ಕಾರ್ಯಕ್ರಮಗಳ ವಿವರ | Mysuru Dasara 2019

ಕಾರ್ಯಕ್ರಮಗಳ ವಿವರ

ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ
ಮೈಸೂರು ದಸರಾ ಉತ್ಸವ-2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 ವನ್ನು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 7 ರವರೆಗೆ ಕಾಡಾ ಮೈದಾನದಲ್ಲಿ ಏರ್ಪಡಿಸಲಾಗಿದೆ. ಪುಸ್ತಕ ಮೇಳದಲ್ಲಿ…
ಪಾರಂಪರಿಕ ದಸರಾ
‘ಪಾರಂಪರಿಕ ಆಟಗಳ’ ಸ್ಪರ್ಧೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ದಿನಾಂಕ : 03.10.2019ರಂದು ಬೆಳಗ್ಗೆ 10.00 ಗಂಟೆಗೆ ಪಾರಂಪರಿಕ ಆಟಗಳ ಸ್ಪರ್ಧೆಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸುತ್ತಿದೆ. ವಿವಿಧ ವಯೋಮಾನದವರಿಗೆ ಈ ಕೆಳಕಂಡ ಆಟಗಳ ಸ್ಪರ್ಧೆಗಳನ್ನು…
ದಸರಾ ಜಲ ಕ್ರೀಡೆ
Pedal Boat Enjoy the serenity of the lake as you pedal around at your own pace, take in the fresh air and the scenic beauty of the lake. Children between 0 - 3 years -…
ಯುವ ಸಂಭ್ರಮ
ಯುವ ಸಂಭ್ರಮವು ಯುವಕರಲ್ಲಿ ಜನಪ್ರಿಯವಾದ ಕಾರ್ಯಕ್ರಮ. ರಾಜ್ಯಾದ್ಯಂತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಾರೆ. ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಯುವ ದಸರಾದಲ್ಲಿ ಪ್ರದರ್ಶನ ನೀಡುವ ಅವಕಾಶ ನೀಡಲಾಗುತ್ತದೆ.     17 ರಂದು18 ರಂದು19 ರಂದು20 ರಂದು21 ರಂದು22 ರಂದು23 ರಂದು24 ರಂದು25 ರಂದು26…
ದಸರಾ ವಸ್ತು ಪ್ರದರ್ಶನ
ದಸರಾ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆ ದಸರಾ ವಸ್ತುಪ್ರದರ್ಶನ. ಭಾರತದಾದ್ಯಂತ ವ್ಯಾಪಾರಿಗಳ ಉತ್ಪನ್ನಗಳನ್ನು ವೀಕ್ಷಿಸಲು ಮತ್ತು ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನುಭವಿಸಲು ಇದು ಒಂದು ಉತ್ತಮಾವಕಾಶ. ಆಹಾರ ಮತ್ತು ಹಲವಾರು ಮನರಂಜಕ ಆಟಗಳು ಮತ್ತು ಸವಾರಿಗಳು ಮಕ್ಕಳಿಗೆ ಹಾಗೂ ಹಿರಿಯರಿಗೆ ಸಹ ಆಕರ್ಷಣೆ ನೀಡುತ್ತದೆ. ಸ್ಥಳ :…
ಫಲಪುಷ್ಪ ಪ್ರಧರ್ಶನ
ಮೈಸೂರು ದಸರಾ ಫಲಪುಷ್ಪ ಪ್ರದರ್ಶನವು ಬಹಳ ಜನಪ್ರಿಯ. ಹೂಬಿಡುವ ಸಸ್ಯಗಳ ಅದ್ಭುತವಾದ ಈ ಸಂಗ್ರಹವು ಕಣ್ಮನತಣಿಸುತ್ತದೆ. ಮೈಸೂರಿಗೆ ನಿಮ್ಮ ಭೇಟಿಯ ಸಮಯದಲ್ಲಿ ವರ್ಣರಂಜಿತ ಈ ಆಕರ್ಷಣೆಯನ್ನು ತಪ್ಪದೆ ವೀಕ್ಷಿಸಿ. ಸ್ಥಳ : ನಿಶಾದ್ ಬಾಗ್(ಕುಪ್ಪಣ್ಣ ಪಾರ್ಕ್) ಗೂಗಲ್ ಮ್ಯಾಪ್ ದಿನಾಂಕ : 29-09-2019 ರಿಂದ 09-10-2019 ರವರೆಗೆ ಗ್ಯಾಲರಿ
ದಸರಾ ಚಲನಚಿತ್ರೋತ್ಸವ
ದಸರಾ ಚಲನಚಿತ್ರ ಉತ್ಸವ ಒಂದು ವಿಶಿಷ್ಟ ಕಾರ್ಯಕ್ರಮ. ಚಲನಚಿತ್ರ ಪ್ರಿಯರು ಜನಪ್ರಿಯ ಚಲನಚಿತ್ರಗಳ ವಿಶೇಷ ಪ್ರದರ್ಶನಗಳನ್ನು ವೀಕ್ಷಿಸಬಹುದು. ಚಿತ್ರರಂಗಕ್ಕೆ ಸಂಬಂಧಿತ ಮಾಹಿತಿ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವಿದೆ. ಚಿತ್ರಕಥಾ ಕಾರ್ಯಾಗಾರ ನಿರ್ದೇಶಕರು: ಶ್ರೀ ಪಿ.ಶೇಷಾದ್ರಿ 21 ಸೆಪ್ಪೆಂಬರ್ 2018 ಶನಿವಾರ ಚಿತ್ರಕಥೆಯ ವಿನ್ಯಾಸ ಮತ್ತು ಸಿನಿಮಾ ಭಾಷೆ ಬೆಳಗ್ಗೆ…
ದಸರಾ ಕ್ರೀಡೆ
ದಸರಾ ಕ್ರೀಡಾ ಉತ್ಸವ ಕ್ರೀಡಾ ಉತ್ಸಾಹಿಗಳಲ್ಲಿ ಜನಪ್ರಿಯ ಕಾರ್ಯಕ್ರಮವಾಗಿದ್ದು, ರಾಜ್ಯದಾದ್ಯಂತದಿಂದ ಕ್ರೀಡಾ ಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಮೈಸೂರು ಜಿಲ್ಲಾ ದಸರಾ ತಾಲ್ಲೂಕು ಮಟ್ಟದ ಕ್ರೀಡಾಕೂಟ ಯುವ ಸಭಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯಕ್ತಾಶ್ರಯದಲ್ಲಿ 2019-20ನೇ ಸಾಲಿನ ಮೈಸೂರು ಜಿಲ್ಲೆಯ ಹುಣಸೂರು,…
ಅರಮನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು
ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ದಸರಾ ಉತ್ಸವದ ಅವಿಭಾಜ್ಯ ಅಂಗವಾಗಿದೆ. ಮನೋಹರವಾಗಿ ದೀಪಾಲಂಕಾರಗೊಂಡ ಮೈಸೂರು ಅರಮನೆಯು ಸಂಗೀತದ ಕಾರ್ಯಕ್ರಮಗಳಿಗೆ ಒಂದು ಅದ್ಭುತವಾದ ಹಿನ್ನೆಲೆಯನ್ನು ಒದಗಿಸುತ್ತದೆ. ವಿಶ್ವಮಾನ್ಯ ಕಲಾವಿದರು ಪ್ರೇಕ್ಷಕರನ್ನು ತಮ್ಮ ಸಂಗೀತದಿಂದ ರಂಜಿಸುತ್ತಾರೆ. ಸ್ಥಳ : ಮೈಸೂರು ಅರಮನೆ ಗೂಗಲ್ ಮ್ಯಾಪ್ ದಿನಾಂಕ : 29 ಸೆಪ್ಟೆಂಬರ್ ನಿಂದ 7…
ಆಹಾರ ಮೇಳ
ಮೈಸೂರು ದಸರಾ ಆಚರಣೆಯ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮ ಆಹಾರ ಮೇಳ. ಆಹಾರ ಮೇಳದ ಪ್ರಮುಖ ಅಂಶವೆಂದರೆ ಬುಡಕಟ್ಟು ಆಹಾರ. ಕಾಡಿನಲ್ಲಿ ಸಿಗುವ ವಿವಿಧ ಬೇರುಗಳು ಮತ್ತು ಗೆಡ್ಡೆಗಳಿಂದ ಮಾಡಿದ ಆಹಾರ, ಹಸಿರು ಎಲೆಗಳಿಂದ ಮಾಡಿದ ಭಕ್ಷ್ಯಗಳು, ಬಿದಿರಿನ ಚಿಗುರುಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳು, ‘ಬಿದಿರು ಬಿರಿಯಾನಿ’ ಮತ್ತು…
ದಸರಾ ಕುಸ್ತಿ
ಕುಸ್ತಿ ಪಂದ್ಯಾವಳಿಗಳು ದಿನಾಂಕ 29-9-2019 ರಿಂದ 4-10-2019 ರವರೆಗೆ ಒಟ್ಟು 6 ದಿವಸಗಳ ಕಾಲ ಮೈಸೂರಿನ ದೊಡ್ಡಕೆರೆ ಮೈದಾನದ ಶ್ರೀ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರ ಅಂಗವಾಗಿ ಪ್ರತಿದಿನ ನಾಡಕುಸ್ತಿ ಪಂದ್ಯಾವಳಿಗಳು ಸಂಜೆ 3-30 ಗಂಟೆಯಿಂದ ನಡೆಯುತ್ತದೆ. ಈ ನಾಡಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳ…
ಯುವ ದಸರಾ
ಮಹಾರಾಜ ಕಾಲೇಜಿನ ಮುಂಭಾಗದಲ್ಲಿರುವ ವಿಶಾಲವಾದ ತೆರೆದ ಮೈದಾನವು 'ಯುವ ದಸರಾ' ಆಚರಿಸಲು ಉತ್ಸಾಹದಿಂದ ಜೀವಂತವಾಗುತ್ತದೆ. ಈ ಕಾರ್ಯಕ್ರಮವು ಒಂದು ದೊಡ್ಡ ಕಲಾ ಸಮಾವೇಶವಾಗಿದ್ದು, ಸ್ಥಳೀಯ ಪ್ರತಿಭೆಗಳು, ಪ್ರಸಿದ್ಧ ಸಂಗೀತಗಾರರು ಮತ್ತು ನೃತ್ಯ ತಂಡಗಳೊಂದಿಗೆ ಬೆರೆಯುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಸ್ಥಳೀಯರು ಮತ್ತು ವಿಶ್ವದಾದ್ಯಂತದ ಪ್ರವಾಸಿಗರು ಭಾಗವಹಿಸುತ್ತಾರೆ. ಸ್ಥಳ : ಮಹಾರಾಜಾ…
ಮಹಿಳಾ ಮತ್ತು ಮಕ್ಕಳ ದಸರಾ
ಮಹಿಳಾ ದಸರಾ ಮಹಿಳೆಯರು ಮತ್ತು ಮಕ್ಕಳಿಗಾಗಿ ಆಚರಿಸುವ ದಸರಾ. ಇಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಿಳೆಯರು ಮತ್ತು ಮಕ್ಕಳಿಗಾಗಿ ಆಯೋಜಿಸಲಾಗುವುದು. ಸ್ಥಳ : ಜೆಕೆ ಮೈದಾನ ಗೂಗಲ್ ಮ್ಯಾಪ್ ದಿನಾಂಕ : 30 ಸೆಪ್ಟೆಂಬರ್ - 4 ಅಕ್ಟೋಬರ್ 2019 ಗ್ಯಾಲರಿ
ಯೋಗ ದಸರಾ
ಮೈಸೂರು ಒಂದು ವಿಶ್ವಪ್ರಸಿದ್ಧ ಯೋಗಾ ಕೇಂದ್ರ. ಆಧುನಿಕ ಯೋಗವನ್ನು ಜಗತ್ತಿಗೆ ಕಲಿಸಿದ ನಗರ ಮೈಸೂರು. 'ಮೈಸೂರು ಶೈಲಿ'ಯನ್ನು ವಿಶ್ವದಾದ್ಯಂತ ಗುರುತಿಸಲಾಗಿದೆ. ಯೋಗಾ ದಸರಾ ಅಚಿರಿಸಲು ಯೋಗಾ ತಜ್ಞರು, ಸಾಧಕರು, ಜನ ಸಾಮಾನ್ಯರೆಲ್ಲರೂ ಸಹ ಒಟ್ಟುಗೂಡಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಯೋಗ ದಸರಾ – 2019ರ ಕಾರ್ಯಕ್ರಮಗಳ ವಿವರTo be updatedಸ್ಥಳ…
ರೈತ ದಸರಾ
ಗ್ರಾಮೀಣ ಜನರಿಗೆ ರೈತ ದಸರಾ ಅತ್ಯಂತ ಪ್ರಿಯವಾದದ್ದು. ರೈತರು ಆಧುನಿಕ ಕೃಷಿ ಉಪಕರಣಗಳ ಬಳಕೆಯ ರೀತಿ , ಆಧುನಿಕ ಕೃಷಿ ವಿಧಾನ, ನೈಸರ್ಗಿಕ ಕೃಷಿ ವಿಧಾನ ಇತ್ಯಾದಿಗಳ ಬಗ್ಗೆ ಶಿಕ್ಷಣ ಪಡೆಯಲು ಇದು ಒಂದು ಉತ್ತಮವಾದ ಅವಕಾಶ. ವಿಭಿನ್ನ ಕ್ರೀಡಾಟಗಳನ್ನು ಈ ಸಂದರ್ಭದಲ್ಲಿ ರೈತರಿಗಾಗಿ ಆಯೋಜಿಸಲಾಗುತ್ತದೆ. ಸ್ಥಳ :…
ಲಲಿತಕಲೆ ಮತ್ತು ಕರಕುಶಲ
ದಸರಾ ಆಚರಣೆಯ ಅಂಗವಾಗಿ, ಲಲಿತಕಲಾ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ. ಪ್ರವೇಶ ಅರ್ಜಿಗಾಗಿ : ಇಲ್ಲಿ ಕ್ಲಿಕ್ಕಿಸಿ ಸ್ಥಳ : ಕಲಾಮಂದಿರ ಗೂಗಲ್ ಮ್ಯಾಪ್ ದಿನಾಂಕ : ಅಕ್ಟೋಬರ್ 2 ರಿಂದ 5…
ಕವಿಗೋಷ್ಟಿ
ಮೈಸೂರು ದಸರಾ ಕವಿ ಗೋಷ್ಠಿ ಒಂದು ವಿಶಿಷ್ಟ ವೇದಿಕೆಯಾಗಿದ್ದು, ಕವಿತಾಪ್ರಿಯರು ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸ್ಥಳ : ಜಗನ್ಮೋಹನ್ ಅರಮನೆ ಗೂಗಲ್ ಮ್ಯಾಪ್ ದಿನಾಂಕ : ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರವರೆಗೆ ಗ್ಯಾಲರಿ
ಮೈಸೂರು ದಸರಾ ಮೆರವಣಿಗೆ
ವಿಜಯದಶಮಿಯ ‘ಜಂಬೂ ಸವಾರಿ' ಜಗತ್ತ್ಪ್ರಸಿದ್ಧ. ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಭವ್ಯವಾಗಿ ಅಲಂಕೃತಗೊಂಡ ಆನೆಯ ಮೇಲೆ, ಚಿನ್ನದ ಹೌಡಾದಲ್ಲಿ ಸ್ಥಾಪಿಸಿ, ಮೆರವಣಿಗೆ ಕೊಂಡೊಯ್ಯಲಾಗುತ್ತದೆ. ಈ ಭವ್ಯವಾದ ದೃಶ್ಯವನ್ನು ವೀಕ್ಷಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅನೇಕ ರೋಮಾಂಚಕ ಸ್ತಬ್ಧದೃಶ್ಯಗಳು, ನೃತ್ಯ ಗುಂಪುಗಳು, ಅರಮನೆಯ ಸಾಂಪ್ರದಾಯಿಕ ಬ್ಯಾಂಡ್‌ಗಳು, ಅಲಂಕರಿಸಿದ ಆನೆಗಳು, ಒಂಟೆಗಳು…
ಪಂಜಿನ ಕವಾಯತು
ದಸರಾ ಆಚರಣೆಗಳು ವಿಜಯ ದಶಮಿಯ ರಾತ್ರಿ ಪಂಜಿನಾ ಕವಾಯತು (ಟಾರ್ಚ್‌ಲೈಟ್ ಪೆರೇಡ್) ನೊಂದಿಗೆ ಮುಕ್ತಾಯಗೊಳ್ಳುತ್ತವೆ. ಪುರಾತನ ಕಾಲದಲ್ಲಿ ಈ ಆಚರಣೆಯ ಮೂಲ ಉದ್ದೇಶ ಜನರಲ್ಲಿ ವಿಶ್ವಾಸವನ್ನು ಮೂಡಿಸುವುದು ಮತ್ತು ರಾಜನ ಸೈನ್ಯಾಶಕ್ತಿಯನ್ನು ಪ್ರದರ್ಶಿಸುವುದಾಗಿತ್ತು. ಈಗ, ಈ ಸಂದರ್ಭವು, ಹಿಂದಿನ ಸಂಭ್ರಮಾಚರಣೆಯ ಭವ್ಯತೆಯ ಒಂದು ನೋಟವನ್ನು ನೀಡುತ್ತದೆ. ಕುದುರೆ ಸವಾರಿ…

ವಿಶೇಷ ಕಾರ್ಯಕ್ರಮಗಳು

ದಸರಾ ಹೆಲಿ ರೈಡ್ಸ್
ಹೆಲಿಕಾಪ್ಟರ್‌ ಸವಾರಿಯ ಮೂಲಕ ಸುಂದರ ಮೈಸೂರು ನಗರದ ಪಕ್ಷಿ-ನೋಟವನ್ನು ಸವಿಯಬಹುದು. 10 ನಿಮಿಷಗಳ ಕಾಲಾವಧಿಯ ಹೆಲಿಕಾಪ್ಟರ್ ಸವಾರಿಯಲ್ಲಿ ಲಲಿತ ಮಹಲ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಚಾಮುಂಡಿ ವಿಹಾರ್ ಕ್ರೀಡಾಂಗಣ, KRS ಜಲಾಶಯದ ಹಿನ್ನೀರು ಮತ್ತು ಇತರ ಆಸಕ್ತಿಯ ಸ್ಥಳಗಳನ್ನು ನೋಡಬಹುದು. ಸ್ಥಳ…
ದಸರಾ ವಿಂಟೇಜ್ ಕಾರ್ ರ‍್ಯಾಲಿ
ಮೈಸೂರು ದಸರಾ ಹಬ್ಬದ ಅಂಗವಾಗಿ ದಸರಾ ವಿಂಟೇಜ್ ಕಾರ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಅಪರೂಪದ ಮಾದರಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸುತ್ತವೆ. ಸ್ಥಳ : ಲಲಿತ್ ಮಹಲ್ ಅರಮನೆ ಗೂಗಲ್ ಮ್ಯಾಪ್ ದಿನಾಂಕ : 29 ಮತ್ತು 30 ಸೆಪ್ಟೆಂಬರ್ 2019 ಗ್ಯಾಲರಿ
ದಸರಾ ಮತ್ಸ್ಯಮೇಳ
ಮೈಸೂರು ದಸರಾ ಮತ್ಸ್ಯ ಮೇಳದಲ್ಲಿ ನೀರೊಳಗಿನ ಜೀವನವನ್ನು ನೋಡೋಣ. ಮತ್ಸ್ಯ ಮೇಳವು ದಸರಾ ಉತ್ಸವಗಳ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇಲ್ಲಿ ಅಪರೂಪದ ವರ್ಣರಂಜಿತ ಮೀನುಗಳನ್ನು ಪ್ರದರ್ಶಿಸಲಾಗುತ್ತದೆ. ಸಂದರ್ಶಕರು ಅಮೂಲ್ಯವಾದ ಜ್ಞಾನವನ್ನು ಸಹ ಪಡೆಯಬಹುದು. ಸ್ಥಳ : ಜೆಕೆ ಮೈದಾನ ಗೂಗಲ್ ಮ್ಯಾಪ್ ದಿನಾಂಕ : 1 ರಿಂದ 3…
ದಸರಾ ಪೆಟ್ ಶೋ
ದಸರಾ ಆಚರಣೆಯ ಅಂಗವಾಗಿ, ಸಾಕುಪ್ರಾಣಿ ಪ್ರಿಯರಿಗಾಗಿ 'ಪೆಟ್ ಡಾಗ್ ಶೋ' ನಡೆಸಲಾಗುವುದು. ಸಾಕುಪ್ರಾಣಿ ಪ್ರಿಯರು ತಮ್ಮ ಪೆಟ್ನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಥಳ : ಮೈಸೂರು ವಿಶ್ವವಿದ್ಯಾಲಯ ಹಾಕಿ ಮೈದಾನ ಗೂಗಲ್ ಮ್ಯಾಪ್ ದಿನಾಂಕ : ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಗ್ಯಾಲರಿ
ಚಿತ್ರ ಸಂತೆ ಮತ್ತು ಹಸಿರು ಸಂತೆ
ಒಂದೆಡೆ ಕಲಾವಿದರು ತಮ್ಮ ಸುಂದರವಾದ ಕಲೆಗಳನ್ನು ಪ್ರದರ್ಶಿಸುತ್ತಿದ್ದರೆ, ಇನ್ನೊಂದೆಡೆ ಪ್ರಕೃತಿಯ ಬಣ್ಣಗಳ ಪ್ರದರ್ಶನವನ್ನು ಸಾರುವ ಸಾವಯವ ತರಕಾರಿಗಳು ಮತ್ತು ಹಣ್ಣುಗಳ ಮಳಿಗೆಗಳಿರುತ್ತವೆ. ಸ್ಥಳ ಕೃಷ್ಣರಾಜ ಬೌಲೆವರ್ಡ್ ರಸ್ತೆ ಗೂಗಲ್ ಮ್ಯಾಪ್ ದಿನಾಂಕ 5 ಅಕ್ಟೋಬರ್ 2019 ಗ್ಯಾಲರಿ
ಸಾಂಪ್ರದಾಯಿಕ ಆಟಗಳ ಸ್ಪರ್ಧೆಗಳು
ಪ್ರಾಚೀನ ಆಟಗಳನ್ನು ಸಂರಕ್ಷಿಸಬೇಕಾಗಿದೆ. ಅವುಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಮೈಸೂರು ದಸರಾ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಗಿದೆ. ಸ್ಥಳ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ದಿನಾಂಕ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಗ್ಯಾಲರಿ
ಗಾಳಿಪಟ ಉತ್ಸವ
ದಸರಾ ಗಾಳಿಪಟ ಪ್ರದರ್ಶನವು ಮೈಸೂರಿನ ಆಕಾಶವನ್ನು ವರ್ಣರಂಜಿತ ಬಣ್ಣಗಳಲ್ಲಿ ಹೊದಿಸುವ ಒಂದು ಉತ್ಸವ, ತಮ್ಮ ಗಾಳಿಪಟ ಹಾರಿಸುವ ಕನಸುಗಳಿಗೆ ರೆಕ್ಕೆ ನೀಡುವ ಒಂದು ಅದ್ಭುತ ಅವಕಾಶ ಸ್ಥಳ : ಲಲಿತ್ ಮಹಲ್ ಮೈದಾನ ಗೂಗಲ್ ಮ್ಯಾಪ್ ದಿನಾಂಕ : 12 ಮತ್ತು 13 ಅಕ್ಟೋಬರ್ 2019 ಗ್ಯಾಲರಿ
ಮೈಸೂರು ದಸರಾ ಗ್ರಾವೆಲ್ ಫೆಸ್ಟಿವಲ್
ಮೈಸೂರು ದಸರಾ ಗ್ರಾವೆಲ್ ಫೆಸ್ಟ್ನಲ್ಲಿ ಉನ್ನತ ರೇಸ್ ಕಾರ್ ಚಾಲಕರು ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಸ್ಥಳ : ಲಲಿತ್ ಮಹಲ್ ಮೈದಾನ ಗೂಗಲ್ ಮ್ಯಾಪ್ ದಿನಾಂಕ : ಅಕ್ಟೋಬರ್ 13 ರಂದು ಗ್ಯಾಲರಿ