ದಸರಾ ಛಾಯಾಚಿತ್ರ ಸ್ಪರ್ಧೆ | Mysuru Dasara 2019

ದಸರಾ ಛಾಯಾಚಿತ್ರ ಸ್ಪರ್ಧೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ದಸರಾ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಒಬ್ಬರನ್ನು ಮಾತ್ರ ವಿಜೇತರಾಗಿ ಆಯ್ಕೆ ಮಾಡಲಾಗುವುದು. ವಿಜೇತರಿಗೆ 1 ಲಕ್ಷ ರೂಪಾಯಿಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ನೀಡಲಾಗುವುದು. ಒಬ್ಬರು ಗರಿಷ್ಠ 3 ಛಾಯಾಚಿತ್ರಗಳನ್ನು ಸಲ್ಲಿಸಬಹುದಾಗಿದ್ದು, ಉಪ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ,ಹೋಟೆಲ್ ಮಯೂರ ಹೊಯ್ಸಳ, ಜೆಎಲ್‍ಬಿ ರಸ್ತೆ, ಮೈಸೂರು ಇಲ್ಲಿಗೆ ದಿನಾಂಕ: 14.10.2019 ರಂದು ಸಂಜೆ 4 ಗಂಟೆಯೊಳಗಾಗಿ ಸಲ್ಲಿಸತಕ್ಕದ್ದು. ತದನಂತರ ಸಲ್ಲಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿಗಳಿಗಾಗಿ ಸಂಪರ್ಕಿಸಿ:

ಉಪ ನಿರ್ದೇಶಕರ ಕಛೇರಿ,
ಪ್ರವಾಸೋದ್ಯಮ ಇಲಾಖೆ,
ಹೋಟೆಲ್ ಮಯೂರ ಹೊಯ್ಸಳ,
ಜೆಎಲ್‍ಬಿ ರಸ್ತೆ, ಮೈಸೂರು

ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಲು
ಇಲ್ಲಿ ಕ್ಲಿಕ್ ಮಾಡಿ