ಮೈಸೂರು ಅರಮನೆ | Mysuru Dasara 2019

1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿದೆ.

ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ. ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್‌, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ.

 • ಭೇಟಿ ಸಮಯ : ಪ್ರತಿ ದಿನ, ಬೆಳಿಗ್ಗೆ 10 ರಿಂದ ಸಂಜೆ 5:30 ರವೆರೆಗೆ.

ಪ್ರವೇಶ ಶುಲ್ಕ :

 • ದೊಡ್ಡವರಿಗೆ : 40. ರೂ
 • 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳಿಗೆ : ಉಚಿತ
 • ವಿದ್ಯಾರ್ಥಿಗಳಿಗೆ : 10. ರೂ
 • ವಿದೇಶೀಯರಿಗೆ : 200. ರೂ

ಸಂಪರ್ಕಿಸಲು

ಆಡಿಯೋ ಕಿಟ್ ಗಳು ಈ ಕೆಳಗಿನ ಭಾಷೆಗಳಲ್ಲಿ ದೊರೆಯುತ್ತವೆ :

 • ಆಂಗ್ಲ
 • ಹಿಂದಿ
 • ಕನ್ನಡ
 • ಜರ್ಮನ್
 • ಇಟಾಲಿಯನ್
 • ಜಪಾನೀ
 • ಫ್ರೆಂಚ್

ವಿಳಾಸ:

ಸಯ್ಯಾಜಿ ರಾವ್ ಆರ್ಡಿ, ಅಗ್ರಹಾರ, ಚಮರಾಜ್‌ಪುರ, ಮೈಸೂರು, ಕರ್ನಾಟಕ 570001

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

-ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.3 ಕಿಲೋ ಮೀಟರ್-ರೈಲ್ವೆ ನಿಲ್ದಾಣ ದಿಂದ :4ಕಿಲೋ ಮೀಟರ್-ವಿಮಾನ ನಿಲ್ದಾಣ ದಿಂದ :10 ಕಿಲೋ ಮೀಟರ್