ಸೆಂಟ್ ಫಿಲೋಮಿನಾಸ್ ಚರ್ಚ್ | Mysuru Dasara 2019

ಸೆಂಟ್ ಫಿಲೋಮಿನಾಸ್ ಚರ್ಚ್

1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು (ಗೋಪುರಗಳು), ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಈ ಚರ್ಚನ್ನು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿಸಿವೆ.

ಪ್ರವೇಶದ ಸಮಯ

ಭೇಟಿ ಸಮಯ: ಬೆಳಿಗ್ಗೆ 5 ರಿಂದ ಸಂಜೆ 6

ಪ್ರವೇಶ : ಉಚಿತ

ದೂರವಾಣಿ : 0821-2563148

ವಿಳಾಸ:

ಲೂರ್ಡ್ಸ್ ನಗರ, ಅಶೋಕ ಆರ್ಡಿ, ಲಷ್ಕರ್ ಮೊಹಲ್ಲಾ, ಮೈಸೂರು, ಕರ್ನಾಟಕ 570001

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 1.1ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ : 2.2 ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ : 12.2 ಕಿಲೋ ಮೀಟರ್