ಪುನರಾವರ್ತಿತ ಪ್ರಶ್ನೆಗಳು | Mysuru Dasara 2019

ಪುನರಾವರ್ತಿತ ಪ್ರಶ್ನೆಗಳು

ನಿಮಗೆ ದಸರಾ ಸಂಬಂಧಿಸಿದ ಯಾವುದೇ ಮಾಹಿತಿ ಬೇಕೇ?
ದಯವಿಟ್ಟು ನಮ್ಮ ದಸರಾ ಸಹಾಯವಾಣಿಗೆ ಕರೆ ಮಾಡಿ.
ಸಹಾಯವಾಣಿ ಸಂಖ್ಯೆ – ೦೮೨೧-೨೪೪೪೭೭೭
ಮೈಸೂರು ದಸರಾ ಎಂದರೆ ಏನು?
ದಸರಾ ಕರ್ನಾಟಕ ರಾಜ್ಯದ ನಾಡಹಬ್ಬ. ಇದನ್ನು  ನವರಾತ್ರಿ (ನವ-ರಾತ್ರಿ = ಒಂಬತ್ತು ರಾತ್ರಿ) ಎಂದೂ ಕರೆಯಲಾಗುತ್ತದೆ. ಇದು ಹತ್ತು ದಿನಗಳ ಹಬ್ಬವಾಗಿದ್ದು, ಕೊನೆಯ ದಿನ – ವಿಜಯದಶಮಿ, ದಸರೆಯ ಅತ್ಯಂತ ಪವಿತ್ರವಾದ ದಿನ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ
ಮೈಸೂರು ಯಾವ ಯಾವ ವಿಷಯಗಳಿಗೆ ಪ್ರಸಿದ್ಧ?
ಮೈಸೂರು ರೇಷ್ಮೆ ಸೀರೆ (ಮೈಸೂರು ಸಿಲ್ಕ್), ಶ್ರೀಗಂಧದ ಕೆತ್ತನೆಗಳು ಮತ್ತು ಅನೇಕ ಸುವಾಸನಾಯುಕ್ತ ಧೂಪದ್ರವ್ಯ ದಂಡಗಳಿಗೆ ಮೈಸೂರು ಪ್ರಸಿದ್ಧವಾಗಿದೆ. ಮೈಸೂರು ಮಾರುಕಟ್ಟೆ ಸ್ಥಳಗಳಾದ ಅಶೋಕ ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆಗಳಲ್ಲಿ ಇವು ದೊರೆಯುತ್ತವೆ. ದೇವರಾಜ ಅರಸ್ ರಸ್ತೆ,  ಪಾಶ್ಚಾತ್ಯ ಮತ್ತು ಭಾರತೀಯ ಸಾಂಪ್ರದಾಯಿಕ ಶಾಪಿಂಗ್, ಎರಡರ ಮಿಶ್ರಣವನ್ನು ಹೊಂದಿದೆ. ಭಾರತದ ಅತ್ಯುತ್ತಮ ಮಾರುಕಟ್ಟೆ ಅನುಭವ ಪಡೆಯಲು ದೇವರಾಜ ಮಾರುಕಟ್ಟೆಗೆ ಹೋಗಿರಿ. ಇಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ ಎಲ್ಲರು ತಮ್ಮ ದೈನಂದಿನ ಹಣ್ಣು ತರಕಾರಿ ವ್ಯಾಪಾರ ಮಾಡುತ್ತಿರುವುದು ಜೊತೆಗೆ ಸಾಲು ಸಾಲಾಗಿ ಜೋಡಿಸಿರುವ ಹೂವು ಮಾತು ಮಸಾಲೆಗಳನ್ನು ಕಾಣಬಹುದು. ದೇವರಾಜ ಮಾರುಕಟ್ಟೆ ಧನ್ವಂತ್ರಿ ರಸ್ತೆಯಲ್ಲಿದೆ. 
ನಾನು ಮೈಸೂರಿಗೆ ಬರಲು ಯೋಚಿಸುತ್ತಿದೇನೆ. ಬರಲು ಯಾವ ಯಾವ ಸಾರಿಗೆ ಸೌಲಭ್ಯಗಳಿವೆ?

ವಿಮಾನ ಮೂಲಕ : ಮೈಸೂರಿಗೆ ಪ್ರಮುಖ ನಗರಗಳಾದ ಕೊಚ್ಚಿ, ಚೆನ್ನೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ನಿಂದ ವಿಮಾನ ಸೌಲಭ್ಯವಿರುತ್ತದೆ

ರೈಲು ಮೂಲಕ : ಮೈಸೂರು ಜಂಕ್ಷನ್ ನಗರದ ಪ್ರಮುಖ ಸ್ಟೇಷನ್ ಆಗಿದ್ದು, ಬೆಂಗಳೂರು, ಚೆನೈ, ಮುಂಬೈ, ದೆಹಲಿ, ತಂಜಾವೂರು ಮತ್ತಿತರ ಭಾರತೀಯ ನಗರಗಳ ನಡುವೆ ಪ್ರತಿದಿನ ಚಲಿಸುವ ರೈಲುಗಳಿವೆ.

ಬಸ್ ಮೂಲಕ : ಮೈಸೂರು, ನಗರದೊಳಗಿನ ಅಂತರ ನಗರ ಮತ್ತು ಉಪನಗರ ಸಾರ್ವಜನಿಕ ಬಸ್ ಸಾರಿಗೆ ಹೊಂದಿದೆ. ಬೆಂಗಳೂರು ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ಬಸ್ ಹೊರಡುತ್ತದೆ.  ನೀವು ಎ/ಸಿ ಅಥವಾ ನಾನ್- ಎ/ಸಿ  ಗಾಡಿಗಳಲ್ಲಿ  ಯಾವುದಾದರು ಆಯ್ಕೆ ಮಾಡಬಹುದು. ವಾರಾಂತ್ಯಗಳಲ್ಲಿ ಈ ಬಸ್ಗಳು ಸಾಮಾನ್ಯವಾಗಿ ಪೂರ್ಣ ಆದ್ದರಿಂದ ಮುಂಚಿತವಾಗಿ ಸ್ಥಾನವನ್ನು ಕಾಯ್ದಿರಿಸುವುದು ಒಳ್ಳೆಯದು.

ಕಾರ್ ಮೂಲಕ : ಮೈಸೂರು ಮತ್ತು ಬೆಂಗಳೂರು ನೇರ ರಸ್ತೆ ಸಂಪರ್ಕ ಹೊಂದಿವೆ. ಆದರೆ ವೇಗವಾಗಿ ಚಲಿಸುವ ಟ್ರಕ್ ಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ರಾತ್ರಿ ವೇಳೆ, ಹುಷಾರಾಗಿ ಓಡಿಸುವುದು ಒಳ್ಳೆಯದು. ಬೆಂಗಳೂರು ಮತ್ತು ಮೈಸೂರು ನಡುವೆ ಇರುವ 4 ಲೇನ್ ಎಕ್ಸ್ಪ್ರೆಸ್ವೇ 140 ಕಿಮೀ ಪ್ರಯಾಣವನ್ನು, ಸುಮಾರು 2:30 ಗಂಟೆಗಳಲ್ಲಿ  ಮುಗಿಸಲು ಸಹಾಯಕವಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ
0821-2422302
ಮೈಸೂರಿನಲ್ಲಿ ಲಭ್ಯವಿರುವ ಬಸ್ ಸೇವೆಗಳಿಗಾಗಿ
  • KSRTC City Bus Stand : 0821-2425819
  • ಕ. ರಾ.ರ.ಸಾ.ಸಂ ಮೀಸಲಾತಿ : 0821-2443602
  • ಕ. ರಾ.ರ.ಸಾ.ಸಂ ಬಸ್ ನಿಲ್ದಾಣ : 0821-2443490
  • ಕ. ರಾ.ರ.ಸಾ.ಸಂ ಕೌಂಟರ್ : 0821-2423652
  • ಉಪನಗರ / ಗ್ರಾಮೀಣ ಬಸ್ ನಿಲ್ದಾಣ : 0821-2520853
ಮೈಸೂರಿನಲ್ಲಿ ಹೋಟೆಲ್ ಸೌಕರ್ಯ ಹೇಗಿದೆ?

ಹಲವಾರು ಹೋಟೆಲ್ ಗಳು ಹಲವಾರು ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಂದ ಕಾಲ್ನಡಿಗೆಯ ಅಂತರದಲ್ಲಿವೆ.

ಯಾವ ಆಹಾರ ಲಭ್ಯವಿದೆ?

ಸಸ್ಯಾಹಾರಿ ಮತ್ತು ಮಾಂಸಹಾರಿ ಆಹಾರ (ಭಾರತೀಯ ಮತ್ತು ಪಾಶ್ಚಾತ್ಯ) ದೊರೆಯುವ ರೆಸ್ಟೋರಂಟ್ ಗಳು ಮೈಸೂರಿನಲ್ಲಿ ಹಲವಾರು ಕಡೆಗಳಲ್ಲಿವೆ.

ನಗರದಲ್ಲಿ ಓಡಾಡುವುದು ಹೇಗೆ?

ಮೈಸೂರಿನಲ್ಲಿ ವಾಹನದಟ್ಟಣೆ, ಅತ್ಯಂತ ಭಾರತೀಯ ನಗರಗಳಿಗೆ ಹೋಲಿಸಿದರೆ ಅಗ್ಗವಾಗಿದೆ.

  •  ಆಟೋ ರಿಕ್ಷಾಗಳು – ದರ ಮೀಟರ್ ಓದುವ ಮೂಲಕ. ರೈಲ್ವೆ ನಿಲ್ದಾಣ/ಕ. ರಾ.ರ.ಸಾ.ಸಂ  ಬಸ್ ನಿಲ್ದಾಣಗಳಲ್ಲಿ ಪ್ರಿ ಪೇಡ್ ಆಟೋ ಸೌಲಭ್ಯ ಇದೆ. ಕನಿಷ್ಠ ಶುಲ್ಕ – 30.00 ರೂ.
  •  ಪ್ರವಾಸಿ ಕ್ಯಾಬ್ಸ್ – ನೀವು ಇಡೀ ದಿನ ನಗರದ ಪ್ರವಾಸ ಅಥವಾ ಹತ್ತಿರದ ಸ್ಥಳಗಳಿಗೆ ಭೇಟಿ ನೀಡಲು ಬಯಸಿದಲ್ಲಿ ಇದು ನಿಮಗೆ ಅತ್ಯಂತ ಸೂಕ್ತವಾದ ಆಯ್ಕೆ.
  •  ಜಟಕಾ ಗಾಡಿ (ಕುದುರೆ ಗಾಡಿ) ಮೈಸೂರಿನಲ್ಲಿ ಲಭ್ಯವಿದೆ. ಇವುಗಳು ಸ್ವಾತಂತ್ರ್ಯ ಕ್ಕೂ ಮುಂಚಿನ ಹಳೇ ಮೈಸೂರಿನ ಉಳಿದಿರುವ ಕುರುಹುಗಳು. ಒಂದು ಜಟಕಾ ಸ್ಟ್ಯಾಂಡ್ ಅರಮನೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಬಳಿ ಇದೆ. ಸಂಜೆ ಸಮಯ, ಇಡೀ ನಗರ ದೀಪಾಲಂಕಾರದಿಂದ ಸಜ್ಜಾಗಿರುವಾಗ ಜಟಕಾ ಗಾಡಿಯಲ್ಲಿ ಓಡಾಡಿಕೊಂಡು ನಗರ ವೀಕ್ಷಣೆ ಮಾಡಲು ಬಲು ಚಂದ.
ವಿ. ಐ. ಪಿ. ಸೌಲಭ್ಯಗಳುಳ್ಳ ಟಿಕೇಟ್ ದರ ಎಷ್ಟು?

ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು.

ನಾನು ಪ್ರೆಸ್ ಜೊತೆಯಲ್ಲಿದೇನೆ. ನಾನು ಉಚಿತವಾಗಿ ಭಾಗವಹಿಸಬಹುದೆ?

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವಾರ್ತಾ ಭವನ್ ಅವರನ್ನು ಸಂಪರ್ಕಿಸಿ:, 0821-2423251

ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಸಮೀಪವಾಗುವ ಹೋಟೆಲ್ ಗಳು ಯಾವುವು?

ಹೆಚ್ಚಾಗಿ ಕಾರ್ಯಕ್ರಮಗಳು ನಗರದ ಹೃದಯ ಭಾಗದಲ್ಲೇ ನಡೆಯುವುದರಿಂದ ಬಹಳ ಹೋಟೆಲ್ ಗಳು ಕಾಲ್ನಡಿಗೆಯ ದೂರದಲ್ಲೇ ಸಿಗುತ್ತವೆ.

ಟಿಕೇಟ್ ಗಳ ಮಾರಾಟ ಎಂದಿನಿಂದ ಪ್ರಾರಂಭವಾಗುತ್ತದೆ?

ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು.

ಟಿಕೇಟ್ ಗಳ ಮಾರಾಟ ಎಲ್ಲಿ ನಡೆಯುತ್ತಿದೆ?
ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು.

ಯಾವುದೇ ರೀತಿಯ ವಾಹನ ನಿಲುಗಡೆ ಸೌಲಭ್ಯ ಇರುವುದೇ?

ಹೌದು. ಅದರಲ್ಲೂ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ವಾಹನ ನಿಲುಗಡೆ ಸ್ಥಳ ಇರುವುದು.

ಆಸನ ವ್ಯವಸ್ಥೆ ಹೇಗೆ ಮಾಡಲಾಗುವುದು?

ಉಚಿತ ಪ್ರವೇಶವಿರುವ ಕಾರ್ಯಕ್ರಮಗಳಿಗೆ ಕೂರಲು ಆಸನಗಳನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವ್ಯವಸ್ಥೆ ಮಾಡಲಾಗಿದೆ.

ಟಿಕೇಟ್ ಗಳ ಮಾರಾಟ ಮುಗಿದು ಹೋದ ಮೇಲೆ ಯಾವುದೇ ರೀತಿಯ ನಿರೀಕ್ಷಣ ಪಟ್ಟಿ ಇರುವುದೇ?

ಇಲ್ಲ.

ಪಾಲ್ಗೊಳ್ಳುವವರಿಗೆ ಯಾವುದೇ ರೀತಿಯ ವಯಸ್ಸು ಮಿತಿ ಇದೆಯೇ?

ಇಲ್ಲ.

ಕಾರ್ಯಕ್ರಮಗಳು ಯಾವಾಗ ಹೆಚ್ಚಾಗಿ ನಡೆಯುತ್ತವೆ?

ಮಧ್ಯಾಹ್ನ ನಡೆಯುವ ಕೊನೆಯ ದಿನದ ಮೆರವಣಿಗೆ ಹೊರತುಪಡಿಸಿದರೆ ಕಾರ್ಯಕ್ರಮಗಳು ಹೆಚ್ಚಾಗಿ ಸಂಜೆಯ ವೇಳೆ ನಡೆಯುತ್ತವೆ.

ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, ನಾನು ಮಾಹಿತಿಯನ್ನು ಪಡೆಯಬಹುದೇ?

ಹೌದು, ಕಾರ್ಯಕ್ರಮದ ಉಸ್ತುವಾರಿ ಅವರನ್ನು ಸಂಪರ್ಕಿಸಿ.

ನಾನು ಕಾರ್ಯಕ್ರಮಗಳ ಚಿತ್ರಗಳನ್ನು ಅಥವಾ ವೀಡಿಯೋಗಳನ್ನು ತೆಗೆದುಕೊಳ್ಳಬಹುದೇ?

ತೆಗೆದುಕೊಳ್ಳಬಹುದು

ನಾನು ಸಂಗೀತ ರಂಗಕ್ಕೆ ನನ್ನ ವೀಡಿಯೊ ಕ್ಯಾಮೆರಾ / ಕಾಮ್ಕೋರ್ಡರ್ ತರಬಹುದೇ?

ತರಬಹುದು

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಏನು?

ಹತ್ತನೆ ದಿನದಂದು ನಡೆಯುವ ದಸರಾ ಮೆರವಣಿಗೆ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ವಿಶಿಷ್ಟವಾಗಿ ಅಲಂಕೃತಗೊಂಡ ಆನೆಗಳು ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿಟ್ಟುಕೊಂಡು ಮೆರವಣಿಗೆಗೆ ಹೊರಡುತ್ತವೆ.

ಮೆರವಣಿಗೆ ಎಲ್ಲಿಂದ ಆರಂಭವಾಗುತ್ತದೆ?

ಮೆರವಣಿಗೆಯು ಅರಮನೆ ಆವರಣದಿಂದ ಶುರುವಾಗಿ ಪಂಜಿನ ಕವಾಯಿತು ನಡೆಯುವ ಬನ್ನಿಮಂಟಪದ ಮೈದಾನದ ತನಕ ನಡೆಯುತ್ತದೆ.

ಮೆರವಣಿಗೆಯ ನಂತರ ಮುಂದಿನ ಕಾರ್ಯಕ್ರಮ ಏನು?

ದಸರಾ ಮೆರವಣಿಗೆ ನಂತರ, ಬನ್ನಿಮಂಟಪದ ಮೈದಾನದಲ್ಲಿ ಆಕರ್ಷಕ ಪಂಜಿನ ಕವಾಯಿತು (ಟಾರ್ಚ್ ಲೈಟ್ ಪೆರೇಡ್) ಸಂಜೆಗೆ ಪ್ರಾರಂಭವಾಗುತ್ತದೆ.

ದಸರಾ ಮೆರವಣಿಗೆ ನಡೆಯುವ ಮಾರ್ಗವೇನು?

ಅರಮನೆ -> ಆಲ್ಬರ್ಟ್ ವಿಕ್ಟರ್ ರಸ್ತೆ -> ಕೆ. ಆರ್. ವೃತ್ತ -> ಸಯ್ಯಾಜಿ ರಾವ್ ರಸ್ತೆ -> ಬಂಬೂ ಬಜಾರ್ -> ಹೈವೇ ವೃತ್ತ -> ಬನ್ನಿಮಂಟಪ ಮೈದಾನ