿದು. ನಿರ್ಗತಿಕರು, ಅನಾಥರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ರೈತರು, ಆಟೋ ಚಾಲಕರು, ಪೌರ ಕಾರ್ಮಿಕರು, ವಿಚಾರಣಾಧೀನ ಕೈದಿಗಳು, ಕೂಲಿ ಕಾರ್ಮಿಕರು ತಮ್ಮ ಜೀವನದ ಸಿಹಿ-ಕಹಿ ಅನುಭವಗಳಿಗೆ ಕಾವ್ಯರೂಪವನ್ನು ಕೊಟ್ಟು, ತಮ್ಮಲ್ಲೂ ಕವಿಹೃದಯ ಇರುವುದನ್ನು ನಿರೂಪಿಸುವ ಒಂದು ಅತ್ಯಂತ ವಿಶೇಷ ಹಾಗೂ ಅಪರೂಪದ ಗೋಷ್ಠಿಯೇ ವಿಶಿಷ್ಟ ಕವಿಗೋಷ್ಠಿ.

5. ವಿಖ್ಯಾತ ಕವಿಗೋಷ್ಠಿ : ವಿಶಾಲ ಕರ್ನಾಟಕ ಸಮಗ್ರ ಜಿಲ್ಲೆಗಳನ್ನು ಮತ್ತು ಸಹವರ್ತಿ ಭಾಷೆಗಳನ್ನು ಪ್ರತಿನಿಧಿಸುವ ಪ್ರಭುದ್ಧ ಕವಿಗಳ ಕಾವ್ಯದೌತಣವೇ ಈ ವಿಖ್ಯಾತ ಕವಿಗೋಷ್ಠಿ. ಈ ಕವಿಗೋಷ್ಠಿಯಲ್ಲಿ ಎಲ್ಲ ಜಿಲ್ಲೆಗಳಿಂದ ಹಾಗೂ ಎಲ್ಲಾ ಸಹವರ್ತಿ ಭಾಷೆಗಳಿಂದ ತಲಾ ವೊಬ್ಬರು ಕವಿಗಳು ಕಾವ್ಯ ವಾಚಿಸಲಿದ್ಧಾರೆ.

ಪಾಧ್ಮಶ್ರೀ ಡಾ. ಧೊಡ್ಡರಂಗೇಗೌಡರಿಂದ ಉಧ್ಘಟನೆಗೊಳ್ಳುವ ದಸರಾ ಕವಿಗೋಷ್ಠಿಯ ಉಧ್ಘಾಟನಾ ಸಮಾರಂಭಧಲ್ಲಿ ಕನ್ನಡದ ಖ್ಯಾತ ಯುವ ಗಾಯಕರಾದ ಶ್ರೀ ಹರ್ಷ ಮತ್ತು ಕೀರ್ತನಾ ವಿಜಯಕುಮಾರ್ ರವರು ಕನ್ನಡ ಸಾರಸ್ವತ ಲೋಕದ ಖ್ಯಾತ ಕವಿಗಳ ಪ್ರಸಿದ್ಧ ಕವನಗಳ ಗೀತ ಗಾಯನಗಳನ್ನು ಪ್ರಸ್ತುತ ಪಡಿಸಲಿದ್ಧಾರೆ.

ವಿಕಾಸ ಕವಿಗೋಷ್ಠಿಯಂದು ಶ್ರೀ ಅಮ್ಮ ರಾಮಚಂದ್ರ ಮತ್ತು ಸಂಗಡಿಗರು ಜಾನಪದ ಗೀತ ಗಾಯನವನ್ನು ನಡೆಸಿಕೊಡಲಿದ್ದಾರೆ.
ವಿನೋದ ಕವಿಗೋಷ್ಠಿಯ೦ದು ಯುವಗಾಯಕರಾದ ಶ್ರೀ ಬಿ.ವಿ. ಪ್ರದೀಪ್‌ ಮತ್ತು ಶ್ರೀ ಬಿ.ವಿ.ಪ್ರವೀಣ್‌ ಸಹೋದರರು ಹಾಗೂ ಶ್ರೀಮತಿ ಶಶಿಕಲಾ ಇವರು ಶ್ರೀ ದುಂಡಿರಾಜ್‌ ಮತ್ತು ಇತರೆ ಕವಿಗಳ ಹನಿಗವನ/ಚುಟುಕಗಳೊಂದಿಗೆ ಗೀತಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ವಿಶಿಷ್ಠ ಕವಿಗೋಷ್ಠಿಯಂದು ವಿವಿಧ ವಿಶೇಷ ಶಾಲೆಗಳ ವಿಶೇಷ ಚೇತನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ವಿಖ್ಯಾತ ಕವಿಗೋಷ್ಠಿಯಂದು ಶ್ರೀ ನಾಗೇಶ್‌ ಕಂದೇಗಾಲ ಮತ್ತು ಸಂಗಡಿಗರು ಗಾನಯಾನವನ್ನು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮಗಳು ದಿನಾಂಕ ಮತ್ತು ಸಮಯ ಉದ್ಘಾಟಕರು ಮತ್ತು ಉಪಸ್ಥಿತರು
ವಿನೋದ ಕವಿಗೋಷ್ಠಿ ಮತ್ತು ಗೀತಗಾಯನ ದಿನಾಂಕ: 04-10-2019
ಶುಕ್ರವಾರ ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 1:30 ರವರೆಗೆ
ಉದ್ಘಾಟನೆ ವಿಶೇಷ ಆಹ್ವಾನಿತ ಮುಖ್ಯ ಅತಿಥಿಗಳು ಪ್ರೊ. ಆ.ರಾ. ಮಿತ್ರ, ಖ್ಯಾತ ಕವಿ ಹಾಗೂ ಸಾಹಿತಿಗಳು
ಡಾ. ಎಂ. ಮೋಹನ್ ಆಳ್ವ. ಖ್ಯಾತ ಸಂಸ್ಕೃತಿ ಚಿಂತಕರು
ಶ್ರೀ. ಮಂಡ್ಯ ರಮೇಶ್, ಖ್ಯಾತ ರಂಗಕರ್ಮಿ ಮತ್ತು ಚಲನಚಿತ್ರ ನಟರು
ವಿಶೇಷ ಚೇತನಗಳ ರಂಗತರಂಗ ದಿನಾಂಕ: 05-10-2019
ಶನಿವಾರ ಬೆಳಿಗ್ಗೆ 09:30 ರಿಂದ 10:30 ರವರೆಗೆ
ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ, ಮೈಸೂರು
ವಿಶಿಷ್ಟ ಕವಿಗೋಷ್ಠಿ: ಸಮಾಜದ ನಿರ್ಲಕ್ಷಿತ, ಶೋಷಿತ, ದಮನಿತ, ಅಸಹಾಯಕ ಹಾಗೂ ಅನಾಥ ಚೈತನ್ಯಗಳ ಮತ್ತು ವಿಶೇಷ ಚೇತನರ ಸುಪ್ತ ಪ್ರತಿಭೆಯ ಅನಾವರಣ ದಿನಾಂಕ: 05-10-2019
ಶನಿವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ
ಉದ್ಘಾಟನೆ
ವಿಶೇಷ ಆಹ್ವಾನಿತರು
ಅಧ್ಯಕ್ಷತೆ
ಮುಖ್ಯ ಅಥಿತಿಗಳು
ಡಾ.ಟಿ.ಎಸ್. ನಾಗಾಭರಣ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ
ಶ್ರೀ. ಎಸ್. ಎ. ರಾಮದಾಸ್. ಮಾನ್ಯ ಶಾಸಕರು, ಕೃಷ್ಣರಾಜ ವಿಧಾನಸಭಾ ಕ್ಷೇತ್ರ
ಶ್ರೀ. ಶಂಕರ್ ದೇವನೂರು, ಖ್ಯಾತ ವಾಗ್ಮಿಗಳು
ಡಾ. ಗುಬ್ಬಿಗೂಡು ರಮೇಶ, ಖ್ಯಾತ ಕವಿಗಳು ಮತ್ತು ಅಂಕಣಕಾರರು
ಗಾನಯಾನ ದಿನಾಂಕ: 06-10-2019
ಭಾನುವಾರ ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 10:30 ರವರೆಗೆ
ಶ್ರೀ. ನಾಗೇಶ್ ಕಂದೇಗಾಲ ಮತ್ತು ತಂಡ
ವಿಖ್ಯಾತ ಕವಿಗೋಷ್ಠಿ : ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ಸಹವರ್ತಿ ಭಾಷೆಗಳ ಪ್ರಬುದ್ಧ ಕವಿಗಳ ಕಾವ್ಯವಾಚನ ದಿನಾಂಕ: 06-10-2019
ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ
ಉದ್ಘಾಟನೆ
ಅಧ್ಯಕ್ಷತೆ
ಮುಖ್ಯ ಅಥಿತಿಗಳು
ಡಾ. ಮನು ಬಳಿಗಾರ್, ಕವಿಗಳು ಮತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್
ಡಾ. ಹೆಚ್. ಎಲ್ ಪುಷ್ಟ.ಖ್ಯಾತ ಕವಿಗಳು
ಡಾ. ನಾಗೇಂದ್ರ ಪ್ರಸಾದ್, ಖ್ಯಾತ ಗೀತರಚನಕಾರರು
ಕಾರ್ಯಕ್ರಮಗಳು ದಿನಾಂಕ ಮತ್ತು ಸಮಯ ಉದ್ಘಾಟಕರು ಮತ್ತು ಉಪಸ್ಥಿತರು
ಕಾವ್ಯಯಾನ : ಕನ್ನಡ ಸಾರಸ್ವತ
ಲೋಕದ ಖ್ಯಾತ ಕವಿಗಳ ಪ್ರಸಿದ್ಧ ಕವನಗಳ ಗೀತಗಾಯನ
ದಿ: 02/10/2019 ಬುಧವಾರ
ಬೆಳಗ್ಗೆ : 9.30 ಕ್ಕೆ
ಶ್ರೀ ಶ್ರೀಹರ್ಷ, ಖ್ಯಾತ ಗಾಯಕರು
ಕು||ಕೀರ್ತನ ವಿಜಯ್ ಕುಮಾರ್, ಖ್ಯಾತ
ಉದಯೋನ್ಮುಖ ಗಾಯಕಿ
ಹಾಗೂ ಸಂಗಡಿಗರು.
ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿ
ಉದ್ಘಾಟನಾ ಸಮಾರಂಭ
ದಿ: 02/10/2019 ಬುಧವಾರ
ಬೆಳಗ್ಗೆ : 9.30 ರಿಂದ 11.30 ರವರೆಗೆ
ಉದ್ಘಾಟನೆ


ಘನ ಉಪಸ್ಥಿತಿ


ಅಧ್ಯಕ್ಷತೆ


ಮುಖ್ಯ ಅತಿಥಿಗಳು


ವಿಶೇಷ ಆಹ್ವಾನಿತರು

ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ಖ್ಯಾತ ಕವಿಗಳು


ಶ್ರೀ ವಿ.ಸೋಮಣ್ಣ, ಮಾನ್ಯ ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ


ಶ್ರೀ ಎಲ್.ನಾಗೇಂದ್ರ, ಮಾನ್ಯ ಶಾಸಕರು
ಚಾಮರಾಜ ವಿಧಾನಸಭಾ ಕ್ಷೇತ್ರ


ಶ್ರೀ ಪ್ರತಾಪ್ ಸಿಂಹ, ಮಾನ್ಯ ಸಂಸದರು,
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರ


ಶ್ರೀ ಜೋಗಿ, ಖಾತ ಕವಿ ಹಾಗೂ ಅಂಕಣಕಾರರು ಶ್ರೀ ಸಿ.ಕೆ. ಮಹೇಂದ್ರ, ಅಧ್ಯಕ್ಷರು,
ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘ, ಮೈಸೂರು.

ವಿಸ್ಮಿತ ಕವಿಗೋಷ್ಠಿ : ವಿಭಿನ್ನ
ಕ್ಷೇತ್ರಗಳ ಕಾವ್ಯ ಪ್ರತಿಭೆಗಳ
ಅನಾವರಣ
ದಿ: 02/10/2019 ಬುಧವಾರ
ಬೆಳಗ್ಗೆ : 11.30 ರಿಂದ 1.30 ರವರೆಗೆ
ಅಧ್ಯಕ್ಷತೆ


ವಿಶೇಷ ಆಹ್ವಾನಿತರು


ಮುಖ್ಯ ಅತಿಥಿಗಳು


ಪೋ, ನೀಲಗಿರಿ ಎಂ. ತಳವಾರ್ ಖ್ಯಾತ ಸಾಹಿತಿ ಹಾಗೂ ಕವಿಗಳು


ಶ್ರೀ ಜೋಗಿ ಖ್ಯಾತ ಕವಿ ಹಾಗೂ ಅಂಕಣಕಾರರು


ಡಾ.ವೈ.ಡಿ.ರಾಜಣ್ಣ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು.

ಜಾನಪದ ಗೀತ ಗಾಯನ ದಿ: 03/10/2019 ಗುರುವಾರ ಬೆಳಗ್ಗೆ : 9.30 ರಿಂದ 10.30 ರವರೆಗೆ ಶ್ರೀ ಅಮ್ಮ ರಾಮಚಂದ್ರ ಮತ್ತು ಸಂಗಡಿಗರು
ವಿಕಾಸ ಕವಿಗೋಷ್ಟಿ : ಮೈಸೂರು ಹಾಗೂ ಪ್ರಾದೇಶಿಕ ಜಿಲ್ಲೆಗಳ
ಪ್ರತಿಭಾವಂತ ಕವಿಗಳ ಕಾವ್ಯ ದೌತಣ
ದಿ: 03/10/2019 ಗುರುವಾರ ಬೆಳಗ್ಗೆ : 10.30 ರಿಂದ 1.30 ರವರೆಗೆ ಉದ್ಘಾಟನೆ


ಅಧ್ಯಕ್ಷತೆ


ಮುಖ್ಯ ಅತಿಥಿಗಳು

ಶ್ರೀ ಕವಿರಾಜ, ಖ್ಯಾತ ಕವಿ ಮತ್ತು ಗೀತಾ |
ರಚನಕಾರರು


ಡಾ. ಹೇಮಾ ಪಟ್ಟಣಶೆಟ್ಟಿ , ಖ್ಯಾತ ಕವಿಗಳು


ಪ್ರೊ. ಪ್ರಧಾನ್ ಗುರುದತ್, ಖ್ಯಾತ ಸಾಹಿತಿಗಳು

ವಿನೋದ ಕವಿಗೋಷ್ಠಿ ಮತ್ತು ಗೀತ ಗಾಯನ : ಖಾತೆ
ಕವಿಗಳಿಂದ ಹನಿಗವನಗಳು ಕಾವ್ಯ ರಸಾಯನ ಮತ್ತು ಗಾನಯಾನ
– ಶ್ರೀ ದುಂಡಿರಾಜ್
ಮತ್ತು ಸಂಗಡಿಗರಿಂದ
ದಿ: 04/10/2019 ಶುಕ್ರವಾರ ಬೆಳಗ್ಗೆ : 10.30 ರಿಂದ 1.30 ರವರೆಗೆ ಉದ್ಘಾಟನೆ


ಅಧ್ಯಕ್ಷತೆ


ವಿಶೇಷ ಆಹ್ವಾನಿತರು


ಮುಖ್ಯ ಅತಿಥಿಗಳು

ಪ್ರೊ.ಅ.ರಾ.ಮಿತ್ರ, ಖ್ಯಾತ ಕವಿ ಹಾಗೂ ಸಾಹಿತಿಗಳು


ಶ್ರೀ ಸುಬ್ರಾಯ ಚೊಕ್ಕಾಡಿ, ಖ್ಯಾತ ಕವಿಗಳು


ಡಾ.ಎಂ.ಮೋಹನ್ ಆಳ್ವ, ಖ್ಯಾತ ಸಂಸ್ಕೃತಿ ಚಿಂತಕರು


ಶ್ರೀ ಮಂಡ್ಯ ರಮೇಶ್, ಖ್ಯಾತ ರಂಗಕರ್ಮಿ
ಮತ್ತು ಚಲನಚಿತ್ರ ನಟರು

ವಿಶೇಷ ಚೇತನಗಳು ರಂಗತರಂಗ ದಿ: 05/10/2019 ಶುಕ್ರವಾರ ಬೆಳಗ್ಗೆ : 9.30 ರಿಂದ 10.30 ರವರೆಗೆ ಮಾತೃ ಮಂಡಳಿ ಶಿಶು ವಿಕಸನ ಕೇಂದ್ರ, ಮೈಸೂರು
ಶ್ರೀ ಬಸವೇಶ್ವರ ನವಚೇತನ ಬುದ್ದಿಮಾಂದ್ಯತೆ ಶಾಲೆ,
ಡಿ.ಸಾಲುಂಡಿ
ವಿಶಿಷ್ಟ ಕವಿಗೋಷ್ಠಿ : ಕಾವ್ಯ ಲೋಕದ ಮುಖ್ಯವಾಹಿನಿಯ
ಅವಕಾಶ ವಂಚಿತ, ಸಾಮಾಜಿಕ ಮತ್ತು ಆರ್ಥಿಕ ನಿರ್ಬಲ ಚೈತನ್ಯಗಳ ಭಾವಾನುಭವಗಳ
ಕಾವ್ಯಾವರಣ
ದಿ: 05/10/2019 ಶನಿವಾರ ಬೆಳಗ್ಗೆ : 10.30 ರಿಂದ ಮಧ್ಯಾಹ್ನ 1.30 ರವರೆಗೆ ಉದ್ಘಾಟನೆ


ವಿಶೇಷ ಆಹ್ವಾನಿತರು


ಅಧ್ಯಕ್ಷತೆ


ಮುಖ್ಯ ಅತಿಥಿಗಳು

ಡಾ. ಟಿ.ಎಸ್.ನಾಗಾಭರಣ, ರಾಷ್ಟ್ರ ಪ್ರಶಸ್ತಿ ವಿಜೇತ
ಚಲನಚಿತ್ರ ನಿರ್ದೇಶಕರು.


ಶ್ರೀ ಎಸ್.ಎ.ರಾಮದಾಸ್, ಮಾನ್ಯ ಶಾಸಕರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ, ಮೈಸೂರು


ಶ್ರೀ ಶಂಕರ್ ದೇವನೂರು , ಖ್ಯಾತ ವಾಗ್ಮಿಗಳು


ಡಾ. ಗುಬ್ಬಿಗೂಡು ರಮೇಶ್, ಖ್ಯಾತ ಕವಿಗಳು ಮತ್ತು
ಅಂಕಣಕಾರರು

ಗಾನಯಾನ ದಿ: 06/10/2019 ಶನಿವಾರ ಬೆಳಗ್ಗೆ : 9.30 ರಿಂದ 10.30 ರವರೆಗೆ ಶ್ರೀ ನಾಗೇಶ್ ಕಂದೇಗಾಲ, ಖ್ಯಾತ ಗಾಯಕರು
ಮತ್ತು ಸಂಗಡಿಗರು
ವಿಖ್ಯಾತ ಕವಿಗೋಷ್ಠಿ : ವಿಶಾಲ ಕರ್ನಾಟಕದ ಜಿಲ್ಲಾವಾರು ಮತ್ತು
ಸಹವರ್ತಿ ಭಾಷೆಗಳ ಪ್ರಬುದ್ಧ ಕವಿಗಳ ಭಾವಯಾನ
ದಿ: 06/10/2019 ಶನಿವಾರ ಬೆಳಗ್ಗೆ : 10.30 ರಿಂದ ಮಧ್ಯಾಹ್ನ 1.30 ರವರೆಗೆ ಉದ್ಘಾಟನೆ


ಅಧ್ಯಕ್ಷತೆ


ಮುಖ್ಯ ಅತಿಥಿಗಳು

ಡಾ. ಮನು ಬಳಿಗಾರ್ ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು


ಡಾ. ಹೆಚ್.ಎಲ್. ಪುಷ್ಪ , ಖ್ಯಾತ ಕವಿಗಳು


ಡಾ. ನಾಗೇಂದ್ರ ಪ್ರಸಾದ್, ಖ್ಯಾತ ಗೀತಾ
ರಚನಕಾರರು

ಸ್ಥಳ :

ಜಗನ್ಮೋಹನ್ ಅರಮನೆ

ಗೂಗಲ್ ಮ್ಯಾಪ್

ದಿನಾಂಕ :

ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರವರೆಗೆ

ಗ್ಯಾಲರಿ