ಕಾರಂಜಿ ಕೆರೆ | Mysuru Dasara 2019

ಕಾರಂಜಿ ಕೆರೆ ಮೈಸೂರು ನಗರದಲ್ಲಿದೆ. ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ವಹಿಸುತ್ತಿರುವ ಈ ಕೆರೆಯ ದಂಡೆಯಲ್ಲಿ ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಇದೆ. ಈ ಕೆರೆಯ ಪೂರ್ಣ ಪ್ರದೇಶ ೯೦ ಎಕರೆಯಷ್ಟು ಇದ್ದು ೫೫ ಎಕರೆ ನೀರಿನಿಂದ ತುಂಬಿದೆ. ಈ ಕೆರೆಯ ಸುತ್ತಮುತ್ತ ಪರಿಸರ ಉದ್ಯಾನವನ ನಿರ್ಮಿಸಲಾಗಿದೆ. ಚಿಟ್ಟೆ ಮತ್ತು ಹಲವು ಪಕ್ಷಿಗಳ ಉದ್ಯಾನವನವಿದೆ. ಈ ಕೆರೆಯ ವೀಕ್ಷಣೆಗೆ ರಶೀದಿ ಪಡೆಯಬೇಕಾಗಿದ್ದು , ಇದರಿಂದ ಸುಮಾರು ೫೦೦೦೦ ರೂಪಾಯಿಗಳ ದಿನದ ಆದಾಯವನ್ನು ಮೈಸೂರು ಮೃಗಾಲಯ ಪಡೆಯುತ್ತಿದೆ.

ವಿಳಾಸ:

ಜಾಕಿ ಕ್ವಾರ್ಟರ್ಸ್, ಮೈಸೂರು, ಕರ್ನಾಟಕ 570011