ಮೈಸೂರು ದಸರಾದ ಲಾಂಛನ | Mysuru Dasara 2019

ಮೈಸೂರು ದಸರಾದ ಲಾಂಛನ

ಮೈಸೂರು ದಸರಾದ ಚಿಹ್ನೆ ಅಥವಾ ಲಾಂಛನವು ನಮ್ಮ ನಾಡಹಬ್ಬದ ಸಾಕಾರವಾಗಿದೆ. ವಿಜಯ ದಶಮಿಯಂದು ನಡೆಯುವ ಭವ್ಯ ಜಂಬೂ ಸವಾರಿಯ ಸಂಕೇತವೂ ಆಗಿದೆ. ಜಂಬೂ ಸವಾರಿಯ ಮುಖ್ಯ ಆಕರ್ಷಣೆಯನ್ನು ನಾವಿಲ್ಲಿ ನೋಡಬಹುದಾಗಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯು, ಚಿನ್ನದ ಪಲ್ಲಕ್ಕಿಯಲ್ಲಿ, ವಿಶೇಷವಾಗಿ ಅಲಂಕೃತಗೊಂಡಿರುವ ಗಜರಾಜನ ಮೇಲೆ ರಾರಾಜಿಸಿರುವುದು ಕಂಡು ಬರುತ್ತದೆ. ಆನೆಯ ಮಾವುತನೂ ಸಹ ಪಲ್ಲಕ್ಕಿಯ ಮುಂದೆ ಕೂತಿರುವುದದನ್ನು ಕಾಣಬಹುದಾಗಿದೆ. ಇದರ ಕೆಂಪು ಬಣ್ಣ, ಈ ಸಂಭ್ರಮದ ಹರ್ಷ ಮತ್ತು ಉತ್ಸಾಹವನ್ನು ಬಿಂಬಿಸುವ ಜೊತೆಗೆ, ೧೬೧೦ ರಿಂದ ಈ ನಾಡಹಬ್ಬದ ಪ್ರತಿ ನಮಗಿರುವ ಭಕ್ತಿಯನ್ನೂ ತೋರುತ್ತದೆ. ಈ ಲಾಂಛನವು, ‘ಒಂದು ನಾಡಹಬ್ಬ, ಹಲವು ಅನುಭವಗಳು’ ಎಂಬ ದಸರೆಯ ಮೂಲತತ್ವವನ್ನು ಬಿಂಬಿಸುವ ಒಂದು ಉತ್ತಮ ಪ್ರಯತ್ನವಾಗಿದೆ.

ಲಾಂಛನ (ಪಿಡಿಎಫ್)

ಲಾಂಛನ ( ಜೆಪಿಇಜಿ)

ಫೇಸ್ಬುಕ್ ಪುಟ ಪ್ರೊಫೈಲ್ ಚಿತ್ರ