ಶ್ರೀ ಚಾಮರಾಜೇಂದ್ರ ಮೃಗಾಲಯ | Mysuru Dasara 2019

ಶ್ರೀ ಚಾಮರಾಜೇಂದ್ರ ಮೃಗಾಲಯ

ಇದು ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. 1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಚದರ ಅಡಿ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ . ಮೃಗಾಲಯದಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಹಿಡಿಸುತ್ತದೆ.

ಭೇಟಿ ಸಮಯ, ಪ್ರವೇಶ ಶುಲ್ಕ ಮತ್ತು ಸಂಪರ್ಕ

ಭೇಟಿ ಸಮಯ: ಬೆಳಿಗ್ಗೆ 8.30 ರಿಂದ ಸಂಜೆ 5.30, ಮಂಗಳವಾರ ರಜ.

ಪ್ರವೇಶ ಶುಲ್ಕ :

ಮಕ್ಕಳಿಗೆ :

  • ವಾರಾಂತ್ಯ 30.00 ರೂ
  • ಸರ್ಕಾರಿ ರಜೆ ದಿನಗಳಲ್ಲಿ : 30.00 ರೂ
  • ಸಾಮಾನ್ಯ ದಿನಗಳಲ್ಲಿ Rs20

ವಯಸ್ಕರಿಗೆ :

  • ವಾರಾಂತ್ಯ : 60.00 ರೂ
  • ಸರ್ಕಾರಿ ರಜೆ ದಿನಗಳಲ್ಲಿ : 60.00 ರೂ
  • ಸಾಮಾನ್ಯ ದಿನಗಳಲ್ಲಿ 50 ರೂ

ಕ್ಯಾಮೆರಾ ಶುಲ್ಕ:

  • ವಿಡಿಯೋ ಕ್ಯಾಮೆರಾ : 150 ರೂ
  • ಸ್ಟಿಲ್ ಕ್ಯಾಮೆರಾ : 20 ರೂ

ಫೋನ್ : 0821-2434425

ವೆಬ್ ಸೈಟ್: www.mysorezoo.info

ವಿಳಾಸ:

ಮೃಗಾಲಯ, ಮುಖ್ಯ ರಸ್ತೆ, ಇಂದಿರಾ ನಗರ, ಮೈಸೂರು, ಕರ್ನಾಟಕ 570010

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.2 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :3.4ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ :9.9ಕಿಲೋ ಮೀಟರ್