ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ | Mysuru Dasara 2019

ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ

ಗಂಧದ ನಾಡಿದು ಮೈಸೂರು,ಪ್ರಪಂಚ ಪ್ರಸಿದ್ಧ ಅತ್ಯತ್ತಮ ಶ್ರೀಗಂಧದ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ಸರ್ಕಾರಿ ಸಾಬೂನು ಕಾರ್ಖಾನೆ 1916ರಲ್ಲಿ ಆರಂಭಗೊಂಡಿತು. 1980ರಲ್ಲಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಾಗಿ ಪರಿವರ್ತನೆಗೊಂಡಿತು. ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ‘ಕೆಎಸ್‌ಡಿಎಲ್’ಗೆ ಸಮಾಜದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಹೀಗಾಗಿ ಇದಕ್ಕೆ ಲಾಭವೇ ಮುಖ್ಯವಲ್ಲ. ಜನಸಾಮಾನ್ಯರು, ಸಿರಿವಂತರು ಮತ್ತು ಆಧುನಿಕ ಮನೋಭಾವದ ಹೊಸ ಪೀಳಿಗೆಗೂ ಮೆಚ್ಚುಗೆ ಆಗುವ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಸಮಯ ಮತ್ತು ವಿವರ

ಸಮಯ : ಬೆಳಿಗ್ಗೆ 10 ರಿಂದ 12, ಮದ್ಯಾಹ್ನ 2 ರಿಂದ ಸಂಜೆ 4

ವಿಳಾಸ:

ಕುವೆಂಪು ನಗರ 2 ನೇ ಹಂತ, ಅಶೋಕಪುರಂ, ಮೈಸೂರು, ಕರ್ನಾಟಕ 570008

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :1.4ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :1.6ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ :14.3 ಕಿಲೋ ಮೀಟರ್