ಇರ್ಪು ಜಲಪಾತ | Mysuru Dasara 2019

ಕೊಡಗು ಹಾಗೂ ಕೇರಳ ರಾಜ್ಯದ ಗಡಿಭಾಗದ ಕುಟ್ಟ ಎಂಬ ಪ್ರದೇಶದಲ್ಲಿ ಈ ಜಲಪಾತ ಕಾಣಸಿಗುತ್ತದೆ. ಈ ಜಲಪಾತವು ಲಕ್ಷ್ಮಣ ತೀರ್ಥ ನದಿಯ ಒಂದು ಭಾಗವಾಗಿದ್ದು ಪವಿತ್ರ ಸ್ಥಳವಾಗಿದೆ. ಸುಮಾರು 60ಮೀಟರ್ ಎತ್ತರದಿಂದ ನೀರಿನ ಝರಿಗಳು ಧುಮುಕುದರೊಂದಿಗೆ ಕೊನೆಯದಾಗಿ ಕಾವೇರಿ ನದಿಯನ್ನು ಸೇರುತ್ತದೆ. ಜಲಪಾತದ ಎಡಭಾಗದಲ್ಲಿ ರಾಮೇಶ್ವರ ದೇವಸ್ಥಾನ ಕಾಣಸಿಗುತ್ತದೆ. ಈ ಕಿರಿದಾದ ಜಲಪಾತವು ಅತ್ಯಂತ ಸುಂದರ ಮತ್ತು ಹಚ್ಚ ಹಸಿರ ಪರ್ವತಗಳಿಂದ ಆವರಿಸಿದ್ದು ವಿಕ್ಷೀಸಲು ಹಿತಕರವಾಗಿದೆ.

ವಿಳಾಸ:

ಬ್ರಹ್ಮಗಿರಿ ಶ್ರೇಣಿ, ಕುರ್ಚಿ, ಕರ್ನಾಟಕ 571250