ಸೇನಾಪಡೆಗಳ ಪೂರ್ವಭಾವಿ ಪ್ರದರ್ಶನ  

ದಸರಾ ಮಹೋತ್ಸವ 2017 ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆಯ ಏರ್ ಶೊ ನಡೆಸಲು ಸಿದ್ದತೆ ಮಾಡಿಕೊಂಡಿದ್ದು. ಪೂರ್ವಭಾವಿ ಪ್ರದರ್ಶನ ಗುರುವಾರ ಬನ್ನಿಮಂಟಪದ ಪಂಜಿನಕವಾಯತು ಮೈದಾನದಲ್ಲಿ ಆಯೋಜಿಸಲಾಗಿತ್ತು.

ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‍ಗಳು ಆಗಸದಲ್ಲಿ ತಮ್ಮ ಕಸರತ್ತುಗಲನ್ನು ಪ್ರದರ್ಶಿಸಿದರು. ವಾಯುಸೇನೆಯ ಹೆಚ್.ಎ.ಎಲ್ ನಿರ್ಮಿತ ಎ.ಎಲ್.ಎಚ್ ಹೆಲಿಕಾಪ್ಟರ್, ಎಂ.ಐ.17 ಹಾಗೂ ಎಂ.ಐ.17 ವಿ.5 ಹೆಲಿಕಾಪ್ಟರ್ಗಳು ಬಾನಂಗಳದಲ್ಲಿ ಬಿರುಸಿನಿಂದ ಹಾರಾಡಿದವು.

ವಾಯುಸೇನೆಯ 9 ಯೋಧರು ಸ್ಲಿತರಿಂಗ್ ಎಂಬ ಕಾರ್ಯಾಚರಣೆ ಪ್ರದರ್ಶಿಸಿದರು, ಎತ್ತರದಲ್ಲಿ ಹಾರುತಿದ್ದ ಹೆಲಿಕಾಪ್ಟರ್‍ನಿಂದ ನುಣುಪಾದ ಹಗ್ಗವನ್ನು ಕೆಳಗೆ ಬಿಟ್ಟು ಯೋಧರು ಜಾರಿಕೊಂಡು ತಮ್ಮ ಸನ್ನಧ್ದ ಸ್ಥಿತಿಯನ್ನು ಪ್ರದರ್ಶಿಸಿದರು. ವಾಯುಪಡೆಯ ಯೋಧರು ಪೆಟಲ್ ಡ್ರಾಪಿಂಗ್ ಮತ್ತು ಸ್ಕೈ ಡೈವಿಂಗ್ ಎಂಬ ಪ್ರದರ್ಶನಗಳನ್ನು ಮುಖ್ಯ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ.

ಭೂದಳಕ್ಕೆ ಸೇರಿದ ಬೆಂಗಳೂರಿನ 30 ಜನರ ಟರ್ನಾಡೊ ತಂಡ ಬೈಕ್ ಗಳಲ್ಲಿ ಗಡಚಿಕ್ಕುವ ಶಬ್ದದೊಂದಿಗೆ 36 ಬಗೆಯ ಕಸರತ್ತುಗಳನ್ನು ಪ್ರದರ್ಶಿಸಿದರು.  ಮೈದಾನದಲ್ಲಿ ನೃತ್ಯಾಭ್ಯಾಸಕ್ಕೆಂದು ಬಂದಿದ್ದ ಸಾವಿರ ಸಂಖ್ಯೆಯ ಮಕ್ಕಳು ಸಾರ್ವಜನಿಕರು ವಿಕ್ಷಿಸಿ ಸಂಭ್ರಮಿಸಿದರು.

ವಾಯುಪಡೆಯ ಪ್ರಮುಖ ಕಾರ್ಯಕ್ರಮ ನಾಳೆ (ಶುಕ್ರವಾರ) ಬೆಳಗ್ಗೆ 11.30 ಕ್ಕೆ ಪ್ರಾರಂಭವಾಗಲಿದ್ದು, ಪ್ರವೇಶ ಉಚಿತವಾಗಿರುತ್ತದೆ.

25-09-2017 ರಂದು 3ನೇ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ

ಮೈಸೂರು ದಸರಾ ಮಹೋತ್ಸವ 2017ರ ಅಂಗವಾಗಿ ಕುಸ್ತಿ ಉಪಸಮಿತಿ ವತಿಯಿಂದ 3ನೇ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಯನ್ನು ದಿ.25-9-2017 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣ, ದೊಡ್ಡಕೆರೆ ಮೈದಾನ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು ಇಲ್ಲಿ ಆಯೋಜಿಸಲಾಗಿದೆ. ವಿವರಗಳು ಈ ಕೆಳಗಿನಂತಿರುತ್ತದೆ.

ಪುರುಷರ ಪಂಜ ಕುಸ್ತಿ ಪಂದ್ಯಾವಳಿಯ ವಿವರ.
ಪುರುಷರ ಕುಸ್ತಿ ಪಂದ್ಯಾವಳಿಗಳು ಒಟ್ಟು 11 ತೂಕ/ವಿಭಾಗದಲ್ಲಿ ನಡೆಯಲಿದೆ.

 • ತೂಕದ ವಿವರ 55 ಕೆ.ಜಿ, 60, 65, 70, 75, 80, 85, 90, 100, 110 ಮತ್ತು 110 ಕೆ.ಜಿ. ಮೇಲ್ಪಟ್ಟು.
 • ಪುರುಷ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪಂಜ ಕುಸ್ತಿ ಪಟುವಿಗೆ ಮೈಸೂರು ದಸರಾ ಶ್ರೀ 2017ರ ಪ್ರಶಸ್ತಿಯನ್ನು ನೀಡಲಾಗುತ್ತದೆ.
 • ಎಲ್ಲಾ ವಿಜೇತರಿಗೆ ಮೆಡಲ್ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಯ ವಿವರ.

 • ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ಒಟ್ಟು 7 ತೂಕ/ವಿಭಾಗದಲ್ಲಿ ನಡೆಯಲಿದೆ.
 • ತೂಕದ ವಿವರ 50 ಕೆ.ಜಿ, 66, 60, 65, 70, 80 ಮತ್ತು 80 ಕೆ.ಜಿ. ಮೇಲ್ಪಟ್ಟು.
 • ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಮಹಿಳಾ ಪಂಜ ಕುಸ್ತಿ ಪಟುವಿಗೆ ಚಾಮುಂಡೇಶ್ವರಿ 2017ರ ಪ್ರಶಸ್ತಿಯನ್ನು ನೀಡಲಾಗುತ್ತದೆ.
 • ಎಲ್ಲಾ ವಿಜೇತರಿಗೆ ಮೆಡಲ್ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
 • ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ಆಧಾರ್‍ಕಾರ್ಡ್ ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಆಯೋಜಕರಿಗೆ ಸಲ್ಲಿಸತಕ್ಕದ್ದು.
 • ದಿನಾಂಕ 25-9-2017 ರಂದು ಬೆಳಿಗ್ಗೆ 8 ರಿಂದ ತೂಕ ತೆಗೆಯುವ ಕಾರ್ಯವನ್ನು ನಡೆಸಲಾಗುತ್ತದೆ.

ಆಸಕ್ತ ಪಂಜ ಕುಸ್ತಿ ಸ್ಪರ್ಧಾಳುಗಳು ತಮ್ಮ ಹೆಸರು, ವಿಳಾಸ, ಸ್ಪರ್ಧಿಸುತ್ತಿರುವ ತೂಕದ ವಿವರ, ದೂರವಾಣಿ ಸಂಖ್ಯೆ, ಇಮೇಲ್ ಇತ್ಯಾದಿ [ಅರ್ಜಿ ನಮೂನೆಗೆ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವುದು] ವಿವರಗಳೊಂದಿಗೆ ದಿನಾಂಕ 24-9-2017ರ ಒಳಗೆ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿ, ಮೈಸೂರು ದಸರಾ ಮಹೋತ್ಸವ 2017, ಸಾರ್ವಜನಿಕ ಸಂಪರ್ಕಾಧಿಕಾರಿ, ಕಾವೇರಿ ನೀರಾವರಿ ನಿಗಮ ನಿಯಮಿತ, ಕಾವೇರಿ ಭವನ ಸಂಕೀರ್ಣ, ಗೋಕುಲಂ, 4ನೇ ಹಂತ, ಯಾದವಗಿರಿ ಅಂಚೆ, ಮೈಸೂರು 20 ಫೋನ್ 0821-6554955, 2412101, ಫ್ಯಾಕ್ಸ್ 0821-2414191 ಇ ಮೇಲ್ : wrestlingsubcommittee@gmail.com

ವೆಬ್ಸೈಟ್ : www.mysoredasara.gov.in ಅಥವಾ ಶ್ರೀ ಕೆ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪಂಜ ಕುಸ್ತಿ ಸಂಘ, # 1204, ಎಲ್‍ಐಜಿ-1, 3ನೇ ಕ್ರಾಸ್, 4ನೇ ಮೇನ್, ಕಲ್ಯಾಣಗಿರಿ, ಮೈಸೂರು ಮೊ. 7795803629, 9901229166 ಇಮೇಲ್ : kvishwanath.kaf@gmail.com

ಅರಮನೆಯಲ್ಲಿ ಸಂಗೀತ ನೃತ್ಯ‌ ತರಂಗ

ಮೈಸೂರು ಅರಮನೆಯ ಭವ್ಯ ಬೆಳಕಿನ ಲೋಕದಲ್ಲಿ ಸಂಗೀತದ‌ಝರಿ ಹರಿಯಿತು. ಮೈಸೂರು ದಸರಾ ಮಹೋತ್ಸವದ‌  ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆ ಅರಮನೆ ವೇದಿಕೆಯಲ್ಲಿ ಸಿತಾರ್, ಸಾರಂಗಿ ಸಿತಾರ್ ಜುಗಲ್ಬಂದಿ ಸಂಗೀತ ರಸಿಕರ ಮನಸೂರೆಗಂಡಿತು.

ಪಂಡಿತ್ ಅಂಕುಶ್ ನಾಯಕ್, ಉಸ್ತಾದ್ ಫಯಾಜ್ ಖಾನ್ ಮತ್ತು ಉಸ್ತಾದ್ ರಫಿಕ್‌ಖಾನ್ ಅವರು ತಮ್ಮ ಸಂಗೀತ ಪರಿಮಳವನ್ನು ಅರಮನೆಯ ಎಲ್ಲಡೆ ಹರಡಿದರು.

ಖ್ಯಾತ ಹಿಂದೂಸ್ಥಾನಿ ಸಂಗೀತ ಮೇರು ಪ್ರತಿಭೆ , ಕಿರಾನಾ ಘರಾನ ಪ್ರಕಾರಗಳನ್ನು ಸುಲಲಿತವಾಗಿ ಹಾಡಬಲ್ಲ ಪಂಡಿತ್ ಎಂ.ವೆಂಕಟೇಶ್ ಕುಮಾರ್‌  ಅವರು ಹಿಂದೂಸ್ತಾನಿ ಸಂಗೀತದ‌ ಹೊನಲು ಹರಿಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನ‌ಲ್ಲಿ‌ ದಸರಾ ಮಹೋತ್ಸವ ಪುಟಿಯಿತಿದೆ,  ಶುಕ್ರವಾರ ಚಿಕ್ಕಗಡಿಯಾರದ ಮುಂದೆ ನಡೆದ ಗುಜರಾತ್ ಡಾಂಗಿ ನೃತ್ಯ  ಸಭೀಕರನ್ನು ರಂಜಿಸಿತು.

ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದ ಗುಜರಾತ್‌ ಕಲಾವಿದರು ತಮ್ಮ ನಾಡಿನ ಜನಪದ ಸೊಗಡನ್ನು ವಿಕ್ಷಕರು‌‌‌‌ ಪುಳಕಿತರಾಗುವಂತೆ ಮಾಡಿತು.

ರೈತರ ಸುಗ್ಗಿ ನೆನಪಿಸಿದ ನೃತ್ಯ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದ‌‌‌ ತೆಲಂಗಾಣ ಕಲಾವಿದರು ಸುಗ್ಗಿಯ ಸಂಧರ್ಭದಲ್ಲಿ ಮೂಡುವ ಆನಂದವನ್ನು ನೃತ್ಯದ ಮೂಲಕ ಪರಿಚಯಿಸಿದರು.

ಉತ್ತರ ಪ್ರದೇಶದ‌ ಅಶೋಕ್‌ ತ್ರಿಪಾಟಿ ಮತ್ತು ತಂಡದವರು ಉತ್ತರ ಪ್ರದೇಶದಲ್ಲಿ ಸಂತಸದ ನಟವರಿ‌ ನೃತ್ಯ ವಿಶೇಷವಾಗಿ ಗೋಪಿಕಾ‌‌ ಪ್ರಸಂಗವನ್ನು ಜನತೆಗೆ ವಿಶಿಷ್ಟ ರೀತಿಯಲ್ಲಿ ಮನಮುಟ್ಟುವಂತೆ ಜಗನೋಹನ ಅರಮನೆಯ‌‌ ಸಾಂಸ್ಕ್ರತಿಕ ವೇದಿಕೆಯಲ್ಲಿ  ವಾದ್ಯ ಸಂಗೀತದ‌ ಮೇಳದೊಂದಿಗೆ ಪ್ರಸ್ತುತ ಪಡಿಸಿದರು.  ಕಲಾಮಂದಿರದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ‌ ಕಲಾವಿದರು ದಾಸರು ಹಾಡಿದ  ಪದಗಳಿಗೆ ಭರತನಾಟ್ಯ ರೂಪಕದ‌ ಸ್ಪರ್ಶನೀಡಿ ನೆರೆದಿದ್ದವರನ್ನು ರಂಜಿಸಿದರು.

ದಸರಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ

ದಸರಾ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಎಂ.ರೇವಣ್ಣ ಹಾಗೂ ಕೆ.ಎಸ್.ಆರ್.ಟಿ.ಸಿ.ವಿಆಗೀಯ ನಿಯಂತ್ರಣಾಧಿಕಾರಿ ವಾಸು ಸೇರಿದಂತೆ ಭಾಗಿ.

ಒಟ್ಟು ನಾಲ್ಕು ಪ್ಯಾಕೇಜ್ ಗಳಲ್ಲಿ ಪ್ರವಾಸಿ ತಾಣಗಳ ದರ್ಶನ ದಸರಾ ದರ್ಶನ, ದೇರ್ಸಿನಿ, ಜಲ ದರ್ಶಿನಿ ಗಿರಿದರ್ಶನಿ ಪ್ಯಾಕೇಜ್ ಗಳ ಆಯೋಜನೆ.

 • ದಸರಾ ದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಕಾರ್ಯಕ್ರಮಗಳಿಗೆ ಭೇಟಿ ಮೈಸೂರು ಕೊಡಗು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ೧೭೪ ಆಯ್ದ ಪಾನುಭವಿಗಳಿಗೆ ಮಾತ್ರ ಕೇವಲ ೫೦ರೂಗಳ ರಿಯಾಯಿತಿ ಪಾಸ್ ನಲ್ಲಿ ದಸರಾ ದರ್ಶನ.
 • ಗಿರಿದರ್ಶಿನಿ. ಪ್ಯಾಕೇಜ್ ನಲ್ಲಿ ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ ಭೇಟಿ, ವಯಸ್ಕರರಿಗೆ ೩೪೦ ಮಕ್ಕಳಿಗೆ ೧೭೫ ರೂಗಳಲ್ಲಿ ಗಿರಿದರ್ಶಿನಿ ಸೌಲಭ್ಯ.
 • ಜಲದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ಗೋಲ್ಡನ್ ಟೆಂಪಲ್, ದುಬಾರೆ, ನಿಸರ್ಗದಾಮ, ಅಬ್ಬಿಪಾಲ್ಸ್ ರಾಜಾಸ್ಟ್ರೀಟ್, ಹಾರಂಗಿ ಮತ್ತು ಕೆಅರ್ ಎಸ್ ಜಾಶಯಗಳ ದರ್ಶನ ವಯಸ್ಕರರಿಗೆ೩೭೪,ಮಕ್ಕಳಿಗೆ ೧೮೦ರು ದರ ನಿಗದಿ.
 • ದೇವದರ್ಶಿನಿ ಪ್ಯಾಕೇಜ್ ಅಡಿಯಲ್ಲಿ ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮಾಥಪುರ, ಕೆಆರ್ ಎಸ್ ದರ್ಶನ, ವಯಸ್ಕರಿಗೆ೨೮೫, ಮಕ್ಕಳಿಗೆ ೧೪೦ರೂ ಪ್ರಯಾಣ ದರ

ದಸರಾ ದರ್ಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ಕಿಸಿ

ರೈತ ದಸರಾ ಉಧ್ಘಾಟನೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಆಯೋಜಿಸಿದ್ದು, ಜೆ.ಕೆ.ಮೈದಾನದಲ್ಲಿ ರೈತರ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಜಿ.ಕೆ.ವಿ.ಕೆ.ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಶಿವಣ್ಣ ರೈತರ ವಸ್ತು ಪ್ರದರ್ಶನವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ನಂತರ ಎಲ್ಲಾ ಮಳಿಗೆಗಳನ್ನು ವೀಕ್ಷೀಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾಸುಲ್ತಾನ್ ರವರು  ಹೊಂಬಳೆಯನ್ನು ಬಿಡಿಸಿ ಹೂ ಅರಳಿಸುವುದರ ಮೂಲಕ
ರೈತ ದಸರಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ರೇಷ್ಮೇ ಇಲಾಖೆ,ಅರಣ್ಯ ಇಲಾಖೆಯಲ್ಲಿ ಸಾಧನೆ ಮಾಡಿದ ರೈತರಿಗೆ ರೈತ ದಸರಾ ಉಪಸಮಿತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷ ಕೆ.ಎಂ.ಸೋಮಸುಂದರ್, ಸದಸ್ಯ ಕಾರ್ಯದರ್ಶಿ ಡಾ.ಪಿ.ಎಂ.ಪ್ರಸಾದ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಿಂಗಲ್ ಟಿಕೇಟ್ ಪ್ರವಾಸಿಗರಿಗೆ ಲಭ್ಯ

ವಿಶ್ವ ವಿಖ್ಯಾತ ದಸರಾ‌ ಮಹೋತ್ಸವದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮೊದಲಿಗೆ ಸಿಂಗಲ್ ಟಿಕೇಟ್ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದ್ದು ಸೆಪ್ಟೆಂಬರ್ ೨೨ ರಿಂದ ಸೆಪ್ಟೆಂಬರ್ ೩೦ ರ‌ವರೆಗೆ ಪ್ರವಾಸಿಗರು ಅವಕಾಶ ಬಳಸಿಕೊಳ್ಳ ಬಹುದಾಗಿದೆ.

ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಿ. ರಂದೀಪ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿಗಳು ಮಾತನಾಡಿ ಈ ವ್ಯವಸ್ಥೆ ಆಧುನಿಕ ಕ್ಯೂಅರ್ ಕೋಡ್ ಇರುತ್ತದೆ. ಈ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚೆ‌ಆಗಿತ್ತು ಅದರಂತೆ ಸಿಂಗಲ್ ಟಿಕೇಟ್ ವ್ಯವಸ್ಥೆ ಜಾರಿಮಾಡಲಾಗಿದೆ. ಪ್ರವಾಸಿಗರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ ಎಂದು ತಿಳಿಸಿದರು.

ಶುಕ್ರವಾರದಿಂದಲೇ ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡೇಶ್ವರಿ ದೇವಾಲಯ , ಕೆ.ಆರ್. ಎಸ್. ಹಾಗೂ ರಂಗನತಿಟ್ಟು ಪ್ರವಾಸಿ ತಾಣಗಳಿಗೆ‌ ಪ್ರವೇಶ ಪಡೆಯಬಹುದಾಗಿದೆ. ಪ್ರವಾಸಿಗರು ಬುಕ್‌ಮೈ ಶೋ‌ ವೆಬ್ ನ ಮೂಲಕ ಆನ್ ಲೈನ್ ನಲ್ಲಿ‌ಪಡೆಯಬಹುದಾಗಿದೆ.
ಪ್ರವಾಸಿಗರು ಟಿಕೇಟ್ ಖರೀದಿ ಮಾಡಿದ ೧೫ ದಿನಗಳ ವರೆಗೆ ಯಾವಾಗ ಬೇಕಾದರು ಬೇಟಿ ನೀಡಬಹುದಾಗಿದೆ.

 

ಪ್ಯಾಲೇಸ್ ಆನ್ ವ್ಹೀಲ್ಸ್

ಮೈಸೂರು ಅರಮನೆಗಳ ಬೀಡು, ಪ್ರವಾಸೋದ್ಯಮ ಇಲಾಖೆ ದಸರಾ ಮಹೋತ್ಸವದ ಅಂಗವಾಗಿ ಗಾಲಿಗಳ ಮೇಲೆ‌ ಅರಮನೆ ( ಪ್ಯಾಲೇಸ್ ಆನ್ ವ್ಹೀಲ್ಸ್) ಕಾರ್ಯಕ್ರಮವನ್ನು ಸಾರಿಗೆ ಸಚಿವರಾದ ಎಚ್. ಎಂ. ರೇವಣ್ಣ ಅವರು ಅರಮನೆ ಉತ್ತರ ದ್ವಾರದ ಸೆಪ್ಟಂಬರ್ ೨೨ ರಂದು ಬೆಳಗ್ಗೆ ೯-೩೦ ಕ್ಕೆ ಉದ್ಘಾಟನೆ ಮಾಡಿದರು. ಮಹಾಪೌರರಾ ಎಂಜೆ. ರವಿಕುಮಾರ್ ಅವರು ಉಪಸ್ಥಿತರಿದ್ದರು.

ಗಾಲಿಗಳ ಮೇಲೆ‌ಅರಮನೆ ಕಾರ್ಯಕ್ರಮ ಪ್ರವಾಸಿಗರಿಗೆ ಮೈಸೂರಿನ ಅರಮನೆಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಪರಿಚಯಿಸಲಿದೆ. ಈ ವಿನೂತನವಾದ ಕಾರ್ಯಕ್ರಮಕ್ಕೆ ಎರಡು ಹವಾನಿಯಂತ್ರಿತ ಬಸ್ ಗಳನ್ನು ಬಳಸಲಾಗುತ್ತಿದೆ. ಬೆಳಗ್ಗೆ ಅಂಬಾವಿಲಾಸ‌ ಅರಮನೆಯಿಂದ ಪ್ರವಾಸ ಆರಂಭಿಸಿ ಮಧ್ಯಾಹ್ನ ಲಲಿತ ಮಹಲ್ ಅರಮನೆಯಲ್ಲಿ ಊಟದ ವ್ಯವಸ್ಥೆ ಯೊಂದಿಗೆ ರಾತ್ರಿ ಮತ್ತೆ ಅಂಬಾವಿಲಾಸ ಅರಮನೆ ಬಳಿ‌ಪ್ರವಾಸ ಮುಗಿಯಲಿದೆ. ಓಟ್ಟು ಪ್ರವಾಸದಲ್ಲಿ ೮ ಪ್ರಮುಖ ಸ್ಥಳಗಳನ್ನು ಪರಿಚಯಿಸಲಾಗುವುದು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನುರಿತ ಪ್ರವಾಸಿ ಮಾರ್ಗದರ್ಶಿಗಳು ಪಾರಂಪರಿಕ‌ ಕಟ್ಟಡಗಳ ಮಾಹಿತಿ ನೀಡಲಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೆಶಕರಾದ ಹೆಚ್.ಪಿ. ಜನಾರ್ಧನ್ ಅವರು ಮಾಹಿತಿ ನೀಡುತ್ತ ಈ ವಿಶೇಷ ಪ್ರವಾಸ ಮಾಡಲು ಪ್ರತಿಯೊಬ್ಬ ಪ್ರವಾಸಿಗರಿಗೆ ರೂ ೯೯೯/- ನಿಗಧಿಪಡಿಸಲಾಗಿದೆ. ಸೆಪ್ಟಂಬರ್ ೨೨ ರಿಂದ ಅಕ್ಟೋಬರ್ ೨ ರವರೆಗೂ ಗಾಲಿಗಳ ಮೇಲೆ‌ಅರಮನೆ‌ ಮುಂದುವರಿಯಲಿದೆ ಎಂದು‌ ತಿಳಿಸಿದರು.

ಇದರೊಂದಿಗೆ ಸಚಿವರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಏಕ ರೂಪದ ಟಿಕೇಟಿಂಗ್ ವ್ಯವಸ್ಥೆಗೂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಓದುಗರಿಗೆ ತೆರೆದುಕೊಂಡ ಪುಸ್ತಕ ಮೇಳ

ಮೈಸೂರು ದಸರಾ ಮಹೋತ್ಸವದ ಬಾಗವಾಗಿ ಕನ್ನಡ ಪುಸ್ತಕ ಪ್ರಧಿಕಾರ ನಗರದ ಕಾಡಾ ಕಚೇರಿ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕ್ರತಿ ಸಚಿವರಾದ ಉಮಾಶ್ರೀ ಅವರು ಉದ್ಘಾಟಿಸಿದರು.

ಸಚಿವರು ಪ್ರತಿಯೊಂದುಮಳಿಗೆಗಳಿಗೆ ಭೇಟಿ ನೀಡಿ‌ ಪುಸ್ತಕಗಳನ್ನು ಕುತೂಹಲದಿಂದ ವೀಕ್ಷಿಸಿದರು ಹಾಗೂ ಸಚಿವರು ಖ್ಯಾತ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರು ಸಂಪಾದಿಸಿರುವ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ ಪುಸ್ತಕವನ್ನು ರೂ ೮೦೦/- ಕೊಟ್ಟು ಖರೀದಿ ಮಾಡಿದರು.

ಸಚಿವರು ಮಾತನಾಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪುಸ್ತಕಗಳನ್ನು ಹೊರತರುವ ಮೂಲಕ ಹಾಗೂ ತಾಂತ್ರಿಕವಾಗಿ ಸಿದ್ದಪಡಿಸಿರುವ “ಕಣಜ” ಅಗಾದ ವಿಷಯವಸ್ತುವನ್ನು ಜನತೆಗೆ ಒದಗಿಸಿದೆ. ಮೊಬೈಲ್ ಆಪ್ ನ ಮೂಲಕ ಕೂಡ ಓದಲು ಲಭ್ಯವಿದೆ ಎಂದು ತಿಳಿಸಿದರು ನಂತರ ಲೇಖಕಿ ಕವಿತಾ ರೈ ಅವರ ” ಕಥನ ರಾಜಕಾರಣ” ಮತ್ತು ” ನಾಟಿ ಓಟ- ಕೊಡಗಿನ ಕಥೆಗಳು” ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರ ಭೂಪತಿ ಅವರು ಮಾತನಾಡಿ ಮೇಳ ದಲ್ಲಿ ಮೊದಲ ಬಾರಿ ರಚನಾತ್ಮಕ ಚಟುವಟಿಕೆಗಳಾದ ಕವಿಗೋಷ್ಠಿ, ವಿಚಾರ ಸಂಕಿರಣ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೆಶಕರಾದ ಎನ್.ಆರ್. ವಿಶುಕುಮಾರ್, ಪ್ರಧಿಕಾರದ ಅಧ್ಯಕ್ಷರಾದ ಡಾ.ವಸುಂಧರ ಭೂಪತಿ ಹಾಗೂ ಲೇಖಕಿ ಕವಿತಾ ರೈ ಅವರು‌ ಉಪಸ್ಥಿತರಿದ್ದರು.

ಪುಸ್ತಕ ಮೇಳದಲ್ಲಿ ೫೧ ಪುಸ್ತಕ ಮಳಿಗೆಗಳು ಇದ್ದು, ಏಳು ಸರ್ಕಾರದ ಅಂಗ ಸಂಸ್ಥೆ ಗಳು, ಕರ್ನಾಟಕ ಜನಪದ ವಿಶ್ವವಿದ್ಯಾಲಯವು ಪುಸ್ತಕ ಮಳಿಗೆ ತೆರದಿದೆ. ಮುದೋಳ, ಶಿರಸಿ, ಬಂಟ್ವಾಳ, ಮೈಸೂರು ಮತ್ತು ಬೆಂಗಳೂರಿನ ಪ್ರಕಾಶಕರು ಭಾಗವಹಿಸಿದ್ದಾರೆ.

ಪುಸ್ತಕ ಮೇಳ ಬೆಳಗ್ಗೆ ೧೦-೩೦ ರಿಂದ ರಾತ್ರಿ ೮ ಗಂಟೆವರೆಗೂ ತರೆದಿರುತ್ತದೆ. ಪುಸ್ತಕ ಪ್ರಮೀಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ದಸರಾ ಕ್ರೀಡಾಕೂಟ ಉಧ್ಘಾಟನೆ

ಕ್ರೀಡಾಪಟುಗಳಿಗೆ ಭವಿಷ್ಯ ರೂಪಿಸಿಕೊಡಲು ಶೀಘ್ರದಲ್ಲಿಯೇ ಕ್ರೀಡಾ ನೀತಿಯನ್ನು ರೂಪಿಸಲಾಗುವುದು ಎಂದು ಕ್ರೀಡಾ ಹಾಗೂ ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ತಿಳಿಸಿದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿ ಬಲೂನ್ ಹಾರಿ ಬಿಡುವ ಮೂಲಕ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಕ್ಯಾಶ್ ಅವಾರ್ಡ್, ಮತ್ತು ಅವರಿಗೆ ನೀಡುವಂತಹ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲಾಗುವುದು ಎಂದು ಘೋಷಿಸಿದರು.

ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 25,000ರೂ, ಬೆಳ್ಳಿ ಪದಕ ಪಡೆದವರಿಗೆ 15ಸಾವಿರ ರೂ, ಕಂಚಿನ ಪದಕ ಪಡೆದವರಿಗೆ 10ಸಾವಿರ ರೂ.ನಗದು ನೀಡಲಾಗುವುದು. ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದವರನ್ನು ರಾಜ್ಯ ಹಾಗೂ ಕೇಂದ್ರಮಟ್ಟದಲ್ಲಿಯೂ ಗುರುತಿಸುವಂತೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚೆಸ್ ನಲ್ಲಿ ಸಾಧನೆಗೈದ ಮೈಸೂರಿನ  ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜ್ ಕುಮಾರ್ ಗೆ 10 ಲಕ್ಷ ರೂ. ಘೋಷಣೆ ಮಾಡಿದರಲ್ಲದೇ, ಅಂತಾರಾಷ್ಟ್ರೀಯ ಮಹಿಳಾ  ಕ್ರಿಕೆಟ್ ಆಟಗಾರ್ತಿಯರಾದ  ವೇದ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರಿಗೆ ತಲಾ 25 ಲಕ್ಷ ರೂ. ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಈ ಮೂವರನ್ನೂ ಸನ್ಮಾನಿಸಲಾಯಿತು. ಚಾಮುಂಡಿ ಬೆಟ್ಟದಿಂದ ಡಾ.ಎಂ.ಪಿ.ವರ್ಷ ಹಾಗೂ ಕುಮಾರಸ್ವಾಮಿ ತಂಡದವರು ತಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸಲಾಯಿತು. 30 ಜಿಲ್ಲೆಗಳಿಂದ ಬಂದ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭ ಮೈಸೂರು ದಸರಾ ಕ್ರೀಡಾ ಕೂಟ ಉಪಸಮಿತಿ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಸತೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಹಿಳಾ ದಸರಾ ಉದ್ಘಾಟನೆ

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ಮಹಿಳಾ ಮತ್ತು ಮಕ್ಕಳ ದಸರಾವನ್ನು ಸಚಿವೆ ಉಮಾಶ್ರೀರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಇದಕ್ಕೂ ಮುನ್ನಾ ಮಹಿಳಾ ಉದ್ಯಮಿಗಳು ಹಾಗೂಸ್ತ್ರೀ ಶಕ್ತಿ  ಸ್ವ ಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ವನ್ನು ಟೇಪ್ ಕತ್ತರಿಸಿ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿದರು.

ಒಟ್ಟು 47 ಮಳಿಗೆ ಇದ್ದು ಸಚಿವೆ ಉಮಾಶ್ರೀರವರು ಪ್ರತಿ ಮಳಿಗೆಯನ್ನು ವೀಕ್ಷೀಸಿದರು.ಇದೇ ಸಂದರ್ಭ ಸಚಿವೆ ಉಮಾಶ್ರೀರವರು ಮಾತನಾಡಿ ಮಹಿಳೆಯರಿಗೆ ಈ ಮಹಿಳಾ ದಸರಾ ವಿಶೇಷ ವೇದಿಕೆವಾಗಿದೆ.

ಈ ದಸರಾದಲ್ಲಿ ಪ್ರತಿಯೊಬ್ಬ ಮಹಿಳೆಗೂ ಕೂಡ ತನ್ನದೇ ಆದ ಪ್ರತಿಭೆ,ಚಿಂತನೆ, ಚಟುವಟಿಕೆಗಳು ಈ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ. ಕಳೆದ ಐದು ವರ್ಷಗಳಿಂದ ಈ ಮಹಿಳಾ ಮತ್ತು ಮಕ್ಕಳ ದಸರಾವನ್ನು ನಡೆಸಿಕೊಂಡು ಬರುತ್ತಿದೆ. ಮಹಿಳೆಯರು ಜೀವನದ ಎಲ್ಲಾ ಮಟ್ಟದಲ್ಲಿಯೂ ಅನುಸರಿಸುವ ವಿಚಾರ ಸಂಕಿರಣ ಈ ದಸರಾದಲ್ಲಿ ನಡೆಯಲಿದೆ. ಮಹಿಳೆಗೆ ಇನ್ನೂ ಕೂಡ ಸಮಾನತೆ ಸಿಕ್ಕಿಲ್ಲ. ನಾವು ಗಟ್ಟಿಯಾಗಿದ್ದಾರೆ ಎಲ್ಲಾವನ್ನೂ ಸಾಧಿಸಬಹುದು ಎಂದು ನೆರೆದಿದ್ದ ಮಹಿಳೆಯರಿಗೆ ಒಂದಿಷ್ಟು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾದ ಅಧ್ಯಕ್ಷೆ ಲತಾ ಮೋಹಾನ್, ರಾಧಾಮಣಿ, ಉಪಾಧ್ಯಕ್ಷರು ರಾಣಿಪ್ರಭಾ, ಸುಶೀಲಾ ಮರಿಗೌಡ, ಭಾರತೀ ಶಂಕರ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.