ಕೃಷ್ಣರಾಜಸಾಗರ | Mysuru Dasara 2019

ಕಾವೇರಿನದಿಗೆ ಅಡ್ಡವಾಗಿ ಅಣೆಕಟ್ಟು ಕಟ್ಟಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವಾಕಾಂಕ್ಷೆ ಫಲವಾಗಿ ಭಾರತ ರತ್ನ ಮೋಕ್ಷಗೊಂಡ ವಿಶ್ವೇಶ್ವರಯ್ಯನವರ ಯೋಜನೆಯಾಗಿ ಸುಮಾರು 80 ವರ್ಷಗಳ ಹಿಂದೆ ಈ ಅಣೆಕಟ್ಟು ನಿರ್ಮಿಸಲಾಯಿತು. ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನಗಳ ಜೀವನಾಡಿ ಹಾಗೂ ಜೀವನದಿಯಾದ ಕಾವೇರಿಗೆ ಕಟ್ಟಿರುವ ಈ ಅಣೆಕಟ್ಟೆಯ ತಳ ಭಾಗದಲ್ಲಿ ಪ್ರಖ್ಯಾತ ಬೃಂದಾವನ ಉದ್ಯಾನ, ಸಂಗೀತ ಕಾರಂಜಿಗಳಿದ್ದು ದೇಶವಿದೇಶಗಳ ಪ್ರವಾಸಿಗರು ಇಲ್ಲಿಗೆ ದಿನನಿತ್ಯ ಭೇಟಿ ನೀಡುತ್ತಾರೆ. ಇದು ಮೈಸೂರಿಗೆ 15 ಕಿಲೋಮೀಟರ್ ದೂರದಲ್ಲಿದೆ.

ವಿಳಾಸ:

ಕೃಷ್ಣರಾಜಸಾಗರ ಅಣೆಕಟ್ಟು ಕರ್ನಾಟಕ 571607

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 20.2 ಕಿಲೋಮೀಟರ್-ರೈಲ್ವೆ ನಿಲ್ದಾಣ ದಿಂದ : 19 ಕಿಲೋಮೀಟರ್-ವಿಮಾನ ನಿಲ್ದಾಣ ದಿಂದ : 30 ಕಿಲೋ ಮೀಟರ್