ಓಂಕಾರೇಶ್ವರ ದೇವಾಲಯ | Mysuru Dasara 2019

ಕೊಡಗು ಜಿಲ್ಲೆ, ಮಡಿಕೇರಿ ನಗರದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯವು ಬ್ರಹ್ಮಹತ್ಯಾ ದೋಷ ನಿವೃತ್ತಿಗಾಗಿ ಎರಡನೇ ಲಿಂಗರಾಜೇಂದ್ರ ದೊರೆಯಿಂದ ಶಾಲಿವಾಹನ ಶಕ 1741ನೇ ಇಸವಿಯಲ್ಲಿ ನಿರ್ಮಿಸಲ್ಪಟ್ಟಿದೆ. ಮೊಘಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ಈ ದೇವಾಲಯ ಇಂಡೋ ಇಸ್ಲಾಮಿಕ್, ಗಾಥಿಕ್ ವಾಸ್ತುವಿನ್ಯಾಸಗಳನ್ನು ಒಳಗೊಂಡಿದೆ. ಇಂತಹ ವಾಸ್ತುಶಿಲ್ಪವಿರುವ ಮತ್ತೊಂದು ಶಿವ ದೇವಾಲಯ ಭಾರತದಲ್ಲಿ ಕಾಣ ಸಿಗುವುದೇ ಅಪರೂಪ. ಅಂತೆಯೇ ಓಂಕಾರೇಶ್ವರ ಎಂಬ ಹೆಸರಿನ ಶಿವಲಿಂಗಗಳು ಭಾರತದಲ್ಲಿ ಕಾಣಸಿಗುವುದು ಕೂಡಾ ವಿರಳ.

ದೇವಾಲಯದ ಗರ್ಭಗುಡಿಯು ಮತ್ತು ಅದರ ಪ್ರವೇಶ ದ್ವಾರವು ಎಲ್ಲಾ ದೇವಾಲಯಗಳಂತೆ ಕಿರಿದಾಗಿರದೆ, ವಿಶಾಲವಾಗಿದ್ದು ಸರ್ವ ಋತುಗಳಲ್ಲಿಯೂ ಒಂದೇ ರೀತಿಯ ಹವಾಗುಣ ಹೊಂದಿದ್ದು, ದೇವಸ್ಥಾನದೊಳಗೆ ಮಂತ್ರೋಚ್ಛಾರಣೆ ಪ್ರತಿಧ್ವನಿಸುತ್ತದೆ.

ವಿಳಾಸ:

ಓಂಕಾರೇಶ್ವರ ದೇವಾಲಯ ಕೊಡಗು ಜಿಲ್ಲೆ