ರೈಲ್ವೆ ಮ್ಯೂಸಿಯಂ | Mysuru Dasara 2019

ರೈಲ್ವೆ ಮ್ಯೂಸಿಯಂ

1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ಇಲ್ಲಿ ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ, ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇವಲ್ಲದೆ ಇಲ್ಲಿನ ಮುಖ್ಯ ಆಕರ್ಷಣೆಗಳಾದ ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ. ಹಲವಾರು ಹಳೆಯ ರೈಲು ಇಂಜಿನ್ ಗಳು, ಬೋಗಿಗಳು, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ರೈಲು ಸಾಮಗ್ರಿಗಳು ಇಲ್ಲಿವೆ.

ಸಮಯ ಮತ್ತು ಪ್ರವೇಶ ಶುಲ್ಕ

ಭೇಟಿ ಸಮಯ: ಬೆಳಿಗ್ಗೆ 10 ರಿಂದ ಸಂಜೆ 5.30

ಪ್ರವೇಶ : ಉಚಿತ

ವಿಳಾಸ:

ಕೆಆರ್ಎಸ್ ಆರ್ಡಿ, ಎದುರು. ಸಿಎಫ್‌ಟಿಆರ್‌ಐ, ಮೇದಾರ್ ಬ್ಲಾಕ್, ಯಾದವಗಿರಿ, ಮೈಸೂರು, ಕರ್ನಾಟಕ 570005

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.3 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ : 800 ಮೀಟರ್ ಗಳು-ವಿಮಾನ ನಿಲ್ದಾಣ ದಿಂದ :12.6 ಕಿಲೋ ಮೀಟರ್