ಆಹಾರ ಮೇಳ | Mysuru Dasara 2019

ಮೈಸೂರು ದಸರಾ ಆಚರಣೆಯ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮ ಆಹಾರ ಮೇಳ. ಆಹಾರ ಮೇಳದ ಪ್ರಮುಖ ಅಂಶವೆಂದರೆ ಬುಡಕಟ್ಟು ಆಹಾರ. ಕಾಡಿನಲ್ಲಿ ಸಿಗುವ ವಿವಿಧ ಬೇರುಗಳು ಮತ್ತು ಗೆಡ್ಡೆಗಳಿಂದ ಮಾಡಿದ ಆಹಾರ, ಹಸಿರು ಎಲೆಗಳಿಂದ ಮಾಡಿದ ಭಕ್ಷ್ಯಗಳು, ಬಿದಿರಿನ ಚಿಗುರುಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳು, ‘ಬಿದಿರು ಬಿರಿಯಾನಿ’ ಮತ್ತು ‘ಬಿದಿರಿನ ಅಕ್ಕಿ ಪಾಯಸ’ ಆತ್ಯಂತ ಜನಪ್ರಿಯವಾದವು. ಇತರ ಜನಪ್ರಿಯ ಭಕ್ಷ್ಯಗಳಾದ ಬಿರಿಯಾನಿ, ದಾವಣಗೆರೆ ಬೆಣ್ಣೆ ದೋಸೆ, ಧಾರವಾಡ ಪೇಡಾ, ಪಿಜ್ಜಾ, ಚೈನೀಸ್ ಭಕ್ಷ್ಯಗಳು, ಚಾಟ್ಸ್ ಮತ್ತು ವೈವಿಧ್ಯಮಯ ಹಣ್ಣಿನ ರಸಗಳು ಮತ್ತು ಸಿಹಿತಿಂಡಿಗಳನ್ನೂ ಸಹ ಸವಿಯಬಹುದು.

ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 10 ರವರೆಗೆ ನಡೆಯಲಿದೆ. ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಆಹಾರ ಮೇಳವನ್ನು ಮೈಸೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೆಸ್ ಹೋಟಲ್ ಪಕ್ಕದ ಮುಡಾ ಮೈದಾನದಲ್ಲಿ ದಿನಾಂಕ 29-09-2019 ರಿಂದ 10-10-2019 ರವರೆಗೆ ಆಯೋಜಿಸಲಾಗಿದೆ.

ಈ ಎರಡು ಸ್ಥಳಗಳಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 10 ರವರೆಗೆ ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಳಪಾಕ ಸ್ಪರ್ಧೆ ಮತ್ತು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಸವಿಭೋಜನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.

ನಳಪಾಕ ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸುವವರು ಸಿ.ಜಯಮ್ಮ(ಮೊ.ನಂ:9880817552) ಮತ್ತು ರತ್ನಮ್ಮ (ಮೊ.ನಂ:9964807138) ಇವರನ್ನು ಹಾಗೂ ಸವಿಭೋಜನಾ ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸುವವರು ಟಿ.ಜೆ.ಲಕ್ಷ್ಮೀ(ಮೊ.ನಂ:9448032268) ಮತ್ತು ವಿದ್ಯಾ.ಆರ್ (ಮೊ.ನಂ:9483901602) ಇವರನ್ನು ದಿನಾಂಕ:21-09-2018 ರಂದು ಸಂಜೆ 5 ಗಂಟೆಯೊಳಗೆ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹಳೆ ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ರೂಂ ನಂ.17 ರಲ್ಲಿ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಅರ್ಜಿ ನಮೂನೆಗಳನ್ನು ಆಹಾರಮೇಳ ಕಛೇರಿ (ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹಳೆ ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ರೂಂ ನಂ.17) ರಲ್ಲಿ ಪಡೆಯಬಹುದು. ನಮೂನೆಗಳನ್ನು ಸಂಬಂಧಪಟ್ಟ ದಾಖಲೆಗಳೊಡನೆ ಸೆಪ್ಟೆಂಬರ್ 25 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422107 ನ್ನು ಸಂಪರ್ಕಿಸುವುದು ಎಂದು ದಸರಾ ಆಹಾರಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳ :

1. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ

ಗೂಗಲ್ ಮ್ಯಾಪ್

2. ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮೂಡಾ ಮೈದಾನಗಳಲ್ಲಿ ಆಯೋಜಿಸಲಾಗಿದೆ.

ಗೂಗಲ್ ಮ್ಯಾಪ್

ದಿನಾಂಕ :

ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 10 ರವರೆಗೆ

ಗ್ಯಾಲರಿ