Dasara Sports | Mysuru Dasara 2019

Dasara Sports is a popular event with the sports enthusiasts. Sports persons from across the state particpate in various competitions.

ಮೈಸೂರು ಜಿಲ್ಲಾ ದಸರಾ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಯುವ ಸಭಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯಕ್ತಾಶ್ರಯದಲ್ಲಿ 2019-20ನೇ ಸಾಲಿನ ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ.ಕೋಟೆ, ಮೈಸೂರು, ನಂಜನಗೂಡು ಮತ್ತು ಟಿ.ನರಸೀಪುರ ತಾಲ್ಲೂಕುಗಳಲ್ಲಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿರುತ್ತದೆ.

ಸೆ.14 ರಂದು ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಲೋಕೇಶ್ ಬಿ. ಜಿಮ್ನಾಸ್ಟಿಕ್ ತರಬೇತುದಾರರು-9449175644, ಗೋವಿಂದನಾಯಕ ಜಿ.ಕೆ-8197428751 ಇವರನ್ನು ನೇಮಿಸಲಾಗಿದೆ.

ಸೆ.15 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಚಾಮಹಳ್ಳಿ ಗ್ರಾಮದ ಸೆಂಟ್‍ಪಲ್ಸ್ ಸ್ಕೂಲ್‍ನಲ್ಲಿ ನಡೆಯಲಿದ್ದು, ಇದರಸಂಚಾಲಕರಾಗಿ ನರಸಿಂಹರಾಜು-9901349549 ಇವರನ್ನು ನೇಮಿಸಲಾಗಿದೆ.

ಸೆ.16 ರಂದು ಮೈಸೂರು ತಾಲ್ಲೂಕಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಸಂಚಾಲಕರಾಗಿ ಬಾಲು ಬಿ. ಜಿಮ್ನಾಸ್ಟಿಕ್ ತರಬೇತುದಾರರು-9731934937 ಹಾಗೂ ಡಾ. ನವೀನ್‍ಕುಮಾರ್ ಸಿ.-9113948696 ಇವರನ್ನು ನೇಮಿಸಲಾಗಿದೆ.

ಸೆ.18 ರಂದು ನಂಜನಗೂಡು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಬಾಲರಾಜುಎಂ.ಪಿ.-988098480 ಇವರನ್ನು ನೇಮಿಸಲಾಗಿದೆ. ಹಾಗೂ ಟಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದ ನವಚೇತನ ಸ್ಪೋಟ್ರ್ಸ್ ಕ್ಲಬ್ ಆವರಣದಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ರೇವಣ್ಣ
9241416003 ಇವರನ್ನು ನೇಮಿಸಲಾಗಿದೆ.

ತಾಲ್ಲೂಕುಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಕ್ರೀಡೆಗಳ ವಿವರ ಇಂತಿದೆ.

ಅಥ್ಲೆಟಿಕ್ಸ್ ಪುರುಷರು ಹಾಗೂ ಮಹಿಳೆಯರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ. ಹರ್ಡಲ್ಸ್, 4*100 ಮೀ. ರಿಲೇ, 4*400 ಮೀ. ರಿಲೇ, ವಾಲಿಬಾಲ್, ಫುಟ್‍ಬಾಲ್,

ಖೋ-ಖೋ, ಹಾಗೂ ಕಬಡ್ಡಿ ಪಂದ್ಯಗಳನ್ನು ಆಯೋಜಿಸಲಾಗಿದೆ. ದಸರಾ ಕ್ರೀಡಾ ಉಪಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Venue :

Chamundi  Vihar Stadium

Google Map

Date :

29th September onwards

Gallery