ಮೈಸೂರು ರೇಷ್ಮೆ | Mysuru Dasara 2019

ಮೈಸೂರು ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. “ಮೈಸೂರು ರೇಷ್ಮೆ” ಹೆಸರಿನ ಅಡಿಯಲ್ಲಿ ‘ಬೌದ್ಧಿಕ ಆಸ್ತಿ ಹಕ್ಕುಗಳು’ ನಿಯಮದಂತೆ ಭೌಗೋಳಿಕ ಸೂಚಕವಾಗಿ ದಾಖಲಾಗಿದೆ. ಕರ್ನಾಟಕವು ಮೈಸೂರು ರೇಷ್ಮೆಗೆ ಮಾತೃಭೂಮಿ. ಕರ್ನಾಟಕ ರೇಷ್ಮೆಯ ಕೃಷಿಯು 215 ವರ್ಷಗಳ ಇತಿಹಾಸ ಹೊಂದಿದೆ.
1785 ರಲ್ಲಿ ಮೈಸೂರು ಹುಲಿ- ಟಿಪ್ಪು ಸುಲ್ತಾನ್ ಮೈಸೂರು ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಆರಂಭಿಸಿದನು. ಟಿಪ್ಪುವಿಗೆ ಮೈಸೂರು ರಾಜ್ಯವು ರೇಷ್ಮೆಯನ್ನು ಉತ್ಪಾದಿಸುವ ದೇಶಗಳಲ್ಲಿ ಅಗ್ರಗಣ್ಯ ರಾಜ್ಯವಾಗಬೇಕೆಂಬ ಬಯಕೆ ಇತ್ತು ಈ ದೊರೆಯ ಕನಸು 150 ವರ್ಷಗಳ ನಂತರ ಅವಧಿಯಲ್ಲಿ ನಿಜವಾಯಿತು. ಈ ಅವಧಿಯಲ್ಲಿ ಕರ್ನಾಟಕ ರೇಷ್ಮೆ ಕೃಷಿಯ ತನ್ನ ದೀರ್ಘ ಪ್ರಯಾಣದಲ್ಲಿ ಅನೇಕ ಏರಿಳಿತ ಕಂಡಿದೆ.
ದೇಶದಲ್ಲಿ ಉಪ್ಪು ನೇರಳೆ ಅಥವಾ ಹಿಪ್ಪುನೇರಳೆ ರೇಷ್ಮೆ ಕೃಷಿ ಮಾದರಿಯಾಗಿ ರೂಪಾಂತರಗೊಂಡು, 19 ನೇ ಶತಮಾನದ ಆದಿಯಲ್ಲಿ ವಿಶ್ವದ ರೇಷ್ಮೆ ಕೃಷಿ ಕುಸಿದ ಸಂದರ್ಭದಲ್ಲಿ, ಮೈಸೂರು ರೇಷ್ಮೆ ಕೃಷಿಯ ಉದ್ಯಮ ನಿರಂತರವಾಗಿ ಅಭಿವೃದ್ಧಿ ಹೊಂದಿತು.
ಆದರೂ, ವಿಲಕ್ಷಣ ರೇಷ್ಮೆಹುಳುಗಳ ಅನೇಕ ವಿಧಗಳು ನಾಶವಾದವು. ಅತ್ಯಂತ ಧೃಡ/ಗಟ್ಟಿ ಜಾತಿಯ ರೇಷ್ಮೆಹುಳುಗಳು ಈ ಅವಧಿಯಲ್ಲಿ ಉಳಿದುಕೊಂಡವು. ಮತ್ತು ಇಂದಿಗೂ ಅದು ಭಾರತದಲ್ಲಿ ಹಿಪ್ಪುನೇರಳೆ ರೇಷ್ಮೆ ಕೃಷಿಯ ಬೆನ್ನುಮೂಳೆಯಂತಿದೆ (ಆಧಾರವಾಗಿದೆ).