ಅರಮನೆ ಪ್ರವೇಶಿಸಿದ ದಸರಾ ಆನೆಗಳ ಎರಡನೇ ತಂಡ | Mysuru Dasara 2019

ಅರಮನೆ ಪ್ರವೇಶಿಸಿದ ದಸರಾ ಆನೆಗಳ ಎರಡನೇ ತಂಡ

ಅರಮನೆ ಪ್ರವೇಶಿಸಿದ ದಸರಾ ಆನೆಗಳ ಎರಡನೇ ತಂಡ, ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾಂಪ್ರದಾಯಿಕ ಸ್ವಾಗತ.

ದಸರಾ-2017 ರಲ್ಲಿ ಪಾಲ್ಗೊಳ್ಳಲು ಅರಣ್ಯ ಇಲಾಖೆ ಈ ಬಾರಿ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು 15 ಆನೆಗಳಿಗೆ ಅವಕಾಶ ನೀಡಿದ್ದು, ಮೊದಲ ತಂಡದ ಎಂಟು ಆನೆಗಳು ಆಗಸ್ಟ್ 17 ರಂದು ಅರಮನೆ ಪ್ರವೇಶಿಸಿತ್ತು. ಎರಡನೇ ತಂಡದ ಏಳು ಆನೆಗಳು ಗುರುವಾರ ಸಂಜೆ ಅರಮನೆ ಜಯಮಾರ್ತಾಂಡ ದ್ವಾರದ ಮೂಲಕ ಅರ್ಜುನ ಪಡೆಯನ್ನು ಸೇರಿತು. ಇಂದು ಗೋಪಾಲಸ್ವಾಮಿ, ಕೃಷ್ಣ ಮತ್ತು ದ್ರೋಣ ಆನೆಗಳು ಮತ್ತಿಗೋಡು ಆನೆ ಶಿಬಿರದಿಂದ (ನಾಗರಹೊಳೆ ಅರಣ್ಯ).  ವಿಕ್ರಮ್, ಗೋಪಿ, ಹರ್ಷ ಮತ್ತು ಪ್ರಶಾಂತ ಆನೆಗಳು ದುಬಾರೆ ಆನೆ ಶಿಬಿರದಿಂದ ಕರೆತರಲಾಗಿದೆ.

ಜಿಲ್ಲಾಧಿಕಾರಿಗಳು ಮಾತನಾಡುತ್ತ ಎರಡನೇ ತಂಡದ ಆನೆಗಳಿಗೂ ಅರಮನೆ ಮಂಡಳಿ ವತಿಯಿಂದ ಸ್ವಾಗತಿಸಿದ್ದು, ಮಾವುತರ Pಮತ್ತು ಕಾವಾಡಿ ಕುಟುಂಬಗಳಿಗೆ ಈಗಾಗಲೆ ವಸತಿಗಾಗಿ ಷೆಡ್‍ಗಳನ್ನು ಸಿದ್ದಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ನಿತ್ಯಬಳಕೆಯ ವಸ್ತುಗಳ ಕಿಟ್ಗಳನ್ನು ಅರಮನೆ ಮಂಡಳಿವತಿಯಿಂದ ವಿತರಿಸಿದರು.

ವಲಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಏಳುಕುಂಡಲು ಮಾತನಾಡಿ ಎಲ್ಲಾ 15 ಆನೆಗಳು ಆರೋಗ್ಯವಾಗಿದ್ದು ವಿಶ್ವವಿಖ್ಯಾತ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಆನೆ ವೈದ್ಯಾಧಿಕಾರಿ ಡಾ. ನಾಗರಾಜ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಜೊತೆಗಿದ್ದರು.