ದಸರಾ | Mysuru Dasara 2019

ದಸರಾ

ನವರಾತ್ರಿ ಎಂತಲೂ ಕರೆಯುವ ದಸರಾ ಹಬ್ಬವು ಜಗತ್ತಿನಾದ್ಯಂತ ಹಿಂದುಗಳು ಮತ್ತು ಅನ್ಯಧಮಿ೯ಯರು ಆಚರಿಸುವ ಅತ್ಯಂತ ಮನಮೋಹಕ ಹಬ್ಬ. ಇದನ್ನು ಅಶ್ವಿಜ ತೇದಿಯ ಹತ್ತನೆ ದಿನದ ಪ್ರಕಾರ ಅಧ೯ದಿನದಂದು ಆಚರಿಸಲಾಗುತ್ತದೆ ಮತ್ತು ೧೦ ದಿನಗಳ ವಿಜೃಂಭಣೆಯ ವಿಜಯದಶಮಿ ಆಚರಣೆಯೊಂದಿಗೆ ಅಂತ್ಯಗೊಳ್ಳುತ್ತದೆ. ಇದರ ಆಚರಣೆಯ ರೀತಿ ಪ್ರಾದೇಶಿಕವಾಗಿ ಭಿನ್ನವಾಗಿದೆ.

ಕನಾ೯ಟಕ ಪ್ರಾಂತೀಯ ರಾಜ್ಯಗಳಲ್ಲಿ ಅತ್ಯಂತ ವೇಗವಾಗಿ ಬೆಳೆದ ಪ್ರಾಂತ್ಯಗಳಲ್ಲಿ ಮೈಸೂರು ಒಂದು. ಇದು ದಸರಾ ಆಚರಣೆಯನ್ನು ಪುರಾತನ ಪದ್ಧತಿಯಲ್ಲೇ ಆಚರಿಸುತ್ತಾ ಬಂದಿದೆ. ಬಹುತೇಕ ಸೆಪ್ಟಂಬರ್/ಅಕ್ಟೋಬರ್ ತಿಂಗಳಲ್ಲಿ ಮೈಸೂರಿನ ಬೀದಿಗಳು, ಮನೆಗಳು ಸುಣ್ಣ ಬಣ್ಣಗೊಂಡು ಹೊಸ ವಿಶಿಷ್ಟವಾದ ಖುತುವಿನ ಆಚರಣೆಗೆ ಕಣ್ಣ್-ಮನ ತಣಿಸುವಂತೆ ಕಂಗೊಳಿಸುತ್ತದೆ. ದಸರಾ ಹಬ್ಬವೂ ರಾಜಪ್ರಭುತ್ವದ ಪ್ರತೀಕವಾಗಿದೆ. ದಸರಾ ಕಾಲಘಟ್ಟದಲ್ಲಿ ಬದಲಾವಣೆಯಾಗುತ್ತಾ ಬಂದು ನಾಡಜನರ ಹಬ್ಬವಾಗಿದೆ. ಸಾಮಾನ್ಯವಾಗಿ ಮೈಸೂರು ದಸರಾವನ್ನು 10 ದಿನಗಳ ಸುಧೀಘ೯ ಹಬ್ಬವೆಂದೇ ಕರೆಯಲಾಗುತ್ತೆ. 9 ದಿನಗಳ ನವರಾತ್ರಿ ಕೊನೆಯಲ್ಲಿ ಬರುವ ಹತ್ತನೆಯ ದಿನವೇ ವಿಜಯದಶಮಿಯಾಗಿದೆ. ಮೈಸೂರಿನಲ್ಲಿ ಈ ಹಬ್ಬವನ್ನು ಮೈಸೂರನ್ನು ರಕ್ಷಿಸುತ್ತಿರುವ ತಾಯಿ ಚಾಮುಂಡಿಯು ಮಹಿಷಾಸುರನೆಂಬ ಅಸುರನನ್ನು ಸಂಹರಿಸಿ ವಿಜಯ ಸಾಧಿಸಿದರ ಸಂಕೇತವಾಗಿ ಆಚರಿಸಲಾಗುತ್ತದೆ.

ದಸರಾ ದಿನಗಳಂದು ಮಹಾರಾಜರ ದಬಾ೯ರ್ ಹಾಲಿನಲ್ಲಿ ಸಾಂಸ್ಕ್ರತಿಕ ತಂಡಗಳ ಪ್ರದಶ೯ನದೊಂದಿಗೆ ಅತ್ಯುತ್ತಮ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದಶಮಿಯಂದು ತಾಯಿ ಚಾಮುಂಡಿಯ ಮೂತಿ೯ಯನ್ನು ಹೊತ್ತ ಶೃಂಗಾರಗೊಂಡ ಆನೆ ಸಾಲುಗಳ ಮೆರವಣಿಗೆ, ವಿವಿಧ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು, ವಾದ್ಯವೃಂದಗಳು, ಪೋಲಿಸ್‌ ಹಾಗೂ ಸೈನಿಕ ದಳಗಳೊಂದಿಗೆ ನಗರದ ರಾಜ ಬೀದಿಯಲ್ಲಿ ಹಾದುಹೋಗುತ್ತದೆ. ಚಾಮುಂಡೇಶ್ವರಿಯು ಮೈಸೂರು ಮಹಾರಾಜರ ಕುಲದೈವವಾಗಿದ್ದು ಆ ತಾಯಿಯ ಮೂತಿ೯ ಮೆರವಣಿಗೆಯ ಪ್ರಧಾನವಾಗಿರುತ್ತದೆ.

ಉತ್ತರ ಭಾರತದಲ್ಲಿ ದಸರಾ, ಶ್ರೀರಾಮ ರಾಕ್ಷಸ ಅರಸು ರಾವಣನನ್ನು ವಧಿಸಿದರ ಸಂಕೇತವಾಗಿದೆ. ಅಧಮ೯ದ ವಿರುದ್ಧ ಧಮ೯ದ ಜಯದ ಸಂಕೇತವಾಗಿದೆ.

ಇದೇ ದಸರಾ ಹಬ್ಬವನ್ನು ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಭಿನ್ನವಾಗಿ ಅಚರಿಸುತ್ತಾರೆ. ಬಂಗಾಳದಲ್ಲಿ ಕಾಳಿ ಅಥವಾ ದುರ್ಗಿಯ ಪೂಜೆಯೊಂದಿಗೆ ಆಚರಿಸಿದರೆ, ತಮಿಳುನಾಡಲ್ಲಿ ಲಕ್ಷ್ಮಿ, ಸರಸ್ವತಿ ಮತ್ತು ಶಕ್ತಿಯರ ಸಾಮೂಹಿಕ ಆಚರಣೆಯಾಗಿರುತ್ತದೆ. ಕೆಲವರು ದಸೇರಾ ಮತ್ತು ದಸರಾ ಒಂದೇ ಶಬ್ದದ ಸರಳ ತಜು೯ಮೆಯಾಗಿರದೆ ಎರಡು ಭಿನ್ನವಾದ ಹಬ್ಬಗಳ ಆಚರಣೆಯಾಗಿವೆ ಎಂದು ಅಭಿಪ್ರಾಯ ಪಡುತ್ತಾರೆ.

ದಸರಾ, ನವರಾತ್ರಿಯ ಕೊನೆಯ ಆಚರಣೆ. ದಸರಾದ ಒಂಭತ್ತು ದಿನಗಳ ದುಗಾ೯ದೇವಿಯ ಮೂತಿ೯ ಪೂಜೆ ಸಲ್ಲಿಕೆಯ ನಂತರ ಕೊನೆಗಾಣುವ ಹಬ್ಬ. ಗುಜರಾತಿನಲ್ಲಿ ನವರಾತ್ರಿಯಂದು ಆಚರಿಸುತ್ತಾರೆ. ಇದೇ ದಸೇರಾದ ಶುಭದಿನದಂದು ಎಷ್ಟೋ ಕುಟುಂಬಗಳು ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸದ ಶುಭ ಆರಂಭ ಮಾಡಿಸುತ್ತಾರೆ. ಈ ಪುರಾತನ ಪದ್ಧತಿಯನ್ನು ಕೇರಳದಲ್ಲಿ ಸಹ ಅನ್ಯ ಧಮ೯ದ ಅನೇಕ ಕುಟುಂಬಗಳೂ ಕೂಡ ಆಚರಿಸುತ್ತಾರೆ. ನೇಪಾಳದಲ್ಲಿ ದಸರೆಯನ್ನು ದಸಿನ್ ಎಂಬುದಾಗಿ ಆಚರಿಸಲಾಗುತ್ತೆ. ಮೈಸೂರು ದಸರಾ ಅತ್ಯಂತ ವೈಭವಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಜಗತ್ತಿನುದ್ದಗಲಕ್ಕೂ ಪ್ರವಾಸಿಗರನ್ನು ಆಕಷಿ೯ಸುವ ಹಬ್ಬವಾಗಿದೆ. ದಸರಾ ಹಬ್ಬವು ನಾಡಿನ ಎಲ್ಲಾ ಪ್ರಾಂತ್ಯದ ವಿವಿಧ ಭಾಷೆಯ ಹಾಗೂ ಎಲ್ಲಾ ಧರ್ಮೀಯರು ಆಚರಿಸುವ ನಾಡ ಹಬ್ಬವಾಗಿದೆ.

ಮೈಸೂರು ಒಡೆಯರು
ಯದುವಂಶದ ಮೊದಲ ಇತಿಹಾಸ ಅಸ್ಪಷ್ಟ. ಇದರ ಸ್ಥಾಪಕನಾದ ಯದುರಾಯ ಸೋದರ ಕೃಷ್ಣರಾಯನೊಡನೆ ದ್ವಾರಕೆಯಿಂದ ಇಲ್ಲಿ ಬಂದು ನೆಲೆಸಿದನೆಂಬ ಐತಿಹ್ಯವಿದೆಯಾದರೂ ಶಾಸನಗಳಲ್ಲಿ ಇದರ ಪ್ರಸ್ತಾಪ ಬರುವುದಿಲ್ಲ. ಆದ್ಯನಾದ ಯದುರಾಯ (ಸು. 1399-1423) ಸುಸಂದರ್ಭವೊದಗಿದಾಗ, ಮೈಸೂರಿನ ಆಗ್ನೇಯದಲ್ಲಿರುವ ಹದಿನಾಡು (ನಂಜನಗೂಡು ತಾಲ್ಲೂಕು ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬೇಕು. ಈ ಸಂದರ್ಭದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅವನ ಮೇಲಿನ ಗೌರವದಿಂದ ತಮ್ಮ ಹೆಸರಿನೊಡನೆ ಮೈಸೂರು ಅರಸರು ಒಡೆಯರು ಎಂಬ ಹೆಸರನ್ನು ಸೇರಿಸಿಕೊಳ್ಳುವ ಪರಿಪಾಠ ಬೆಳೆಯಿತೆಂದೂ ಪ್ರತೀತಿ. ಮುಂದಿನ ಅರಸರೆಲ್ಲ ಈ ಒಡೆಯರು ಎಂಬ ಕುಲನಾಮವನ್ನು ಬಳಸಿದರು.

ಯದುರಾಯನ ಅನಂತರ ಚಾಮರಾಜ (1423-59), ತಿಮ್ಮರಾಜ- (1459-78) ಹಿರಿಯ ಚಾಮರಾಜ_ (1478 – 1513), ಹಿರಿಯ ಬೆಟ್ಟದ ಚಾಮರಾಜ- (1513-53), ಈ ಪುತ್ರಿ ಪರಂಪರೆಯಲ್ಲಿ ಕ್ರಮವಾಗಿ ಆಳಿದರು. ಮೂರನೆಯ ಚಾಮರಾಜನ ಮಗ ಎರಡನೆಯ ತಿಮ್ಮರಾಜ (1553-72) ಪಾಳೆಯಗಾರರನ್ನು ಗೆದ್ದು ಬಿರುದೆಂತೆಂಬರಗಂಡ ಎಂಬ ಬಿರುದನ್ನು ಪಡೆದುಕೊಂಡ. ಅನಂತರ ಆತನ ಕಿರಿಯ ತಮ್ಮ ಬೋಳ ಚಾಮರಾಜ (1572-76) ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನ್ನು ಜಯಿಸಿ ಅವನು ಬಳಸುತ್ತಿದ್ದ ಸುಗುಣ ಗಂಭೀರ ಎಂಬ ಬಿರುದನ್ನು ತಾನೇ ಧರಿಸಿದ. ಆತನ ಅಣ್ಣ ಕೃಷ್ಣರಾಜನ ಮಗ ಬೆಟ್ಟದ ದೇವರಾಜ (1576-78) ಕೆಲಕಾಲ ಆಳಿ ವಿರಕ್ತನಾಗಿ ತಮ್ಮನಾದ ರಾಜಒಡೆಯನಿಗೆ ಮೈಸೂರಿನಲ್ಲಿ ಪಟ್ಟಾಭಿಷೇಕವನ್ನು ಮಾಡಿಸಿದ.

ಒಡೆಯರ ವಂಶದ ಚರಿತ್ರೆ ಸ್ಪಷ್ಟವಾಗಿ ಪ್ರಾರಂಭವಾಗುವುದು ಈ ಕಾಲದಲ್ಲಿ. ಕೇವಲ 33 ಹಳ್ಳಿಗಳನ್ನು ಹೊಂದಿದ್ದ ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವಾಗಿ ವಿಸ್ತರಿಸಿದವನು ರಾಜಒಡೆಯರ್ (1578-1617). ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ವಿಜಯನಗರದ ಪ್ರತಿನಿಧಿ ತಿರುಮಲರಾಯನಿಗೂ ವಿಜಯನಗರದ ಅರಸು ವೆಂಕಟನಿಗೂ ವೈಮನಸ್ಯವಿದ್ದ ಸಂದರ್ಭದಲ್ಲಿ ರಾಜೊಡೆಯ ತಿರುಮಲನನ್ನು ಅಲಕ್ಷಿಸಿ ಮೈಸೂರಿನಲ್ಲಿ ಕೋಟೆಯನ್ನು ಕಟ್ಟಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡ. ಕೊನೆಗೆ ತಿರುಮಲನನ್ನೂ ಎದುರಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ಅರಸನಾದ. ವೆಂಕಟನ ಒಪ್ಪಿಗೆ ಪಡೆದು ಸ್ವತಃ ಈ ಭಾಗದಲ್ಲಿ ವಿಜಯನಗರದ ಪ್ರತಿನಿಧಿಯಾದ. ವೆಂಕಟ ಮೈಸೂರಿನ ಸಮೀಪದ ಕೆಲವು ಭಾಗಗಳನ್ನು ಅನೇಕ ಚಿಕ್ಕಪುಟ್ಟ ಪಾಳೆಯಪಟ್ಟುಗಳನ್ನೆಲ್ಲ ಸದೆಬಡಿದ. ಶ್ರೀರಂಗಪಟ್ಟಣ ಮತ್ತು ಸುಮಾರು ಇಂದಿನ ಇಡೀ ಮೈಸೂರು ಜಿಲ್ಲೆ ಇವನ ವಶಕ್ಕೆ ಬಂದಿತು.

ಅನಂತರ ಪಟ್ಟಕ್ಕೆ ಬಂದ ರಾಜಒಡೆಯನ ಮೊಮ್ಮಗ ಚಾಮರಾಜ ಒಡೆಯರ ಕಾಲದಲ್ಲಿ (1617 – 37) ರಾಜ್ಯವಿಸ್ತರಣೆ ಮುಂದುವರಿಯಿತು. ಅನಂತರ ದೊರೆ ಇಮ್ಮಡಿ ರಾಜಒಡೆಯರ್ (1637-38), ರಣಧೀರ ಕಂಠೀರವ ನರಸರಾಜ ಒಡೆಯರ್ (1638-59), ದೇವರಾಜ ಒಡೆಯರ್ (1659-73), ಚಿಕ್ಕದೇವರಾಜ ಒಡೆಯರ್ (1673-1704), ಇಮ್ಮಡಿ ಕಂಠೀರವ ನರಸರಾಜರು (1704-14), ದೊಡ್ಡ ಕೃಷ್ಣರಾಜ (ಕೃಷ್ಣರಾಜ ಒಡೆಯರ್-) (1714-32), ಇಮ್ಮಡಿ ಕೃಷ್ಣರಾಜ (1734-66) ಇವರುಗಳು ಆಳ್ವಿಕೆ ನಡೆಸಿದರು.

ಐವತ್ತು ವರ್ಷಗಳ ನಿವಾಸಿ ಪ್ರಭುತ್ವದ ಅನಂತರ ರಾಜ್ಯ ಮತ್ತೆ ಮೈಸೂರು ರಾಜರಿಗೆ ಹಸ್ತಾಂತರವಾಯಿತು. ಆಗ ಪಟ್ಟಕ್ಕೆ ಬಂದ ಒಂಬತ್ತನೆಯ ಚಾಮರಾಜ ಒಡೆಯರು ದಿವಾನರಾದ ರಂಗಾಚಾರ್ಲು ಮತ್ತು ಕೆ. ಶೇಷಾದ್ರಿ ಅಯ್ಯರ್ ಅವರುಗಳ ನೆರವಿನಿಂದ ಮೈಸೂರು ಸಂಸ್ಥಾನದಲ್ಲಿ ರೈಲ್ವೆ ಸ್ಥಾಪನೆ, ಕಟ್ಟೆ, ನಾಲೆಗಳ ರಚನೆ ಮುಂತಾದ ಜನೋಪಯೋಗಿ ಕಾರ್ಯಗಳನ್ನೂ ರಾಜಪ್ರತಿನಿಧಿಸಭೆ ಮೊದಲಾದ ರಾಜಕೀಯ ಸಂಸ್ಥೆಗಳನ್ನೂ ಪ್ರಾರಂಭಿಸಿದ್ದಲ್ಲದೆ, ಆಡಳಿತ, ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿ ವಿಭಾಗಗಳನ್ನು ಬೆಳೆಸಿ ಮೈಸೂರು ಮಾದರಿ ಸಂಸ್ಥಾನವಾಗುವಂತೆ ಮಾಡಿದರು.

ಅನಂತರ ಇವರ ಹಿರಿಯಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ಇವರು ದೇಶದ ಸ್ಥಿತಿಯನ್ನು ಉತ್ತಮಪಡಿಸುವ ಹಲವಾರು ಕ್ರಮಗಳನ್ನು ಕೈಗೊಂಡರು. ಕನ್ನಂಬಾಡಿ ಕಟ್ಟೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಶಿವನಸಮುದ್ರದ ವಿದ್ಯುತ್ ಯೋಜನೆ ಮುಂತಾದ ಉಪಯೋಗಿ ಕಾರ್ಯಗಳನ್ನು ಕೈಕೊಂಡುದಲ್ಲದೆ, ರಾಜ್ಯದಲ್ಲಿ ವಿದ್ಯಾಭ್ಯಾಸದ ಅಭಿವೃದ್ಧಿಗಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಿದರು. ರಾಜ್ಯಾಡಳಿತದಲ್ಲಿ ಪ್ರಜೆಗಳಿಗೆ ಸಾಕಷ್ಟು ಅವಕಾಶ ಇರಬೇಕೆಂಬ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ದಿಪಡಿಸಿದರು.

ಪ್ರಜಾಪ್ರತಿನಿಧಿ ಸಭೆಯನ್ನು ಪರಿಷ್ಕರಿಸಿದರು. ಹಲವಾರು ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯರಾದರು. ಇವರ ಕಾರ್ಯಸಾಧನೆಗಳಿಂದ ಅಂದಿನ ಮೈಸೂರು ಸಂಸ್ಥಾನ ಇತರ ಎಲ್ಲ ದೇಶೀಯ ಸಂಸ್ಥಾನಗಳಿಗಿಂತ ಬಹು ಮುಂದುವರಿದಿತ್ತೆಂಬ ಖ್ಯಾತಿಯನ್ನು ಪಡೆಯಿತು. ಈ ಸಾಧನೆಗಳಿಗೆ ಸಮರ್ಥರಾದ ಪಿ. ಎನ್, ಕೃಷ್ಣಮೂರ್ತಿ, ಕಾಂತರಾಜ ಅರಸು, ಎಂ. ವಿಶ್ವೇಶ್ವರಯ್ಯ, ಮೀರ್ಜಾ ಇಸ್ಮಾಯಿಲ್ ಈ ದಿವಾನರುಗಳ ಸೇವೆಯೂ ಮುಖ್ಯವಾಗಿ ದೊರಕಿತು. ನಾಲ್ವಡಿ ಕೃಷ್ಣರಾಜ ಒಡೆಯರ ಮರಣಾನಂತರ ಯುವರಾಜ ಕಂಠೀರವ ನರಸರಾಜ ಒಡೆಯರ ಮಗ ಜಯಚಾಮರಾಜ ಒಡೆಯರ್ ಪಟ್ಟಕ್ಕೆ ಬಂದರು (8-9-1940). ದೊಡ್ಡಪ್ಪನ ಸಾಧನೆಗಳನ್ನು ಮುಂದುವರಿಸಿಕೊಂಡು ಬಂದು ದೇಶದ ಅಭಿವೃದ್ಧಿಗೆ ಮತ್ತಷ್ಟು ಕಾರಣರಾದರು. 1947 ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ ಮೈಸೂರು ಸಂಸ್ಥಾನ ಇದರ ಕಕ್ಷೆಯಲ್ಲಿರುವಂತೆ 1948 ರಲ್ಲಿ ಒಪ್ಪಂದ ಮಾಡಿಕೊಂಡರು. ಭಾರತ ಗಣರಾಜ್ಯವಾಗುವ ತನಕ (1950 ಜನವರಿ 26) ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದರು. ಇಲ್ಲಿಗೆ ಮೈಸೂರು ರಾಜತ್ವ ಕೊನೆಗೊಂಡಿತು. ಅವರು ಸಂಸ್ಥಾನದ ರಾಜಪ್ರಮುಖರಾಗಿಯೂ ಸೇವೆ ಸಲ್ಲಿಸಿದರು.

ಕಾಯೋ ಶ್ರೀ ಗೌರಿ ರಾಜವಂಶದ ಆಳ್ವಿಕೆಯಲ್ಲಿ ಮೈಸೂರು ಸಾಮ್ರಾಜ್ಯದ ಅಧಿಕೃತ ಗೀತೆಯಾಗಿತ್ತು.

ಹಿಂದಿನ ಕಾಲದ ಮೈಸೂರು ದಸರಾ